ಬಂಪರ್ ಆಫರ್: ಎಸಿಗಳು, ಕಾರುಗಳು, ಫೋನ್‌ಗಳ ಮೇಲೆ ಭಾರಿ ರಿಯಾಯಿತಿ.

ಈ ರೀತಿಯ ಅವಕಾಶ ಮತ್ತೆ ಬರಲ್ಲ. ಇಷ್ಟೆಲ್ಲಾ ಡಿಸ್ಕೌಂಟ್ ಮತ್ತೆ ಯಾರೂ ಕೊಡಲ್ಲ. ಈಗ ಹೇಳಿಕೊಳ್ಳುವಂತಹ ಸೀಸನ್ ಅಲ್ಲದಿದ್ದರೂ ಎಲೆಕ್ಟ್ರಾನಿಕ್ ಕಂಪೆನಿಗಳು ಭರ್ಜರಿ ಆಫರ್ ಪ್ರಕಟಿಸಿವೆ. ಮುಖ್ಯಾವಾಗಿ ಎಸಿಗಳು, ಟಿವಿ, ರೆಫ್ರಿಜರೇಟರ್, ಮೊಬೈಲ್ ಫೋನ್‌ಗಳು, ಕಾರಿನ ಮೇಲೆ ಭಾರಿ ರಿಯಾಯಿತಿ ಪ್ರಕಟಿಸಿವೆ. ಜುಲೈ 1 ರಿಂದ ಜಾರಿಯಾಗಲಿರುವ GST (ಸರಕು ಮತ್ತು ಸೇವಾ ತೆರಿಗೆ) ವಿಧಾನವೇ ಈ ರಿಯಾಯಿತಿಗೆ ಕಾರಣ.

ಜುಲೈ 1ರಿಂದ ಎಲ್ಲಾ ವಸ್ತುಗಳಿಗೂ ಹೊಸ ದರ ಜಾರಿಯಾಗಲಿದೆ. ತೆರಿಗೆ ಸಹ ಇವಕ್ಕೆ ಶೇ.28ರಷ್ಟಿರುತ್ತದೆ. ಸದ್ಯಕ್ಕೆ ಕಂಪೆನಿಗಳು ತಮ್ಮಲ್ಲಿನ ಸ್ಟಾಕನ್ನು ಕ್ಲಿಯರ್ ಮಾಡಿಕೊಳ್ಳುವ ಕೆಲಸದಲ್ಲಿ ಬಿಜಿಯಾಗಿವೆ. ಲಾಭದ ಬಗ್ಗೆ ಆಲೋಚಿಸದಿದ್ದರೂ ಸರಕನ್ನು ಖಾಲಿ ಮಾಡಿಕೊಳ್ಳಲು ನಿರ್ಧರಿಸಿವೆ. ಮುಂಬರುವ ತಿಂಗಳಿಂದ ಬೆಲೆಗಳಲ್ಲಿ ಭಾರಿ ವ್ಯತ್ಯಾಸ ಇರಲಿದೆ. ಟಿವಿಗಳು, ಎಸಿ, ಮೊಬೈಲ್ ಫೋನ್‍ಗಳು, ದುಬಾರಿ ಕಾರುಗಳು, ಚಪ್ಪಲಿಯಂತಹ ವಸ್ತುಗಳ ಮೇಲೆ ಭಾರಿ ರಿಯಾಯಿತಿ ಪ್ರಕಟಿಸಲಿವೆ ಕಂಪೆನಿಗಳು. ಈಗಾಗಲೆ ಪ್ರೀ ಜಿಎಸ್‌ಟಿ ಸೇಲ್ ಹೆಸರಿನಲ್ಲಿ paytm ದೇಶದಾದ್ಯಂತ ಇರುವ ಆರು ಸಾವಿರ ರೀಟೇರ್‌ಗಳ ಮೂಲಕ 500 ಬ್ರಾಂಡೆಡ್ ವಸ್ತುಗಳ ಮೇಲೆ ಭಾರಿ ಡಿಸ್ಕೌಂಟ್ ಪ್ರಕಟಿಸಿದೆ.

-ನಿನ್ನೆ ತನಕ 46 ಸಾವಿರ ರೂಪಾಯಿ ಇದ್ದ ಕಂಪೆನಿಯೊಂದರ ಟಿವಿ..ಜಿಎಸ್‍ಟಿ ಆಫರ್‌ನೊಂದಿಗೆ ಒಂಬತ್ತು ಸಾವಿರ ಕಡಿಮೆಗೆ ಅಂದರೆ ರೂ.37 ಸಾವಿರಕ್ಕೆ ಈಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. LG, Samsung, sony, Panasonic ಟಿವಿಗಳ ಮೇಲೆ ಈ ರೀತಿಯ ಆಫರ್ಸ್ ಇವೆ.

-ಓಪ್ಪೋ, ಮೈಕ್ರೋಮ್ಯಾಕ್ಸ್ ಸ್ಮಾರ್ಟ್ ಫೋನ್‍ಗಳ ಮೇಲೆ ಈಗಾಗಲೆ ರೂ.10 ಸಾವಿರ ಕ್ಯಾಶ್‍ಬ್ಯಾಕ್ ಆಫರ್ ಇದೆ. ಇನ್ನಷ್ಟು ಕಂಪೆನಿಗಳು ಸಹ ಇದೇ ಹಾದಿಯಲ್ಲಿ ಹೆಜ್ಜೆ ಹಾಕಲಿವೆ.

-ವಿದೇಶಗಳಿಂದ ಆಮದಾಗುವ ಮೊಬೈಲ್ ಫೋನ್‌ಗಳ ಮೇಲೆ ಸಹ ಕಂಪೆನಿಗಳು ಭಾರಿ ಆಫರ್ಸ್ ಪ್ರಕಟಿಸಿವೆ. I phone 7 ಮೇಲೆ 15 ಸಾವಿರ ತನಕ ಡಿಸ್ಕೌಂಟ್ ಇದೆ. Apple, dell, Lenovo ಕಂಪೆನಿಗಳ ಲ್ಯಾಪ್‌ಟಾಪ್‌ಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತಿವೆ.

-ಎಸಿಗಳ ಅತ್ಯಧಿಕವಾಗಿ ಶೇ10ರಿಂದ 15ರವರೆಗೂ ಡಿಸ್ಕೌಂಟ್ ಪ್ರಕಟಿಸಲಾಗಿದೆ. ಅನ್ ಸೀಸನ್ ಆದಕಾರಣ ತಿಂಗಳಾಂತ್ಯದವರೆಗೆ ಈ ಡಿಸ್ಕೌಂಟ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳು ಇವೆ.

-ರೆಫ್ರಿಜರೇಟರ್‌ಗಳ ಮೇಲೆ ರೂ.4 ಸಾವಿರ ತನಕ ಆಫರ್ಸ್ ಇವೆ. ಗೋದ್ರೇಜ್, ಎಲ್‌ಜಿ, Samsungನಂತಹ ಕಂಪೆನಿಗಳು ಶೇ.10 ರಿಂದ 12ರವರೆಗೂ ಡಿಸ್ಕೌಂಟ್‌ನಲ್ಲಿ ಮಾರಾಟ ಮಾಡುತ್ತಿವೆ.

-ಹೈ ಎಂಡ್, ಅಧಿಕ ಬೆಲೆ ಇರುವ ಕಾರುಗಳ ಮೇಲೆ 60 ಸಾವಿರದಿಂದ 1 ಲಕ್ಷದತನಕ ಆಫರ್ ಇದೆ.

-ದೇಶದಲ್ಲಿ ಲಭಿಸುತ್ತಿರುವ ಸುಮಾರು 500 ಬ್ರಾಂಡೆಡ್ ವಸ್ತುಗಳೆಲ್ಲಾ ಈ ತಿಂಗಳಾಂತ್ಯದವರೆಗೆ ಕಡಿಮೆ ಬೆಲೆಗೆ ಲಭ್ಯವಾಗಲಿವೆ.

 


Click Here To Download Kannada AP2TG App From PlayStore!