ಆ ದೇಶದಲ್ಲಿ ಎಲ್ಲರೂ ಕಡ್ಡಾಯವಾಗಿ ಅಂಗಾಂಗ ದಾನ ಮಾಡಬೇಕು. ಈ ನಿರ್ಧಾರ ಬಗ್ಗೆ ನಿಮ್ಮ ಅಭಿಪ್ರಾಯ ಏನು..?

ಅಂಗಾಂಗ ದಾನ… ಇದರಿಂದ ಒಬ್ಬ ವ್ಯಕ್ತಿಯ ಅಂಗಾಂಗಗಳನ್ನು ಅನೇಕ ಜನರಿಗೆ ಕೊಟ್ಟು ಅವರಿಗೆ ಪುನರ್ಜನ್ಮ ಕೊಡಬಹುದು. ಹೃದಯ, ಲಿವರ್, ಕಿಡ್ನಿ, ಕಣ್ಣುಗಳು ಹೀಗೆ ಯಾವುದೇ ಅವಯವವಾದರೂ ಸರಿ. ವ್ಯಕ್ತಿ ಅರೋಗ್ಯವಾಗಿದ್ದು ಸಾವನ್ನಪ್ಪಿದರೆ, ಆತನ ಅಂಗಾಂಗಗಳು ಇತರರಿಗೆ ಪುನರ್ಜನ್ಮ ನೀಡುತ್ತದೆ. ಆದರೆ ನಮ್ಮಲ್ಲಿ ಅಂಗಾಂಗ ದಾನದ ಬಗ್ಗೆ ಅಷ್ಟೊಂದು ಜಾಗೃತಿಯಿಲ್ಲ ಎಂದು ಹೇಳಬಹುದು. 100 ಜನರಲ್ಲಿ ಒಬ್ಬರು ಇಬ್ಬರು ಬಿಟ್ಟು ಬೇರೆಯವರು ಇದರ ಬಗ್ಗೆ ತಲೆಸಿಕೊಂಡಿಲ್ಲ. ಆದರೆ ಆ ದೇಶದಲ್ಲಿ ಮಾತ್ರ ಹಾಗೆ ಅಲ್ಲ. ಅಲ್ಲಿ ವಾಸವಿರುವ ಯಾರಾದರೂ ಸಾವನ್ನಪ್ಪಿದರೆ ಅವರ ಅವಯವಗಳನ್ನು ತೆಗೆದುಕೊಳ್ಳುತ್ತಾರೆ. ಅದಕ್ಕೆ ಸಾವನ್ನಪ್ಪಿದ ಕುಟುಂಬದವರ ಅನುಮತಿ ಬೇಕಾಗಿಲ್ಲ. ಹಾಗೆ ತೆಗೆದುಕೊಂಡ ಅಂಗಾಂಗಗಳನ್ನು ಅವಶ್ಯಕತೆಯಿರುವವರಿಗೆ ಜೋಡಿಸುತ್ತಾರೆ. ಆಸ್ಟ್ರಿಯ, ಸ್ಪೇನ್’ನಂತಹ ದೇಶಗಳಲ್ಲಿ ಈಗಾಗಲೇ ಈ ವಿಧಾನವನ್ನು ಜಾರಿಯಲ್ಲಿದ್ದರೆ, ಆ ಪಟ್ಟಿಗೆ ಈಗ ಪ್ರಾನ್ಸ್ ಸೇರ್ಪಡೆಯಾಗಿದೆ.

2017 ಜನವರಿ 1 ರಿಂದ ಪ್ರಾನ್ಸ್ ದೇಶ ಒಂದು ಕಾನೂನನ್ನು ಜಾರಿಗೆ ತಂದಿದೆ. ಅದರ ಪ್ರಕಾರ ಅಲ್ಲಿ ಸಾವನ್ನಪ್ಪಿದ ನಾಗರಿಕರೆಲ್ಲರೂ ಸ್ವತಃ ಅಂಗಾಂಗ ದಾನಕ್ಕೆ ಒಳಪಡುತ್ತಾರೆ. ಅಂದರೆ ಅವರು ಸಾವನ್ನಪ್ಪಿದರೆ ಅವರ ಅಂಗಾಂಗಗಳನ್ನು ತೆಗೆದುಕೊಂಡು ಅವಶ್ಯಕತೆ ಇರುವವರಿಗೆ ಅಳವಡಿಸುತ್ತಾರೆ. ಅದಕ್ಕೆ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದವರ ಅನುಮತಿ ಬೇಕಾಗಿಲ್ಲ. ಆದರೆ ಯಾರಿಗೆ ಈ ಕಾನೂನಿಗೆ ಒಳಪಡಲು ಇಷ್ಟವಿಲ್ಲವೋ ಅಂದರೆ ಅಂಗಾಂಗ ದಾನ ಮಾಡಲು ಇಷ್ಟವಿಲ್ಲವೋ ಅವರು ಒಂದು ನಿರಾಕರಣೆ ಪತ್ರವನ್ನು ತಮ್ಮ ಹೆಸರಿನಲ್ಲಿ ಕೊಡಬೇಕಾಗುತ್ತದೆ. ಆಗ ಅವರು ಮರಣ ಹೊಂದಿದ ಮೆಲೆ ಅಂಗಾಂಗಗಳನ್ನು ತೆಗೆದುಕೊಳ್ಳುವುದಿಲ್ಲ. ಈ ವರ್ಷದಿಂದ ಜಾರಿಗೆ ಬರುವ ಈ ಕಾಯ್ದೆ, ಅಂಗಾಂಗ ದಾನಕ್ಕೆ ಎದುರು ನೋಡುತ್ತಿರುವವರಿಗೆ ಇದು ಒಂದು ವರ ಎನ್ನಬಹುದು.

ಆದರೆ ನಮ್ಮ ದೇಶದಲ್ಲಿ ಯಾವ ಸ್ಥಿತಿಯಲ್ಲಿ ಇದೆಯೆಂದರೆ… ನಮ್ಮ ಬಳಿ ಪ್ರತಿ 1.60 ಲಕ್ಷ ರೋಗಿಗಳಿಗೆ ಕೇವಲ 12 ಸಾವಿರ ಜನ ದಾನಿಗಳು ಮಾತ್ರ ಇದ್ದಾರೆ. ಇದರಿಂದ ನಾವು ಅರ್ಥಮಾಡಿಕೊಳ್ಳಬಹುದು, ಅಂಗಾಂಗ ದಾನದ ಅವಶ್ಯಕತೆ ಎಷ್ಡಿದೆಯೆಂದು. ನಮ್ಮ ದೇಶದಲ್ಲಿ ಸಹ ಅಂತಹ ಕಾನೂನನ್ನು ಜಾರಿಗೆ ತಂದರೆ, ಎಷ್ಟೋ ಜನ ಅಂಗಾಂಗ ದಾನಕ್ಕಾಗಿ ಎದುರು ನೋಡುವ ಅವಶ್ಯಕತೆ ಇರುವುದಿಲ್ಲ ಅಲ್ಲವೆ… ಇದರಿಂದ ತುಂಬಾ ಜನರಿಗೆ ಒಳ್ಳೆಯದಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಇರುವುದೆಲ್ಲ ಕಾರ್ಪೊರೇಟ್ ಮೆಡಿಕಲ್ ಮಾಫಿಯಾನೇ. ಅವರು ಸ್ವಲ್ಪ ಅವಕಾಶ ಸಿಕ್ಕರೆ ಸಾಕು ಅಂಗಾಂಗಗಳನ್ನು ಮಾರಿಕೊಳ್ಳಲು ನೋಡುತ್ತಾರೆ. ಮತ್ತೆ ಇಂತಹ ಕಾನೂನನ್ನು ಜಾರಿಗೆ ಬರಲು ಒಪ್ಪುತ್ತಾರ…? ಎಂದರೆ ಅದಕ್ಕೆ ಪ್ರಶ್ನೆಯೇ ಸಮಾಧಾನ ವಾಗುತ್ತದೆ…!


Click Here To Download Kannada AP2TG App From PlayStore!

Share this post

scroll to top