ಕೂದಲಿಗೆ ಬಣ್ಣ ಹಚ್ಚುತ್ತಿದ್ದೀರಾ….ಹಾಗಿದ್ದರೆ ಇದು ನಿಮಗಾಗಿ..!

ಒಂದು ಕಡೆ ಮಾಲಿನ್ಯ…ಇನ್ನೊಂದು ಕಡೆ ಇತಿಮಿತಿ ಇಲ್ಲದ ಆಹಾರಾಭ್ಯಾಸಗಳು. ಇದರ ಜತೆಗೆ ಹಾರ್ಮೋನ್ ಲೋಪದಿಂದ ಕೂದಲಿಗೆ ಶಾಪವಾಗಿ ಬದಲಾಗಿ ಚಿಕ್ಕ ವಯಸ್ಸಿಗೇ ವಯಸ್ಸಾದವರಂತೆ ಬದಲಾಗುತ್ತಿದ್ದಾರೆ ಯುವಕರು. ಚಿಕ್ಕ ವಯಸ್ಸಿಗೆ ಕೂದಲು ಬೆಳ್ಳಗಾಗುತ್ತಿರುವುದರಿಂದ…ಏನು ಮಾಡಬೇಕು ಎಂದು ಗೊತ್ತಿಲ್ಲದೆ ಸಲೂನ್‌ಗೆ ಹೋಗಿ ಇಷ್ಟವಾದ ಬಣ್ಣ ತಲೆಗೆ ಹಾಕಿಸಿಕೊಳ್ಳುವುದು ಅಭ್ಯಾಸವಾಗಿ ಹೋಗಿದೆ. ಇನ್ನೂ ಕೆಲವು ಯುವಕರು ಇರುವ ಕಪ್ಪು ಕೂದಲನ್ನೂ ಕಾಪಾಡಿಕೊಳ್ಳದೆ ಸ್ಟೈಲ್, ಫ್ಯಾಷನ್ ಎಂದು ನಾನಾ ರೀತಿಯ ಬಣ್ಣಗಳಲ್ಲಿ ಮುಳುಗೇಳಿಸುತ್ತಿದ್ದಾರೆ ತಮ್ಮ ಕೂದಲನ್ನು. ಆದರೆ ಟ್ರೆಂಡಿ ಲುಕ್‌ಗಾಗಿ ಕೂದಲಿಗೆ ಬಣ್ಣ ಹಚ್ಚಿದರೆ ಕೆಲವು ವಿಧದ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ಎಚ್ಚರಿಸುತ್ತಿದ್ದಾರೆ ವೈದ್ಯರು.

ಈ ಹೇರ್ ಡೈ‌ಗಳಲ್ಲಿ ಬಳಸುವ ರಾಸಾಯನಿಕಗಳಿಂದ ಚರ್ಮ ಸಂಬಂಧಿ ರೋಗಗಳು ಶೀಘ್ರವಾಗಿ ಬರುವ ಸಾಧ್ಯತೆಗಳು ಇವೆ ಎಂದು ತಾಜಾ ಸಂಶೋಧನೆಯಲ್ಲಿ ಗೊತ್ತಾಗಿದೆ. ಬಳಸುವ ಬಣ್ಣದಿಂದ ಕೂದಲು ಫಳಫಳ ಅಂತ ಹೊಳೆದರೂ, ಬಳಿಕ ಇರುವ ಕೂದಲು ಉದುರುವುದಷ್ಟೇ ಅಲ್ಲದೆ, ಕೂದಲು ಪೇಲವವಾಗಿ ಬಲಹೀನಗೊಳ್ಳುತ್ತದಂತೆ. ಈ ಹೇರ್ ಡೈ ಹೆಚ್ಚಾಗಿ ಬಳಸುವುದರಿಂದ ಅಸ್ತಮಾ ವ್ಯಾಧಿಗೆ ಗುರಿಯಾಗುತ್ತಿದ್ದಾರೆ ಎಂಬುದು ಅಧ್ಯಯನದಲ್ಲಿ ಗೊತ್ತಾಗಿದೆ. ಅಸ್ತಮಾ ಇರುವವರು ಈ ರಾಸಾಯನಿಕಗಳ ತಂಟೆಗೆ ಹೋಗದೆ ಇರುವುದೇ ಉತ್ತಮ, ಈಗಾಗಲೆ ಬಳಸುತ್ತಿರುವವರು ಕೂಡಲೆ ಬಿಡುವುದು ಉತ್ತಮ ಎನ್ನುತ್ತಿದ್ದಾರೆ ವೈದ್ಯರು. ಈ ಹೇರ್ ಡೈ ಹೆಚ್ಚಾಗಿ ಬಳಸಿದರೆ ಕ್ಯಾನ್ಸರ್ ಬರುವ ಸಾಧ್ಯತೆಗಳೂ ಇವೆ ಎಂದು ಎಚ್ಚರಿಸಿದ್ದಾರೆ.

ಇನ್ನು ಬಿಳಿ ಕೂದಲಿಂದ ತೊಂದರೆ ಅನುಭವಿಸುತ್ತಿರುವವರು ವಿಧಿಯಿಲ್ಲದ ಪರಿಸ್ಥಿತಿಯಲ್ಲಿ ಕೂದಲಿಗೆ ಬಣ್ಣ ಹಚ್ಚಬೇಕೆಂದರೆ ಮಾತ್ರ, ಸಂಬಂಧಿಸಿದ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಕೂದಲಿಗ ಹಾಕುವ ಬಣ್ಣಗಳು ಸಹ ರಾಸಾಯನಿಕಗಳಿಂದ ಕೂಡಿದ್ದಲ್ಲದ ನ್ಯಾಚುರಲ್ ಪ್ರಾಡಕ್ಟ್ಸನ್ನೇ ಬಳಸಬೇಕು. ಪ್ರಕೃತಿ ಸಿದ್ಧವಾದ ಬಣ್ಣಗಳು ಬಳಸಿದರೆ ಎರಡು ಮೂರು ತಿಂಗಳವರೆಗೂ ಬಿಳಿ ಕೂದಲ ಬಗ್ಗೆ ಆಲೋಚಿಸುವ ಅಗತ್ಯ ಇರಲ್ಲ. ಈ ಸಹಜ ಬಣ್ಣಗಳಿಂದ ಕೂದಲ ಬಣ್ಣ ಬದಲಾಗುವುದರ ಜತೆಗೆ…ಕೂದಲಿನ ಬುಡ ದೃಢವಾಗುತ್ತದೆ. ಗೋರಂಟಿ, ಅಲೋವೆರಾ, ನೆಲ್ಲಿ, ದಾಸವಾಳ ಎಲೆಗಳು, ಹೂವಿನಂತಹ ಸಹಜಸಿದ್ಧವಾದ ಪ್ರಕೃತಿಯಲ್ಲಿ ಸಿಗುವಂತಹವನ್ನು ನೇರವಾಗಿ ಅಥವಾ ಎಣ್ಣೆಯ ಮೂಲಕ ಕೂದಲಿಗೆ ಹಚ್ಚಿಕೊಂಡು ಸ್ನಾನ ಮಾಡುವುದು ಉತ್ತಮ ಎನ್ನುತ್ತಿದ್ದಾರೆ ವೈದ್ಯರು.