ಇಲ್ಲಿ ಎಂತಹ ಆಪರೇಷನ್ ಆದರೂ ಉಚಿತ…! ಹೃದಯ, ಕಿಡ್ನಿ ಸಮಸ್ಯೆಗಳಿಗೆ ಖ್ಯಾತ ತಜ್ಞ ವೈದ್ಯರಿಂದ ಚಿಕಿತ್ಸೆ….!

ಹಾರ್ಟ್ ಆಪರೇಷನ್ ಆದರೂ, ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್ ಆದರೂ,…ಅಲ್ಲಿ ಎಲ್ಲಾ ಉಚಿತ…! ಲಕ್ಷಗಟ್ಟಲೇ ಖರ್ಚು ಆಗುವ  ಚಿಕಿತ್ಸೆಗೆ ಅಲ್ಲಿ ಉಚಿತವಾಗಿ ದೊರೆಯುತ್ತದೆ. ಇದಕ್ಕೆ ನೀವು ಮಾಡಬೇಕಾಗಿದ್ದು ಇಷ್ಟೆ….. ಇಲ್ಲಿಯವರೆಗೂ ನೀವು ತೋರಿಸಿಕೊಂಡಂತಹ ಆಸ್ಪತ್ರೆಯವರು ನೀಡಿರುವ ರಿಪೋರ್ಟ್ಸ್’ಗಳನ್ನು ತಮ್ಮ ಜೊತೆ ತೆಗೆದುಕೊಂಡು ಹೊದರೆ ಸಾಕು. ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿನ  ಪುಟ್ಟಪರ್ತಿ ಸಾಯಿಬಾಬಾ ಕಟ್ಟಿಸಿರುವ ಸತ್ಯಸಾಯಿ ಸ್ಪೆಷಾಲಿಟೀ ಹಾಸ್ಪಿಟಲ್ ನಲ್ಲಿ ಈ ರೀತಿಯ ಉಚಿತವಾದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. 1991 ರಲ್ಲಿ ಆಗಿನ ಪ್ರಧಾನ ಮಂತ್ರಿಗಳಾದ ಪಿ.ವಿ ನರಸಿಂಹಾರಾವುರವರಿಂದ ಪ್ರಾರಂಭಿಸಲ್ಪಟ್ಟ  ಈ ಆಸ್ಪತ್ರೆಯಲ್ಲಿ 220 ಹಾಸಿಗೆಗಳನ್ನು ಹೊಂದಿರುವ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಬಡವರಿಗಾಗಿ ಉಚಿತವಾದ ತಪಾಸಣೆಯನ್ನು ನೀಡುತ್ತಾ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಲು ದೇಶ ವಿದೇಶಗಳಿಂದ ರೋಗಿಗಳು ಬರುತ್ತಿರುತ್ತಾರೆ. ಪ್ರಪಂಚ ಮಟ್ಟದಲ್ಲಿನ ವೈದ್ಯರು ಇಲ್ಲಿ ಸೇವೆ ಮಾಡುತ್ತಿದ್ದಾರೆ.

ಬೆಳಿಗ್ಗೆ 6 ಗಂಟೆಯವರೆಗೂ…. ಆಸ್ಪತ್ರೆಯ ಪ್ರಾಂಗಣದಲ್ಲಿ ಮುಂಚಿತವಾಗಿ ಕ್ಯೂನಲ್ಲಿ ನಿಂತುಕೊಂಡರೆ  7 ಗಂಟೆಯವರೆಗೂ ಟೋಕನ್ಸ್ ಕೊಟ್ಟು ಒಳಗೆ ಕಳುಹಿಸುತ್ತಾರೆ. ಪೇಷೆಂಟ್’ಗಳ ರೋಗಗಳಿಗೆ ಅನುಗುಣವಾಗಿ, ಬೇರೆ ಬೇರೆ ವಾರ್ಡ್’ಗಳಿಗೆ ಕಳುಹಿಸುತ್ತಾರೆ. ಅವಶ್ಯಕವಾದ ಚಿಕಿತ್ಸೆತನ್ನು ನೀಡುತ್ತಾರೆ. ಇಲ್ಲಿನ ಡಾಕ್ಟರ್’ಗಳ ಕೈ ಗುಣವೋ ಏನೋ…. ರೋಗ ಹಾಗೆಯೇ ವಾಸಿಯಾಗುತ್ತದೆ. ಈ ಹಾಸ್ಪಿಟಲ್’ನಿಂದ ಪೂರ್ತಿ ಆರೋಗ್ಯವಂತರಾಗಿ ಡಿಶ್ಚಾರ್ಜ್ ಆಗಿರುವವರು ಎಲ್ಲಾ ಪುಟ್ಟಪರ್ತಿ ಸಾಯಿಬಾಬಾ ದಯೆಯಿಂದ ವಾಸಿಯಾಗಿದೆ ಎಂದು ಕೊಂಡಾಡುತ್ತಾರೆ.

ಸತ್ಯಸಾಯಿ ಹಾಸ್ಪಿಟಲ್ ನಲ್ಲಿ ನೀಡುವ ವೈದ್ಯಕೀಯ ಸೇವೆಗಳು…

 • ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು.
 •  ಮೂತ್ರಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳು.
 • ಪ್ಲಾಸ್ಟಿಕ್ ಸರ್ಜರಿ.
 • ಆರ್ಥೋಪೆಡಿಕ್
 • ಗ್ಯಾಸ್ಟ್ರೋ ಎಂಟರಾಲಜಿ (ಎಂಡೋಸ್ಕೋಪಿ).

ಬಡವರ ಚಿಕಿತ್ಸೆಗಾಗಿ ಪುಟ್ಟಪರ್ತಿ ಸಾಯಿಬಾಬಾ…. ಸ್ಥಾಪಿಸಿದ ಇತರೆ  ಸಂಸ್ಥೆಗಳು…

 • ಪುಟ್ಟಪರ್ತಿಯಲ್ಲಿನ Sri Sathya Sai Institute of Higher Medical Sciences 220 ಹಾಸಿಗೆಗಳ ಒಂದು ಸೂಪರ್  ಸ್ಪೆಷಾಲಿಟಿ ಹಾಸ್ಪಿಟಲ್ .
 •  ಬೆಂಗಳೂರಿನಲ್ಲಿನ   ಶ್ರೀ ಸತ್ಯಸಾಯಿ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ 333 ಹಾಸಿಗೆಗಳ ಆಸ್ಪತ್ರೆ.
 • ಹಾಗೆಯೇ ಬೆಂಗಳೂರು ವೈಟ್ ಫೀಲ್ಡ್’ನಲ್ಲಿನ  ಸತ್ಯಸಾಯಿ ಜನರಲ್ ಹಾಸ್ಪಿಟಲ್,
 • ಇನ್ನೂ ಎಷ್ಟೋ ವೈಧ್ಯಕೀಯ ಕೇಂದ್ರಗಳಲ್ಲಿ, ಗ್ರಾಮೀಣ ಬಡವರಿಗೆ ವೈದ್ಯಕೀಯ ಸೌಕರ್ಯಗಳು ಉಚಿತವಾಗಿ ನೀಡುತ್ತಿದ್ದಾರೆ.

ಇತರೆ ಕಾರ್ಯಕ್ರಮಗಳು:

 • ಬರಪೀಡಿತ ಪ್ರದೇಶವಾದ ಅನಂತಪುರಂ ಜಿಲ್ಲೆಯಲ್ಲಿ ಅನೇಕ ಕುಡಿಯುವ ನೀರಿನ ಯೋಜನೆಗಳು
 • ಚೆನ್ನೈ ನಗರಕ್ಕೆ ಸತ್ಯಸಾಯಿ ಸಂಸ್ಥೆಗಳ ಅಧ್ಯಕ್ಷತೆಯಲ್ಲಿ 200 ಕೋಟಿ ರೂಪಾಯಿಗಳಿಗೂ ಅಧಿಕ ಖರ್ಚಿನಿಂದ ನಿರ್ಮಿಸಿದ ಯೋಜನೆಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿವೆ.
 • 33 ದೇಶಗಳಲ್ಲಿ ವ್ಯಕ್ತಿತ್ವವನ್ನು ವಿಕಸನ ಶಿಕ್ಷಣವನ್ನು ( Educare, Education in Human Values)ಕಲಿಸುವ ಪಾಠಶಾಲೆಗಳನ್ನು ಪ್ರಾರಂಭಿಸಿದ್ದಾರೆ.

Click Here To Download Kannada AP2TG App From PlayStore!

Share this post

scroll to top