ಇದು ಗಂಡ-ಹೆಂಡತಿ ಸಂಬಂಧ ಎಂತಹದು ಎಂದು ತಿಳಿಸುವ ಅದ್ಭುತ ಕತೆ.

ಗಂಡ ಹೆಂಡತಿಯಿಬ್ಬರೂ ಸಾಫ್ಟವೇರ್ ಉದ್ಯೋಗಿಗಳು. ಎಂದಿನಂತೆ ಆದಿನ ಕೂಡ ಆಫೀಸ್ ಗೆ ಹೋದರು. ಅದೇ ದಿನ ಆಫೀಸ್’ನಲ್ಲಿ ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ ಅನ್ನು ಇಟ್ಟುಕೊಂಡಿದ್ದರು. ಅದರಲ್ಲಿ ಈ ದಂಪತಿಗಳು ಸಹ ಭಾಗವಹಿಸಿದ್ದರು. ಟ್ರೈನರ್ ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ ಪ್ರಾರಂಭಿಸಿದರು.

ಪ್ರಾಕ್ಟಿಕಲ್ ಆಗಿ ಏನೋ ಹೇಳಬೇಕಂದುಕೊಂಡನು ಆ ಗಂಡಹಂಡತಿಯಲ್ಲಿ ಒಬ್ಬರಿಗೆ ಬರಲು ತಿಳಿದಿದನು. ಹೆಂಡತಿ ಹೋದಳು. ಆಕೆಯ ಕೈಗೆ ಚಾಪ್ ಪೀಸ್ ಕೊಟ್ಟು ನಿಮಗೆ ತುಂಬಾ ಇಷ್ಟವಾದ 30 ಹೆಸರುಗಳನ್ನು ಬೋರ್ಡ್ ಮೇಲೆ ಬರೆಯಲು ತಿಳಿಸಿದನು. ತಕ್ಷಣ ತನಗೆ ಬೇಕಾದವರು, ಸ್ನೇಹಿತರನ್ನು ನೆನಪಿಕೊಂಡ 30 ಹೆಸರುಗಳನ್ನು ಬೋರ್ಡ್ ಮೇಲೆ ಬರೆದಳು. ಗುಡ್ ಈಗ ಬರೆದವುಗಳಿಂದ 20 ಹೆಸರುಗಳನ್ನು ಅಳಿಸಿ ಎಂದು ಹೇಳಿದ ಟ್ರೈನರ್. ಆಗ ಆಕೆ ಯೋಚಿಸಿ ತನಗೆ ಅಷ್ಟು ಅವಶ್ಯಕತೆ ಇಲ್ಲ ಅಂದುಕೊಂಡ ಹೆಸರುಗಳನ್ನು ಅಳಿಸಿ ಹಾಕಿದಳು. ಮತ್ತೆ 6 ಹೆಸರುಗಳನ್ನು ಅಳಿಸಲು ಹೇಳಿದ. ಈ ಸರಿ ತುಂಬಾ ಯೋಚಿಸಿ ಆರು ಹೆಸರುಗಳನ್ನು ಅಳಿಸಿದಳು.

ಈಗ ಉಳಿದ ನಾಲ್ಕು ಹೆಸರಿನಲ್ಲಿ ಎರಡನ್ನು ತೆಗೆದುಹಾಕಿ ಎಂದು ಹೇಳಿದನು. ತುಂಬಾ ನೋವಿನಿಂದ ತನ್ನ ತಂದೆತಾಯಿ ಹೆಸರುಗಳನ್ನು ಅಳಿಸಿದಳು. ಆಕೆಗೆ ಈಗ ಉಳಿದ ಆ ಎರಡು ಹೆಸರಿನಲ್ಲಿ ಒಂದನ್ನು ಅಳಿಸಿ ಎಂದನು. ಈಗ ಆಕೆ ತನ್ನ ಎರಡು ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಅಳಲು ಪ್ರಾರಂಭಿಸಿದಳು. “ಹು… ಅಳಿಸಿಹಾಕಿ… ಒಂದು ಹೆಸರನ್ನು..!” ಎಂದ ಟ್ರೈನರ್. ಹಾಗೆ ಒಂದೇ ಸಮ್ಮನೆ ಅಳುತ್ತಿದ್ದಾಳೆ ಆಕೆ. ಮಗು ಹುಟ್ಟಿದ ದಿನ. ಆ ಮಗುವನ್ನು ಪ್ರೀತಿಯಿಂದ ಬೆಳೆಸಿದ್ದು, ಅದರ ತುಂಟಾಟ ಹೀಗೆ ಒಂದೊಂದೇ ನೆನಪಿಗೆ ಬಂದವು.

ಆದರೂ ಸರಿ… ತನ್ನ ಮೂರು ವರ್ಷ ಮಗುವಿನ ಹೆಸರನ್ನು ಅಳಿಸಿದಳು‌. ಈಗ ಬೋರ್ಡ್ ಮೇಲೆ ಒಂದು ಹೆಸರು ಮಾತ್ರ ಉಳಿದಿದೆ. ಆ ಹೆಸರು ಯಾರದುಗೊತ್ತಾ…? ತಾಳಿಕಟ್ಟಿದ ಗಂಡನದ್ದು.ಆಗ ಟ್ರೈನರ್ ಹೇಳಿದ, ಗಂಡ ಹೆಂಡತಿಯ ಅನುಬಂಧ, ಅನುರಾಗ ಹೀಗೆ ಇರುತ್ತದೆ. ಜನ್ಮಕೊಟ್ಟು ಬೆಳೆಸಿದ ತಂದೆತಾಯಿಯನ್ನು, ತನ್ನ ಮಗುವನ್ನು ಬಿಟ್ಟು ಗಂಡನ ಹೆಸರನ್ನು ಹಾಗೆ ಉಳಿಸಿದಳು ಯಾಕೆಂದರೆ…?
ಕೊನೆಯವರೆಗೂ ಒಬ್ಬರಿಗೊಬ್ಬರು ಆಸರೆಯಾಗಿರುವುದು ಇರುವುದು ಅವರಿಬ್ಬರೇ ಎಂದು ಹೇಳಿದ ಟ್ರೈನರ್. ಅಲ್ಲಿಯವರೆಗೆ ನಿಶಬ್ದವಾಗಿದ ಹಾಲ್ ಚಪ್ಪಾಳಯಿಂದ ತುಂಬಿಹೊಯಿತು.


Click Here To Download Kannada AP2TG App From PlayStore!