ಯಾವ ಹಣ್ಣಿನ ಸಿಪ್ಪೆಯಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ…

ಹಣ್ಣುಗಳಲ್ಲಿ ನಮ್ಮ ಆರೋಗ್ಯಕ್ಕೆ ಅವಶ್ಯಕವಿರುವ ಪೋಷಕಾಂಶಗಳು ಹೆತೇಚ್ಚವಾಗಿರುತ್ತವೆಂದು ಎಲ್ಲರಿಗೂ ತಿಳಿದಿರುವ ವಿಷಯ.ಆದರೆ ಅವುಗಳ ಸಿಪ್ಪೆಗಳಲ್ಲಿಯೂ ಸಾಕಷ್ಟು ಪ್ರಯೋಜನಗಳು, ಪೋಷಕಾಂಶಗಳಿವೆ. ಈ ವಿಷಯ ತಿಳಿಯದೇ ತುಂಬಾ ಜನರು ಹಣ್ಣುಗಳನ್ನು ಸಿಪ್ಪೆ ತೆಗೆದು ತಿನ್ನುತ್ತಿರುತ್ತಾರೆ. ಕೆಲವು ಹಣ್ಣುಗಳ ಸಿಪ್ಪೆಗಳು ರುಚಿಯಾಗಿದ್ದರೆ, ಮತ್ತೇ ಕೆಲವೂ ವಗುರಾಗಿರುತ್ತವೆ ಅಥವಾ ರುಚಿ ಇರುವುದಿಲ್ಲ. ಆದರೆ ಕೆಲವು ತರಹದ ಹಣ್ಣುಗಳ ಸಿಪ್ಪೆಗಳನ್ನು ಮಾತ್ರ ಬಿಸಾಡದೆ ತಿನ್ನಬೇಕೆಂದು ವೈದ್ಯರು ಸೂಚಿಸುತ್ತಾರೆ. ಸಿಪ್ಪೆಗಳಿಗೆ ಕೆಲವು ರೋಗಗಳನ್ನು ವಾಸಿ ಮಾಡುವ ಶಕ್ತಿ ಇರುತ್ತದೆಂದು, ಅವುಗಳಲ್ಲಿ ಅನೇಕ ತರಹದ ಹೆಲ್ತ್, ಬ್ಯೂಟಿ ಬೆನಿಪಿಟ್ಸ್ ಇರುತ್ತವೆ. ಅವೇನೆಂಬುದನ್ನು ತಿಳಿಯೋಣ…

ಕಲ್ಲಂಗಡಿ ಹಣ್ಣು:ಕಲ್ಲಂಗಡಿಹಣ್ಣಿನ ಸಿಪ್ಪೆಯಲ್ಲಿರುವ ಬಿಳಿಯಭಾಗದಲ್ಲಿ ಅನೇಕ ಪೋಷಕಾಂಶಗಳು ಇರುತ್ತವೆ. ಅವು ಆರೋಗ್ಯಕ್ಕೆ ಒಳ್ಳೆಯದು ಹಾಗೂ ತೂಕ ಕಡಿಮೆಯಾಗಲು ಸಹಾಯವಾಗುತ್ತವೆ. ಈ ಸಿಪ್ಪೆಯನ್ನು ಚರ್ಮದ ಮೇಲೆ ಉಜ್ಜಿಕೊಳ್ಳುವುದರಿಂದ ಚರ್ಮದ ಮೇಲಿನ ದೂಳು(ಡಸ್ಟ್) ಹೋಗುತ್ತದೆ, ಹಾಗೆಯೇ ಚರ್ಮ ಡ್ಯಾಮೇಜ್ ಆಗದಂತೆ ತಡೆಯುತ್ತದೆ.

ಕಿತ್ತಳೆ ಹಣ್ಣು:ತೂಕ ಕಡಿಮೆಯಾಗಲು(ಆರೆಂಜ್) ಕಿತ್ತಳೆಹಣ್ಣಿನ ಸಿಪ್ಪೆ ಸರಿಯಾದ ಪರಿಷ್ಕಾರ. ಹಾಗೆ ಇದು ನ್ಯಾಚುರಲ್ ಸ್ಕ್ರಬ್, ಬ್ಲೀಚಿಂಗ್ ನಂತೆ ಚರ್ಮದ ಮೇಲೆ ಕೆಲಸ ಮಾಡುತ್ತದೆ. ಹಲ್ಲುಗಳ ಆರೋಗ್ಯಕ್ಕೆ ಸಂಬಂಧಿತ ಸಮಸ್ಯೆಗಳಿಗೆ ಕಾನ್ಟಿಪೇಷನ್ ನಿವಾರಣೆಯಾಗುತ್ತದೆ. ಯಾಸಿಡಿಟಿಯಿಂದ ಉಪಶಮನವಾಗಬೇಕೆಂದರೆ ಇದು ಅವಶ್ಯಕವಾಗಿ ಸಹಾಯವಾಗುತ್ತದೆ. ಅಷ್ಟೇಅಲ್ಲ ಆರೆಂಜ್ ಪೀಲ್ಸ್ ಕ್ಯಾನ್ಸರ್ ರಿಸ್ಕನ್ನು ಕಡಿಮೆಮಾಡುವುದರ ಜೊತೆಗೆ ಹೃದಯ ಸಂಬಂಧಿತ ರೋಗಗಳನ್ನು ನಿವಾರಿಸುತ್ತದೆ.

ದಾಳಿಂಬೆ:ದಾಳಿಂಬೆ ಸಿಪ್ಪೆಯಲ್ಲಿಯೂ ಲೆಕ್ಕವಿಲ್ಲದಷ್ಟು ಆರೋಗ್ಯ ರಹಸ್ಯಗಳಿವೆ. ದಾಳಿಂಬೆ ಪಿಂಪುಲ್ಸ್, ರಾಷೇಸ್, ಕೂದಲು ಉದುರುವುದು, ತಲೆಯಲ್ಲಿನ ಹೊಟ್ಟು ನಿವಾರಣೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಹಾಗೆಯೇ ಹಾರ್ಟ್ ಡಿಸೀಸ್, ಗಂಟಲು ನೋವು ನಿವಾರಣೆಯಾಲ್ಲಿಯೂ ದಾಳಿಂಬೆ ಸಿಪ್ಪೆ ಸಹಾಯ ಮಾಡುತ್ತದೆ. ಹಾಗೆಯೇ ಮೂಳೆಗಳ ಆರೋಗ್ಯಕ್ಕೆ, ಹಲ್ಲುಗಳ ಶುದ್ದಿಗೆ ಉಪಯೋಗವಾಗುತ್ತದೆ.

ಬಾಳೇಹಣ್ಣು:ಬಾಳೇಹಣ್ಣಿನ ಸಿಪ್ಪೆಯ ಭಾಗದಿಂದ ಹಲ್ಲಿನ ಮೇಲೆ ಉಜ್ಜುವುದರಿಂದ ಹಲ್ಲು ನೈಸರ್ಗಿಕವಾಗಿ, ಬಿಳುಪಾಗಿ ಹೊಳೆಯುತ್ತವೆ. ಹಾಗೆಯೇ ಬಾಳೇಹಣ್ಣಿನ ಸಿಪ್ಪೆಯನ್ನು ಸುಟ್ಟ ಚರ್ಮದ ಮೇಲಿಡುವುದರಿಂದ ವಾಸಿಯಾಗುತ್ತದೆ. ಒಡೆದ ಪಾದಗಳ ಮೇಲೆ ಈ ಸಿಪ್ಪೆಯಿಂದ ರಬ್ ಮಾಡಿದರೆ, ವಾರದೊಳಗೆ ಅದ್ಭುತವಾದ ಫಲಿತಗಳನ್ನು ನೋಡಬಹುದು.

ಸೌತೆಕಾಯಿ:ಸೌತೆಕಾಯಿ ಸಿಪ್ಪೆಯಲ್ಲಿ ಹೈಪೈಬರ್, ಕಡಿಮೆ ಕ್ಯಾಲರಿಗಳು ಇರುವುದರಿಂದ ತೂಕ ಕಡಿಮೆಮಾಡುತ್ತದೆ. ಸೌತೆಕಾಯಿ ಸಿಪ್ಪೆಯಲ್ಲಿ ಬೀಟಾಕೆರೋಟಿನ್,ವಿಟಮಿನ್-ಎ, ವಿಟಮಿನ್-ಕೆ ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ, ಬ್ಲಡ್ ಕ್ಲಾಟ್ಸ್ ನಿವಾರಣೆ,  ಕಣ್ಣಿನ ದೃಷ್ಟಿ ಉತ್ತಮಗೊಳ್ಳಲು ಸಹಾಯವಾಗುತ್ತವೆ.

ಸೇಬು:ಸೇಬು ಸಿಪ್ಪೆಯನ್ನು ತಿನ್ನುವುದರಿಂದ ಪ್ಲೆವನಾಯಡ್ಸ್, ಕೆಮಿಕಲ್ಸ್ ಕ್ಯಾನ್ಸರ್ ಸೆಲ್ಸ್ ಅನ್ನು ನಾಶಮಾಡುತ್ತದೆ. ಇಮ್ಯೂನಿಟಿ ಹೆಚ್ಚಗುತ್ತದೆ. ಇದರಲ್ಲಿ ಒಬೇಟಿಸಿಟಿಯನ್ನು ಕಡಮೆ ಮಾಡುವ ಗುಣವಿರುತ್ತದೆ.

ನಿಂಬೆ:ಇದು ಚರ್ಮದ ಮೇಲೆ ನ್ಯಾಚುರಲ್ ಮಾಯಿಶ್ಚರೈಜರ್ ನಂತೆ ಕೆಲಸಮಾಡುತ್ತದೆ. ಈ ಸಿಪ್ಪೆಯು ತೂಕ ಕಡಿಮೆಮಾಡಲು, ಹಲ್ಲುಗಳ ಸಮಸ್ಯೆಗಳನ್ನು ನಿವಾರಿಸಲು ಉಪಯೋಗವಾಗುತ್ತದೆ. ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು, ಕ್ಯಾನ್ಸರ್ ನಿಂದ ತೊಂದರೆ ಅನುಭಸುತ್ತಿರುವವರಿಗೆ ಒಳ್ಳೆಯದು. ಯಾಂಟಿಯಾಕ್ಸಿಡೆಂಟ್’ಗಳು ಇರುತ್ತವೆ. ಟಾಕ್ಸಿನ್ಸ್ ಗಳನ್ನು ಹೊರಗೆ ಕಳುಹಿಸಿ ಕಡಿಮೆ ಮಾಡುತ್ತವೆ.


Click Here To Download Kannada AP2TG App From PlayStore!