ಭಾರತದಲ್ಲಿನ ಈ ಟಾಪ್ ಚಾಕೋಲೇಟ್ ಕಂಪೆನಿಗೆ ಫೌಂಡರ್… ಒಂದು ಕಾಲದ ಆ ಟಾಪ್ ಹೀರೋಯಿನ್.! ಯಾರು ಗೊತ್ತಾ.?

ಸಿನಿಮಾಗಳ ಮೇಲಿನ ಮಮಕಾರದಿಂದಲೋ.. ನಿಜಜೀವನದಲ್ಲಿನ ಕಷ್ಟಗಳ ಕಡಲನ್ನು ಈಜಲಾರದೆ ಒಂದು ಅವಕಾಶ ಕೊಟ್ಟರೆ ಸಾಕು ತಾವು ಏನೆಂದು ನಿರೂಪಿಸಿಕೊಳ್ಳುತ್ತೇವೆ ಎಂದು ಬಹಳಷ್ಟು ಮಂದಿ ಸಿನಿಮಾಗಳ ಕಡೆಗೆ ಆಕರ್ಷಿತರಾಗುತ್ತಿರುತ್ತಾರೆ. ಒಮ್ಮೆ ಇಂಡಸ್ಟ್ರಿಗೆ ಅಡಿಯಿಟ್ಟ ಮೇಲೆ ರಾಶಿರಾಶಿ ಅವಕಾಶಗಳು ಬಂದು ಬೀಳುತ್ತಿದ್ದರೆ ವೈಯಕ್ತಿಕ ಜೀವನ ಮರೆತುಬಿಡುತ್ತಾರೆ. ಇಂತಹವರ ಬಗ್ಗೆ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಸಿನಿಮಾ ಜೀವನ ಸರಾಗವಾಗಿ ಸಾಗುತ್ತಿದ್ದರೂ ವೈಯಕ್ತಿಕ ಜೀವನ ನರಕಪ್ರಾಯವಾದ ಕಲಾವಿದರು ಎಷ್ಟೋ ಮಂದಿ…ಅಂತಹವರಲ್ಲಿ ಒಬ್ಬರು ಈಶ್ವರಿ ಶಾರದಾ..

ಶಾರದಾ ಮೂಲ ಹೆಸರು ಸರಸ್ವತಿ ದೇವಿ. ಚಿಕ್ಕಂದಿನಿಂದ ಭರತನಾಟ್ಯ ಕಲಿತ ಶಾರಾದಾ ಅವರು ಕೆಲವು ನಾಟಕಗಳಲ್ಲಿ ಅಭಿನಯಿಸಿದರು. ಇವರ ಕುಟುಂಬದಲ್ಲಿ ಇಂತಹವಕ್ಕೆಲ್ಲಾ ಅವಕಾಶ ಕೊಡುತ್ತಿರಲಿಲ್ಲ. ಹೆಣ್ಣುಮಕ್ಕಳಿಗೆ 14 ವರ್ಷಕ್ಕೆ ಮದುವೆ ಮಾಡುತ್ತಾರೆ. ಆದರೆ ಇವರ ಆಸಕ್ತಿ, ಪ್ರತಿಭೆಯನ್ನು ನೋಡಿ ಇವರ ತಾಯಿ ಧೈರ್ಯ ಮಾಡಿ ಕಳುಹಿಸಿದರು. ಇದು ಇಷ್ಟವಾಗದೆ ಮೂರು ವರ್ಷಗಳ ತನಕ ಯಾರೂ ಮಾತನಾಡಲಿಲ್ಲ…ಬಳಿಕ ಅವಕಾಶಗಳು ನಿಧಾನಕ್ಕೆ ಪಡೆಯುತ್ತಾ ಟಾಪ್ ಹೀರೋಯಿನ್ ಆದರು.. ತೆಲುಗಿನ ಎನ್ಟಿಆರ್, ಎಯನ್ನಾರ್, ಕೃಷ್ಣರಂತಹ ದಿಗ್ಗಜರ ಜತೆಗೆ ಅಭಿನಯಿಸಿದರು. ಶೋಭನ್ ಬಾಬು, ಶಾರದಾ ಜೋಡಿ ಆಗಿನ ಕಾಲಕ್ಕೆ ಹಿಟ್ ಫೇಯಿರ್… ಪೊಲೀಸ್ ಅಧಿಕಾರಿಣಿಯಾಗಿ, ನ್ಯಾಯವಾದಿಯಾಗಿ, ಜಡ್ಜ್ ಕ್ಯಾರೆಕ್ಟರ್‌ಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದರು. ಮಲಯಾಳಂನಲ್ಲೂ ಶಾರದಾ ಅವರಿಗೆ ಒಳ್ಳೆಯ ಹೆಸರಿದೆ. ಕೇರಳ ಸರಕಾರ ನೀಡುವ ಪ್ರತಿಷ್ಠಿತ ಊರ್ವಶಿ ಪ್ರಶಸ್ತಿಯನ್ನು ಮೂರು ಸಲ ಪಡೆದಿದ್ದಾರೆ ಶಾರದಾ. “ಊರ್ವಶಿ ಶಾರದಾ” ಎಂದೇ ಅಲ್ಲಿ ಚಿರಪರಿಚಿತ.

ಸಿನಿಮಾ ಜೀವನ ಸರಾಗವಾಗಿ ಸಾಗುತ್ತಿದ್ದರೂ ವೈಯಕ್ತಿಕ ಜೀವನದಲ್ಲಿ ಶಾರಾದಾ ಅವರಿಗೆ ಕಷ್ಟಗಳು ತಪ್ಪಲಿಲ್ಲ. ಅಂದಿನ ಹಾಸ್ಯನಟ ಚಲಂರನ್ನು ಮದುವೆಯಾದ ಶಾರಾದ ಎಂದೂ ಸುಖಪಡಲಿಲ್ಲ. ಶಾರದಾ ಅವರ ಜತೆಗೆ ಮದುವೆಯಾಗುವ ವೇಳೆಗೆ ಚಲಂಗೆ ಅದಾಗಲೆ ಮದುವೆಯಾಗಿ ಮೂವರು ಮಕ್ಕಳಿದ್ದರು. ಚಲಂ ಜತೆಗೆ ಮದುವೆ ಬೇಡ ಎಂದು ಎಷ್ಟು ಮಂದಿ ಬುದ್ಧಿ ಹೇಳಿದರೂ ಕೇಳದೆ ಇಷ್ಟಪಟ್ಟು ಮದುವೆಯಾದರು. ಬಳಿಕ ಅವರ ಜೀವನ ಒಂದು ರೀತಿಯಲ್ಲಿ ನರಕವಾಯಿತು. ವಿಚ್ಛೇದನ ಪಡೆದು ಮತ್ತೆ ಹೊಸಜೀವನ ಪ್ರಾರಂಭಿಸಬೇಕೆಂದು ಹೊರಟರು. ರಾಜಕೀಯಕ್ಕೆ ಅಡಿಯಿಟ್ಟರು. ಗೆದ್ದರು. ಸಂಸದೆಯಾಗಿದ್ದಾಗ ತನ್ನ ಕ್ಷೇತ್ರಕ್ಕೆ ರೈಲ್ವೆ ಲೈನ್ ಸಿಗುವಂತೆ ಮಾಡಿದರು. ಎರಡನೇ ಬಾರಿ ಸ್ಪರ್ಧಿಸಿ ಸೋತರು. ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಸೇರಿದರು.

ವೈವಾಹಿಕ ಜೀವನದಲ್ಲಿ ಕಷ್ಟಗಳನ್ನು ನೋಡಿದ ಬಳಿಕ ಮಕ್ಕಳು ಬೇಡ ಎಂದು ತನ್ನ ಅಣ್ಣ ಮೋಹನ್ ರಾವ್ ಮಕ್ಕಳನ್ನೇ ತನ್ನ ಮಕ್ಕಳಾಗಿ ನೋಡಿಕೊಂಡರು ಶಾರದಾ. ಬಳಿಕ ಸಹೋದರ ವಿಜಯ ರಾಘವನ್ ಜತೆಗೆ ಒಂದು ಚಾಕೋಲೇಟ್ ಕಂಪೆನಿ ಸ್ಥಾಪಿಸಿದರು. ಕೇವಲ ಮಹಿಳೆಯರಿಗೆ ಮಾತ್ರ ಉದ್ಯೋಗ ಕಲ್ಪಿಸಬೇಕೆಂಬ ಉದ್ದೇಶದಿಂದ ಲೋಟಸ್ ಚಾಕೋಲೇಟ್ ವ್ಯಾಪಾರ ಆರಂಭಿಸಿದರು.


Click Here To Download Kannada AP2TG App From PlayStore!