GSTಗೂ ಮೊದಲೇ ಬೈಕ್ಸ್ ಮೇಲೆ ಬಂಪರ್ ಆಫರ್ ಪ್ರಕಟಿಸಿದ ಕಂಪೆನಿಗಳು!!

ಕೊಂಡುಕೊಳ್ಳಬೇಕೆಂದಿದ್ದರೆ ಇನ್ನೇಕೆ ತಡ ಮಾಡುತ್ತೀರಿ? ಈಗಲೇ ಕೊಂಡುಕೊಳ್ಳಿ. ಸ್ವಲ್ಪ ಕೊಸರಾಡಿದರೆ ಇನ್ನಷ್ಟು ಡಿಸ್ಕೌಂಟ್ ಸಿಗುತ್ತದೆ. ಈಗಾಗಲೆ ಡಿಸ್ಕೌಂಟ್ ಸಹ ಚೆನ್ನಾಗಿಯೇ ಇದೆ. ಈ ಎಲ್ಲಾ ಆಫರ್ ಯಾವುದಕ್ಕೆ ಗೊತ್ತಾ ಬೈಕ್ಸ್‌ಗೆ. ನಿನ್ನೆಯವರೆಗೂ ಇದ್ದ ಬೈಕ್ ಶೋರೂಮ್ ಬೆಲೆಗಿಂತ…ಇಂದಿನಿಂದ ಕನಿಷ್ಟ 5 ಸಾವಿರ ಕಡಿಮೆಯಾಗಲಿದೆ. ಹಾಗಂತ ಇವೇನು ಹಳೆ ಗಾಡಿಗಳಲ್ಲ. ಎಲ್ಲವೂ ಹೊಸತು.

ಇನ್ನೂ ಹೇಳಬೇಕೆಂದರೆ ಸರಕಾರಿ ನಿಯಮಗಳ ಪ್ರಕಾರ ತಯಾರಾದಂತಹವು. ಈ ಆಫರ್ ಇದೇ ತಿಂಗಳ 30ರ ತನಕ ಜಾರಿಯಲ್ಲಿರುತ್ತದೆ. ಇದಕ್ಕೆ ಕಾರಣ ಇಲ್ಲದಿಲ್ಲ…ಅದು GST. ಜುಲೈ 1ರಿಂದ ಈ ಹೊಸ ತೆರಿಗೆ ವಿಧಾನ ಜಾರಿಗೆ ಬರಲಿದೆ. ಹಾಗಾಗಿ ಕೇಂದ್ರ ಸರಕಾರ ಬೈಕ್‌ಗಳ ಮೇಲೆ ಟ್ಯಾಕ್ಸನ್ನು ಶೇ.30ರಿಂದ ಶೇ.28ರ ಸ್ಲಾಬ್‌ನಲ್ಲಿ ಸೇರಿಸಿದೆ. ಅಂದರೆ ಶೇ.2ರಷ್ಟು ಕಡಿಮೆಯಾಗಲಿದೆ. ಇದನ್ನು ಲೆಕ್ಕಾಚಾರ ಹಾಕಿದ ಕಂಪೆನಿಗಳು..ಈಗಾಗಲೆ ಸಿದ್ಧವಾಗಿರುವ ಎಲ್ಲಾ ವಾಹನಗಳನ್ನು ರಸ್ತೆಗೆ ಇಳಿಸಬೇಕೆಂದು ನಿರ್ಧರಿಸಿದವು. ಅದರ ಭಾಗವಾಗಿ ಹೊಸ ಆಫರ್ ಪ್ರಕಟಿಸಿವೆ.

ಈಗಾಗಲೆ ಬಜಾಜ್ ಕಂಪೆನಿ ಒಂದೊಂದು ಬೈಕ್ ಮೇಲೆ ರೂ.4,500ರಿಂದ ರೂ.5,000ತನಕ ಬೆಲೆಯಲ್ಲಿ ಇಳಿಕೆ ಮಾಡಿದೆ. ಜುಲೈ 1ರಿಂದ ವಾಹನಗಳ ಬೆಲೆ ಕಡಿಮೆಯಾಗಲಿದೆ ಎಂಬ ಸಮಾಚಾರದಿಂದ ಯಾರೂ ಬೈಕ್ ಖರೀದಿಸುತ್ತಿಲ್ಲ. ಹಾಗಾಗಿ 15 ದಿನಗಳ ಮುಂಚಿತವಾಗಿಯೇ GST ಬೆನಿಫಿಟ್ಸನ್ನು ಗ್ರಾಹಕರಿಗೆ ಕಂಪೆನಿಗಳು ನೀಡಲು ಮುಂದೆ ಬಂದಿವೆ. ಸೇಲ್ಸ್ ಹೆಚ್ಚಿಸಿಕೊಳ್ಳುವುದರ ಭಾಗವಾಗಿ ಲಾಭವನ್ನು ಕಡಿಮೆ ಮಾಡಿಕೊಂಡಿವೆ.

 


Click Here To Download Kannada AP2TG App From PlayStore!