ಈ 27 ವಸ್ತುಗಳ ಮೇಲೆ GST ಸ್ಲಾಬ್ ಇಳಿಕೆಯಾಗಿದೆ..! ಯಾವ ವಸ್ತುವಿಗೆ ಎಷ್ಟು ಕಡಿಮೆಯಾಗಿದೆ ವಿವರಗಳನ್ನು ನೋಡಿ!

ಈ ವರ್ಷ ಜುಲೈ 1ನೇ ತಾರೆಖಿನಿಂದ ಕೇಂದ್ರ ಸರಕಾರ ಪ್ರತಿಷ್ಠಿತ ಜಿಎಸ್‍ಟಿ ವಿಧೇಯಕವನ್ನು ಜಾರಿಗೆ ತಂದಿದ್ದು ಗೊತ್ತೇ ಇದೆ. ಒಟ್ಟು ನಾಲ್ಕು ಸ್ಲಾಬುಗಳಲ್ಲಿ ಜಿಎಸ್‍ಟಿ ಜಾರಿಯಲ್ಲಿದೆ. ಶೇ. 5, 12, 18, 28 ಹೆಸರಿನಲ್ಲಿ ಜಿಎಸ್‍ಟಿ ವಿಧೇಯಕ ಜಾರಿಯಲ್ಲಿದೆ. ಇದಕ್ಕಾಗಿ ಆಯಾ ವಸ್ತುಗಳಿಗೆ ಸೇವೆಗಳಿಗೆ ಈ ನಾಲ್ಕು ಸ್ಲಾಬುಗಳಲ್ಲಿ ಸೇರಿಸಿ ಜಿಎಸ್‌ಟಿ ವಸೂಲಿ ಮಾಡಲಾಗುತ್ತದೆ. ಆದರೆ ಇತ್ತೀಚೆಗೆ ಕೆಲವು ವಸ್ತುಗಳ ಸ್ಲಾಬುಗಳನ್ನು ಬದಲಾಯಿಸಿದೆ. ಅವೇನು ಎಂದು ಈಗ ತಿಳಿದುಕೊಳ್ಳೋಣ.

ಅನ್‍ಬ್ರಾಂಡೆಡ್ ನಮ್‍ಕಿನ್, ಅನ್‍ಬ್ರಾಂಡೆಡ್ ಆಯುರ್ವೇದಿಕ್ ಮೆಡಿಸಿನ್, ಹೋಮಿಯೋ ಔಷಧಿಗಳು, ಸ್ಲೈಸ್ಡ್ ಡ್ರೈಡ್ ಮ್ಯಾಂಗೋ, ಖಾಕ್ರಾ, ಪ್ಲೆಯಿನ್ ಚಪಾತಿ, ಪೇಪರ್ ವೇಸ್ಟ್, ಸ್ಕ್ರಾಪ್, ರಿಯಲ್ ಜರಿಗಳಿಗೆ ಈ ಹಿಂದೆ ಶೇ.12 ಜಿಎಸ್‍ಟಿ ಸ್ಲಾಬ್ ಇತ್ತು. ಇವಕ್ಕೆ ಈಗ ಶೇ.5 ಜಿಎಸ್‌ಟಿ ಸ್ಲಾಬಿಗೆ ಸೇರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಕೊಡುವ ಆಹಾರ ಪೊಟ್ಟಣ, ಬಯೋಮಾಸ್ ದಿಮ್ಮಿಗಳು, ಪ್ಲಾಸ್ಟಿಕ್, ರಬ್ಬರ್ ವೇಸ್ಟ್, ಪೆಯಿರಿಂಗ್ಸ್, ಸ್ಕಾರ್ಪ್‌ಗಳು ಶೇ.18ರ ಜಿಎಸ್‍ಟಿ ಸ್ಲಾಬ್‍ನಲ್ಲಿದ್ದು ಇವನ್ನು ಶೇ.5 ಜಿಎಸ್‍ಟಿ ವ್ಯಾಪ್ತಿಗೆ ತರಲಾಗಿದೆ. ಹಾರ್ಡ್ ರಬ್ಬರ್ ವೇಸ್ಟ್ ಅಥವಾ ಸ್ಕ್ರಾಪ್, ಇ-ವೇಸ್ಟ್‌ಗಳನ್ನು ಈ ಹಿಂದೆ ಶೇ.18, 28 ವ್ಯಾಪ್ತಿಯಲ್ಲಿದ್ದು ಇದೀಗೆ ಶೇ.5ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇನ್ನು ಡ್ಯೂಟಿ ಕ್ರೆಡಿಟ್ ಸ್ಕ್ರಿಪ್ಸ್‌ಗೆ ಈ ಹಿಂದೆ ಶೇ.5 ಜಿಎಸ್‍ಟಿ ಇದ್ದರೆ ಈಗ ಜಿಎಸ್‍ಟಿಯಿಂದ ಅದನ್ನು ಹೊರಗೆ ಇಡಲಾಗಿದೆ.

ಜವಳಿ ಕ್ಷೇತ್ರದಲ್ಲಿ ಯಂತ್ರಗಳು ಇಲ್ಲದೆ ಮಾನವ ತಯಾರು ಮಾಡಿದ ನೂಲು, ದಾರಗಳಿಗೆ, ಸಿಂಥಟಿಕ್, ಆರ್ಟಿಫಿಶಿಯಲ್ ಫಿಲಮೆಂಟ್, ಮನುಷ್ಯ ತಯಾರಿಸುವ ಫೈಬರ್ ನೂಲು ಈ ಹಿಂದೆ ಶೇ.18ರ ಜಿಎಸ್‍ಟಿ ವ್ಯಾಪ್ತಿಯಲ್ಲಿತ್ತು. ಇದನ್ನೀಗ ಶೇ.12ರ ವ್ಯಾಪ್ತಿಗೆ ತರಲಾಗಿದೆ.

ಸ್ಟೇಷನರಿ ಐಟಂಸ್, ಫ್ಲೋರ್ ಸ್ಟೋನ್ಸ್, ಡೀಸಲ್ ಇಂಜಿನ್ ಪಾರ್ಟ್ಸ್, ಪಂಪ್ ಪಾರ್ಟ್ಸ್ ಈ ಹಿಂದೆ ಶೇ.28ರ ಜಿಎಸ್‍ಟಿ ವ್ಯಾಪ್ತಿಯಲ್ಲಿದ್ದವು. ಇವನ್ನು ಈಗ ಶೇ.18ರ ವ್ಯಾಪ್ತಿಗೆ ತರಲಾಗಿದೆ.

ಇನ್ನು ಇವಿಷ್ಟೇ ಅಲ್ಲದೆ ರೆಸ್ಟೋರೆಂಟ್ ಹಾಕುವ ಶೇ.18 ಜಿಎಸ್‍ಟಿಯನ್ನು ಶೇ.12ಕ್ಕೆ ಇಳಿಸಲಾಗಿದೆ. ಇದರಿಂದ ಆ ಭಾರ ಭೋಜನಪ್ರಿಯರಿಗೆ ಕಡಿಮೆಯಾಗಲಿದೆ. ಆದರೆ ಎಸಿ ರೆಸ್ಟೋರೆಂಟ್‌ಗಳಲ್ಲಿ ಇನ್ನೊಮ್ಮೆ ಆಲೋಚಿಸಿ ಜಿಎಸ್‍ಟಿ ಹಾಕುತ್ತಾರಂತೆ. ಎರಡು ವಾರಗಳಲ್ಲಿ ಇದರ ಬಗ್ಗೆ ಸ್ಪಷ್ಟತೆ ಬರುತ್ತದೆಂದು ಜೇಟ್ಲಿ ತಿಳಿಸಿದ್ದಾರೆ. ಈಗ ಬದಲಾಗಿರುವ ಜಿಎಸ್‍ಟಿ ತೆಗಿಗೆ ಒಂದು ವಾರದಲ್ಲಿ ಜಾರಿಗೆ ಬರಲಿದೆ. ಇನ್ನು ರೂ.1.50 ಕೋಟಿ ಟರ್ನೋವರ್ ಇರುವ ವ್ಯಾಪಾರಿಗಳು 3 ತಿಂಗಳಿಗೊಮ್ಮೆ ರಿಟರ್ನ್ಸ್ ಫೈಲ್ ಮಾಡಬೇಕು. ರೂ.75 ಲಕ್ಷಗಳ ಟನೋಅರ್ ಇರುವ ಸಣ್ಣ, ಮಧ್ಯಮ ಗಾತ್ರದ ಉದ್ದಿಮೆಗಳು ಶೇ 1 ರಿಂದ 5ರವರೆಗೂ ತೆರಿಗೆ ಕಟ್ಟಬೇಕಾಗಿತ್ತು, ಇದೀಗ ಆ ಮಿತಿಯನ್ನು ರೂ.1 ಕೋಟಿಗೆ ಹೆಚ್ಚಿಸಲಾಗಿದೆ.

ಸುಮಾರು 27 ರೀತಿಯ ವಸ್ತುಗಳಿಗೆ ಜಿಎಸ್‍ಟಿ ಮಿತಿಯನ್ನು ಕಡಿಮೆ ಮಾಡುವ ಮೂಲಕ ಮೋದಿ ದೀಪಾವಳಿ ಮೊದಲೇ ಬಂದಿದೆ ಎಂದಿದ್ದರೆ, ಇದನ್ನು ಕಾಂಗ್ರೆಸ್ ಟೀಕಿಸಿದೆ. ಜಿಎಸ್‍ಟಿ ಎಲ್ಲ ವಿಧದಲ್ಲೂ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇದೀಗ ತೆರಿಗೆ ಬದಲಾವಣೆ ಮೂಲಕ ಎಲ್ಲಾ ವರ್ಗಗಳಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.