ಈ ವಿಚಿತ್ರ ಕಾನೂನುಗಳನ್ನು ನೋಡಿದರೆ ನೀವು ಅಚ್ಚರಿಗೊಳ್ಳುತ್ತೀರಿ.!

ನಮ್ಮದಲ್ಲದ ಭಾಷೆ… ನಮ್ಮದಲ್ಲದ ಊರು… ನಮ್ಮದಲ್ಲದ…ದೇಶಕ್ಕೆ ಯಾರಾದರೂ ಹೋದರೆ,ಆಯಾ ಅಂಶಗಳ ಬಗ್ಗೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಿಗೆ ಹೋದರೂ ಇವೆಲ್ಲವೂ ಸಹಜವೇ. ಆದರೆ,ತಿಳಿದೋ,ತಿಳಿಯದೆಯೋ ತಪ್ಪು ಮಾಡಿದರೆ… ನಮ್ಮ ದೃಷ್ಟಿಯಲ್ಲಿ ಅದು ಸರಿಯಿರಬಹುದು,ಆದರೆ ಆ ದೇಶದ ಕಟ್ಟಳೆ ಕಾನೂನುಗಳ ದೃಷ್ಟಿಯಲ್ಲಿ ನಾವು ಮಾಡುವ ಕೆಲವು ಕೆಲಸಗಳು ತಪ್ಪಾಗಿ ಕಾಣಬಹುದು. ಅಂತಹ ಸಂದರ್ಬಗಳಲ್ಲಿ ಅದಕ್ಕೆ ತಕ್ಕ ಬೆಲೆ ತೆರಲೇಬೆಕು. ತಿಳಿದು ಮಾಡಿದರೂ,ತಿಳಿಯದೇ ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು. ಈ ನಿಟ್ಟಿನಲ್ಲಿ ನಾವು ಮಾಡುವ ತಪ್ಪುಗಳಿಗೆ ಯಾವ ದೇಶಗಳಲ್ಲಿ ಯಾವ ಕೆಲಸಗಳಿಗೆ, ಜಾರಿಯಲ್ಲಿರುವ ವಿಚಿತ್ರ ಕಾನೂನು ಮತ್ತು ಶಿಕ್ಷೆಗಳ ಬಗ್ಗೆ ತಿಳಿದುಕೊಳ್ಳೋಣ.

1. ನಮ್ಮ ಮನೆಗಳಲ್ಲಿ ತಲೆದೋರುವ ಸಣ್ಣ ಪುಟ್ಟ ವಿದ್ಯುತ್ ಸಂಬಂಧಿ ಸಮಸ್ಯೆಗಳಿಗೆ ನಾವೇ ದುರಸ್ತಿ ಮಾಡಿಕೊಳ್ಳುತ್ತೆವೆ. ಆದರೆ,ಆಸ್ಟ್ರೇಲಿಯಾ ದೇಶದ ವಿಕ್ಟೋರಿಯಾದಲ್ಲಿ ಹಾಗೆ ಮಾಡಲೇ ಬಾರದಂತೆ. ವಿದ್ಯುತ್ ಬಲ್ಬ್ ಬದಲಾಯಿಸ ಬೇಕಾದರೂ ಆ ಕೆಲಸವನ್ನು ಅರ್ಹ ಎಲೆಕ್ಟ್ರಿಷಿಯನ್ ಮಾಡಬೇಕಂತೆ. ಈ ನಿಯಮವನ್ನು ಪಾಲಿಸದಿದ್ದಲ್ಲಿ 10 ಆಸ್ಟ್ರೇಲಿಯನ್ ಡಾಲರ್ ದಂಡ ಹಾಕುತ್ತಾರಂತೆ.

2.ಇಟಲಿ ದೇಶದ ಮಿಲನ್ ನಗರದಲ್ಲಿ ಪ್ರಜೆಗಳು ಆಸ್ಪತ್ರೆ, ಸ್ಮಶಾನ, ಅಂತ್ಯಕ್ರಿಯೆಗಳನ್ನು ಹೊರತುಪಡಿಸಿ. ಮಿಕ್ಕೆಲ್ಲ ಕಡೆಗಳಲ್ಲೂ ಯಾವಾಗಲೂ ನಗಬೇಕಂತೆ. ಹಾಗೆ ನಗದಿದ್ದಲ್ಲಿ ಅತಿ ಹೆಚ್ಚು ದಂಡ ವಿಧಿಸುತ್ತಾರಂತೆ.

3. ಫ್ಲೋರಿಡಾ ದಲ್ಲಿ ಗುರುವಾರ ಸಂಜೆ 6 ಗಂಟೆಯನಂತರ , ಸಾರ್ವಜನಿಕ ಸ್ಥಳಗಳಲ್ಲಿ ಯಾರೂ ಅಪಾನವಾಯುವನ್ನು (ಹೂಸು) ಬಿಡಬಾರದಂತೆ. ಹಾಗೇನಾದರು ಬಿಟ್ಟಲ್ಲಿ ದಂಡ ವಿಧಿಸುತ್ತಾರಂತೆ.

4. ಇಂಗ್ಲೆಂಡ್ ನ ಪಾರ್ಲಿಮೆಂಟ್ ಭವನದಲ್ಲಿ ನಿಧನರಾಗುವುದು ಕಾನೂನು ರಿತ್ಯಾ ಅಪರಾಧವಂತೆ. ಈ ಕಾನೂನನ್ನು 2007 ರಲ್ಲಿ ಜಾರಿಗೆ ತರಲಾಯಿತಂತೆ.

5. ಓಕ್ಲಹಾಮ ದಲ್ಲಿ ರಾತ್ರಿ 7 ಗಂಟೆಯ ನಂತರ ಬಾತ್ ಟಬ್ ನಲ್ಲಿ ಸ್ನಾನ ಮಾಡುವಾಗ ಪಕ್ಕದಲ್ಲಿ ಕತ್ತೆಯನ್ನಿರಿಸಿಕೊಂಡರೆ, ದಂಡ ತೆರಬೇಕಾಗುತ್ತಂತೆ.

6. ಕೆನಡ ದೇಶದ ರೇಡಿಯೋಗಳಲ್ಲಿ ಪ್ರಸಾರಮಾಡುವ ಪ್ರತಿ 5 ಹಾಡುಗಳಲ್ಲಿ ಒಂದು ಹಾಡು ಕೆನಡ ಹಾಡುಗಾರನದ್ದಾಗಿರಬೇಕಂತೆ,ಇದು ಅಲ್ಲಿಯ ನಿಯಮ.

7.ಜಪಾನಿನಲ್ಲಿ 40 ವರ್ಷ ದಾಟಿದ ಪುರುಷರ ಸೊಂಟದ ಸುತ್ತಳತೆ 31 ಇಂಚುಗಳನ್ನು ಮೀರಬಾರದಂತೆ. ಸ್ತ್ರೀಯರಿಗಾದರೆ 35 ಇಂಚುಗಳನ್ನು ಮೀರಬಾರದಂತೆ. ಅದೇ ರೀತಿ ಲೆಕ್ಕಕ್ಕಿಂತಾ ಹೆಚ್ಚು ತೂಕವಿರಬಾರದಂತೆ.ಇಲ್ಲಿ ಒಂದು ವಿಚಿತ್ರವೇನೆಂದರೆ, ಈ ದೇಶವೇ ಅತ್ಯಂತ ಹೆಚ್ಚು ತೂಕವುಳ್ಳ ‘ಸುಮೋ’ಗಳ ಕುಸ್ತಿಯನ್ನು ಪ್ರಪಂಚಕ್ಕೆ ಪರಿಚಯಿಸಿದ್ದು.

8. ಸ್ವಿಟ್ಜರ್ ಲ್ಯಾಂಡ್ ನಲ್ಲಿ ರಾತ್ರಿ 10 ಗಂಟೆಯ ನಂತರ ಟಾಯ್ಲೆಟ್ ನ ಫ್ಲಷ್ ಉಪಯೋಗಿಸುವುದು ಕಾನೂನು ರಿತ್ಯಾ ಅಪರಾಧ, ಇದನ್ನು ಉಲ್ಲಂಘಿಸಿದಲ್ಲಿ ಶಿಕ್ಷೆ ವಿಧಿಸುತ್ತಾರಂತೆ.

9.ಚಿಕಾಗೋ ದಲ್ಲಿ ಎಲ್ಲಿಯಾದರೂ ಬೆಂಕಿ ಬಿದ್ದಿದ್ದರೆ, ಆ ಸ್ಥಳಗಳಲ್ಲಿ ಆಹಾರ ಸೇವಿಸುವುದು ಅಪರಾಧವಂತೆ. ಹಾಗೆ ಮಾಡಿದರೆ ದಂಡ ವಿಧಿ ಸುತ್ತಾರೆ.

10. ಜರ್ಮನಿಯ ‘ಆಟೋ ಬಾಹ್ನ್’ ನಲ್ಲಿ ಚಲಿಸುತ್ತಿರುವ ವಾಹನದ ಇಂಧನ ಮುಗಿದರೆ, ಕಾನೂನು ರಿತ್ಯಾ ಅಪರಾಧವಂತೆ. ಆದುದರಿಂದ ಇಂಧನ ಮುಗಿಯುವುದಕ್ಕೆ ಮೊದಲೇ ಪೆಟ್ರೋಲ್,ಡೀಸಲ್,ಗ್ಯಾಸ್ ತುಂಬಿಸಿಕೊಳ್ಳಬೇಕು. ಒಂದು ವೇಳೆ ಇಂಧನ ಮುಗಿದು ವಾಹನ ದಾರಿಯಲ್ಲಿ ನಿಂತರೆ,80 ‘ಯೂರೋ’ಗಳ ದಂಡ ತೆರಬೇಕಂತೆ.


Click Here To Download Kannada AP2TG App From PlayStore!

Share this post

scroll to top