ಎಟಿಎಂ ಕಾರ್ಡ್ ಪಿನ್ ನಂಬರ್ ಮರೆತುಹೋಗಿದ್ದೀರಾ? ಬ್ಯಾಂಕ್‌ಗೆ ಹೋಗಬೇಕಾದ ಅಗತ್ಯ ಇಲ್ಲದೆ ಈ 6 ಸ್ಟೆಪ್ಸ್ ಫಾಲೋ ಆಗಿ.!

ಇಂದು ಕ್ರೆಡಿಟ್ ಕಾರ್ಡ್‌ಗಳು ಹೇಗೋ ಏನೋ ಡೆಬಿಟ್ ಕಾರ್ಡ್‌ಗಳು ಮಾತ್ರ ಎಲ್ಲರ ಬಳಿ ಇರುತ್ತವೆ. ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇರುವುದರಿಂದ ಎಟಿಎಂ ಕಾರ್ಡ್‌ಗಳು ಬಹಳಷ್ಟು ಮಂದಿ ಕೈಲಿ ಕಾಣಿಸುತ್ತಿರುತ್ತವೆ. ಇದರಿಂದ ಅನೇಕ ಕೆಲಸಗಳನ್ನು ಮಾಡಿಕೊಳ್ಳುವಂತಾಗಿದೆ. ಕೈಯಲ್ಲಿ ಕ್ಯಾಶ್ ಇಲ್ಲದಿದ್ದರೂ ಕಾರ್ಡ್ ಸ್ವೈಪ್ ಮಾಡುವ ಮೂಲಕ ಕೆಲಸ ಆಗುತ್ತಿದೆ. ಆದರೆ ಎಟಿಎಂನಲ್ಲಿ ಕ್ಯಾಶ್ ತೆಗೆಯಬೇಕಾದರೂ, ಕಾರ್ಡ್ ಸ್ವೈಪ್ ಮಾಡಬೇಕಾದರೂ ಪಿನ್ ನಂಬರ್ ಕಡ್ಡಾಯ. ಅದು ಇಲ್ಲದಿದ್ದರೆ ಆ ಕೆಲಸಗಳು ಸಾಧ್ಯವಾಗಲ್ಲ. ಇದೆಲ್ಲಾ ಓಕೆ. ಆದರೆ ಪಿನ್ ನಂಬರ್ ಮರೆತರೆ? ಆಗ ಏನು ಮಾಡಬೇಕು? ಎಂದರೆ.. ಅದಕ್ಕೆ ಭಯಬೀಳಬೇಕಾದ ಅಗತ್ಯವಿಲ್ಲ. ಕೆಳಗೆ ತಿಳಿಸಿದ ಹಲವು ಸ್ಟೆಪ್ಸ್ ಫಾಲೋ ಅಗಿ. ಇದರಿಂದ ನೀವು ನಿಮ್ಮ ಎಟಿಎಂ ಕಾರ್ಡಗೆ ಹೊಸ ನಂಬರ್ ಸೆಟ್ ಮಾಡಿಕೊಳ್ಳಬಹುದು. ಮತ್ತೆ ಎಂದಿನಂತೆ ಕಾರ್ಡ್ ಬಳಸುವ ಸಾಧ್ಯತೆ ಇದೆ. ಹಾಗಿದ್ದರೆ ಎಟಿಎಂ ಪಿನ್ ನಂಬರ್‌ನ್ನು ಹೊಸದಾಗಿ ಸೆಟ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈಗ ನೋಡೋಣ…!

ಎಟಿಎಂ ಪಿನ್ ಸೆಟ್ ಮಾಡ್ದಿಕೊಳ್ಳಲು ನಿಮಗೆ ಬೇಕಾಗಿರುವುದು..
1. ಎಟಿಎಂ ಕಾರ್ಡ್
2. ಬ್ಯಾಂಕ್ ಖಾತೆ ಸಂಖ್ಯೆ
3. ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಫೋನ್ ನಂಬರ್ (ಆ ನಂಬರ್ ನಿಮ್ಮ ಫೋನ್‌ನಲ್ಲಿ ಇರಬೇಕು)

ಮೇಲಿನ ಮೂರು ಲಭ್ಯವಿದ್ದರೆ ನೀವು ನಿಮ್ಮ ಹತ್ತಿರದ ನಿಮ್ಮ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಹೋಗಿ ಕಾರ್ಡನ್ನು ಎಟಿಎಂಗೆ ಹಾಕಬೇಕು. ಬಳಿಕ ಕೆಳಗೆ ತಿಳಿಸಿರುವ ಸ್ಟೆಪ್ಸ್ ಫಾಲೋ ಆಗಬೇಕು.

* ಮೊದಲು Banking ಎಂಬ ಆಪ್ಷನ್ ಆಯ್ಕೆ ಮಾಡಿಕೊಳ್ಳಬೇಕು.
* Pin Generate ಅಥವಾ ATM Pin reset ಎಂಬ ಆಪ್ಷನ್ ಆಯ್ಕೆ ಮಾಡಬೇಕು.
* ನಿಮ್ಮ Account Number ಎಂಟರ್ ಮಾಡಬೇಕು.
* ನಿಮ್ಮ Phone number ಎಂಟರ್ ಮಾಡಬೇಕು.
* ನಿಮ್ಮ ಫೋನ್‍ಗೆ OTP (One Time Password) ಬರುತ್ತದೆ.
* OTP ಯನ್ನು ಎಂಟರ್ ಮಾಡಿ ನಿಮ್ಮ ಪಿನ್ ಸಂಖ್ಯೆ ಬದಲಾಯಿಸಿದರೆ ಸಾಕು. ಹಳೆ ಪಿನ್ ಹೋಗಿ ಹೊಸ ಪಿನ್ ಆಕ್ಟಿವೇಟ್ ಆಗುತ್ತದೆ.


Click Here To Download Kannada AP2TG App From PlayStore!