ಅಭಿಗ್ನ ಎಂಬ ಯುವತಿಗೆ ಎದುರಾದ ಫನ್ನಿ ಘಟನೆ ಇದು. ಚಲನ್ ಬರೆಯಬೇಕೆಂದಿದ್ದ ಪೊಲೀಸ್‌ಗೆ ಶಾಕ್..!

“ಆ ವರ್ಷ ನನಗೆ ಸರಿಯಾಗಿ ನೆನಪಿಲ್ಲ. ನಾವಾಗ ಮೈಸೂರಿನಲ್ಲಿದ್ದೆವು. ಒಂದು ದಿನ ಅಪ್ಪ, ನಾನು ಇಬ್ಬರೂ ಕೂಡಿ ಹೊರಗೆ ಬಂದೆವು. ಅಪ್ಪ ಬೈಕ್ ಓಡಿಸುತ್ತಿದ್ದ. ತಣ್ಣಗಿನ ಗಾಳಿಯಲ್ಲಿ ಆಹ್ಲಾದಕರವಾಗಿ ಸಾಗುತ್ತಿದ್ದೆವು ಅಂದುಕೊಳ್ಳುವ ಹೊತ್ತಿಗೆ ಸಡನ್ ಆಗಿ ಟ್ರಾಫಿಕ್ ಪೊಲೀಸ್ ಒಬ್ಬ ನಮ್ಮ ಬೈಕ್‌ಗೆ ಅಡ್ಡಲಾಗಿ ಬಂದ. ಕೂಡಲೆ ಅಪ್ಪ ಬೈಕ್ ನಿಲ್ಲಿಸಿದ. ನಾನೂ ಇಳಿದೆ. ಅಪ್ಪನೂ ಇಳಿದರು. ನನಗಾಗ ಅರ್ಥವಾಗಲಿಲ್ಲ, ಆ ಪೊಲೀಸ್ ಬೈಕನ್ನು ಯಾಕೆ ನಿಲ್ಲಿಸಿದ ಅಂತ. ಕೂಡಲೆ ಚೆಕಿಂಗ್‌ಗಾಗಿ ನನ್ನ ಬಳಿಗೆ ಬಂದ. ಆಗ ಅರ್ಥವಾಯಿತು, ಬೈಕ್ ಕಾಗದಗಳು, ಲೈಸೆನ್ಸ್ ವಗೈರೆ ತೋರಿಸಬೇಕೆನ್ನುತ್ತಾನೆಂದು. ಆದರೂ ಅಪ್ಪನಿಗೂ, ನನಗೇನು ಭಯ. ಎಲ್ಲವೂ ನಮ್ಮ ಬಳಿ ಇದ್ದವು.

ಬೈಕ್ ಕಾಗದಗಳೆಲ್ಲಾ ಸರಿಯಾಗಿಯೇ ಇದ್ದವು. ಅಪ್ಪ ತೋರಿಸಿದರು. ಡ್ರೈವಿಂಗ್ ಲೈಸೆನ್ಸ್ ತೋರಿಸಬೇಕೆಂದ. ಅದೂ ಸಹ ತೋರಿಸಿದೆವು. ಅಪ್ಪ ಹೆಲ್ಮೆಟ್ ಹಾಕಿಕೊಂಡೇ ಇದ್ದರು. ಸ್ಪೀಡ್ ಲಿಮಿಟ್‌ನಲ್ಲೇ ಇದ್ದರು. ಓವರ್ ಸ್ಪೀಡ್ ಹೋಗುತ್ತಿರಲಿಲ್ಲ. ಯಾವುದೇ ಟ್ರಾಫಿಕ್ ರೂಲ್ ಮುರಿಯಲಿಲ್ಲ. ಬೈಕ್ ಮೇಲೆ ಇಬ್ಬರು ಬಿಟ್ಟರೆ ಬೇರಾರು ಇಲ್ಲ. ಎಲ್ಲವೂ ಕರಕ್ಟ್ ಆಗಿದ್ದರೂ ಪೊಲೀಸ್ ನಮ್ಮನ್ನು ಹೋಗು ಎಂದು ಹೇಳಲಿಲ್ಲ. ಬೈಕ್ ಕಡೆಗೆ ಅದೇ ಕೆಲಸವಾಗಿ ನೋಡುತ್ತಿದ್ದ. ತುಂಬಾ ಸಮಯ ಆತ ನಮ್ಮ ಬೈಕ್ ಪರೀಕ್ಷಿಸುವಂತೆ ನೋಡಿದ. ಕೊನೆಗೆ ಏನೋ ಸಾಧಿಸಿದಂತೆ ಬಂದು ಹೇಳಿದ.

ಸರ್, ನಿಮ್ಮ ಬೈಕ್ ನಂಬರ್ ಪ್ಲೇಟ್ ಸರಿಯಾಗಿಲ್ಲ. ಫೈನ್ ಹಾಕ್ತೀನಿ ಎಂದ ಆ ಪೊಲೀಸ್. ಅಪ್ಪ ಅಂದ… ಚೆನ್ನಾಗಿಯೇ ಇದೆ ಅಲ್ಲಾ ಸಾರ್ ಎಂದು. ಇಲ್ಲಾ ಸಾರ್, ನಂಬರ್ ಪ್ಲೇಟ್ ಡ್ಯಾಮೇಜ್ ಆಗಿದೆ ಎಂದ ಪೊಲೀಸ್. ಅದು ಚಿಕ್ಕ ಸ್ಕ್ರಾಚ್, ದೊಡ್ಡ ಡ್ಯಾಮೇಜ್ ಏನೂ ಅಲ್ಲವಲ್ಲಾ ಎಂದರು ಅಪ್ಪ. ಇಲ್ಲಾ ಸಾರ್, ಅದು ಚಿಕ್ಕದಾಗಿದ್ದರೂ, ದೊಡ್ಡದಾಗಿದ್ದರೂ ಡ್ಯಾಮೇಜ್ ಡ್ಯಾಮೇಜೆ, ಫೈನ್ ಫೈನ್ ಎನ್ನು… ಒಂದು ಮಿಷನ್ ತೆಗೆದು ಅದರಲ್ಲಿ ಡಾಟಾ ಫೀಡ್ ಮಾಡತೊಡಗಿದ. ಬಹಳ ಹೊತ್ತು ಆ ಪೊಲೀಸ್ ಟ್ರೈ ಮಾಡಿದ, ಆದರೆ ಮಿಷನ್ ಕೆಲಸ ಮಾಡಲಿಲ್ಲ, ಕೊನೆಗೆ ಆತನೇ ಎಂದ, ನಿಮ್ಮ ಲಕ್ ಚೆನ್ನಾಗಿದೆ ಸಾರ್, ಮಿಷನ್ ಕೆಲಸ ಮಾಡುತ್ತಿಲ್ಲ, ಹೊರಡಿ ಎಂದ ಪೊಲೀಸ್. ಪಕ್ಕಕ್ಕೆ ಬಂದು ನಗಾಡಿದೆ. ನಿಜ ಅಲ್ಲವೇ. ಎಂದಿಗೇ ಆಗಲಿ ನ್ಯಾಯ ಗೆಲ್ಲುತ್ತದೆ. ಅನ್ಯಾಯ ಸೋಲುತ್ತದೆ.”

— ಅಭಿಗ್ನ ಎಂಬ ಯುವತಿ ತನ್ನ ತಂದೆಯೊಂದಿಗೆ ಬೈಕ್‌ನಲ್ಲಿ ಹೊರಡುತ್ತಿರಬೇಕಾದರೆ ನಡೆದ ರಿಯಲ್ ಘಟನೆ ಇದು. ಪೊಲೀಸರು ಈ ರೀತಿ ಮಾಡಿದರೆ ಯಾರು ಏನು ಮಾಡಲಾರರು.

 


Click Here To Download Kannada AP2TG App From PlayStore!