ನಾಯಿಗಳು ಕಾಲನ್ನು ಮೇಲೆತ್ತಿ ವಾಹನಗಳ ಟೈರುಗಳ ಮೇಲೆ ಯಾಕೆ ಮೂತ್ರವಿಸರ್ಜಿಸುತ್ತವೆಂದು ಗೊತ್ತಾ..?

ಅನಾದಿಕಾಲದಿಂದಲೂ ಮನುಷ್ಯ ನಾಯಿಗಳನ್ನು ವಿಶ್ವಾಸವುಳ್ಳ ಪ್ರಾಣಿಯೆಂದು ಭಾವಿಸಿದ್ದಾರೆ. ಎಷ್ಟೋ ವರ್ಷಗಳಿಂದ ಮಾನವರಿಗೆ ಒಳ್ಳೆಯ ಗೆಳೆಯರಂತಾಗಿವೆ. ನಾಯಿಗಳನ್ನು ಸಾಕುವುದರಿಂದ ನಮ್ಮ ಮನೆಗಳನ್ನು ಕಾಯುವುದರೊಂದಿಗೆ, ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿಯೂ ಸಹಕರಿಸುತ್ತಿವೆ. ಹಲವಾರು ಜನ ನಾಯಿಗಳನ್ನು ಸಾಕುವುದನ್ನು ಹವ್ಯಾಸವನ್ನಾಗಿರಿಸಿಕೊಂಡಿದ್ದಾರೆ. ನಾಯಿಗಳಲ್ಲಿ ಅನೇಕ ತಳಿಗಳಿದ್ದು, ತಳಿಗನುಸಾರವಾಗಿ ಬೆಲೆಯೂ ಇರುತ್ತದೆ. ಬೀದಿ ನಾಯಿಯಾಗಲಿ, ನಾವು ಸಾಕಿದ ನಾಯಿಯಾಗಲೀ ಮೂತ್ರ ವಿಸರ್ಜನೆ ಮಾಡುವ ಶೈಲಿ ನಮ್ಮಲ್ಲಿ ಅಚ್ಚರಿ ಮೂಡಿಸುತ್ತದೆ. ಯಾವುದೇ ನಾಯಿಯಾಗಲಿ ವಾಹನಗಳನ್ನು ಕಂಡಾಗ ಕೇವಲ ಟೈರ್ ಗಳ ಮೇಲೆ ಮಾತ್ರ ಮೂತ್ರ ವಿಸರ್ಜಿಸುತ್ತವೆ. ನಾಯಿಗಳ ಈ ವಿಚಿತ್ರ ಪ್ರವರ್ತನೆಯ ಬಗ್ಗೆ ತಿಳಿಯೋಣ.

ಯಾವುದೇ ವಾಹನವಾಗಲಿ ರಸ್ತೆಯ ಮೇಲೆ ಚಲಿಸುತ್ತವಲ್ಲವೇ? ಮಣ್ಣಿನ ರಸ್ತೆ, ಟಾರ್ ರಸ್ತೆ, ಕಾಂಕ್ರೀಟ್ ರಸ್ತೆ, ಕೆಸರಿನಿಂದ ಕೂಡಿದ ರಸ್ತೆ ಹೀಗೆ ಹಲವು ರೀತಿಯ ರಸ್ತೆಗಳಲ್ಲಿ ವಾಹನಗಳು ಚಲಿಸುತ್ತವೆ. ಹೀಗೆ ಚಲಿಸುವಾಗ ಟೈರುಗಳಿಗೆ ಕಸ ಕಡ್ಡಿ, ವ್ಯರ್ಥ ಪದಾರ್ಥಗಳ ಮೇಲೆ ಚಲಿಸುತ್ತವೆ. ಅವುಗಳಲ್ಲಿ ಮಾನವರ, ಪ್ರಾಣಿಗಳ ಮಲ, ಆಹರ ಪದಾರ್ಥಗಳ ತ್ಯಾಜ್ಯ ಹೀಗೆ ಯಾವುದೇ ಇರಬಹುದು. ಈ ರೀತಿ ವ್ಯರ್ತ ಪದಾರ್ಥಗಳಲ್ಲಿ ಚಲಿಸಿದ ಟೈರುಗಳು, ನಾಯಿಗಳಿಗೆ ಡಂಪಿಂಗ್ ಯಾರ್ಡ್ ನಂತೆ ಭಾಸವಾಗುತ್ತವೆ. ನಾಯಿಗಳು ಮೂತ್ರ ವಿಸರ್ಜಿಸುವಾಗ ಟೈರುಗಳನ್ನು ಮೂಸಿ ನೋಡಿದಾಗ, ಆಟೈರುಗಳಿಂದ ಹೊರಹೊಮ್ಮುವ ವಾಸನೆ ಕಸದ ವಾಸನೆಯಂತೆ ಇರುತ್ತದೆ. ಆದುದರಿಂದಲೇ, ಅವುಗಳನ್ನು ಕಸ ವಿಲೇವಾರಿ ಪ್ರದೇಶವೆಂದು ಭಾವಿಸಿ, ಟೈರುಗಳ ಮೇಲೆ ಮೂತ್ರವಿಸರ್ಜಿಸುತ್ತವೆ.

ಆದರೆ, ನಾಯಿಗಳು ಕಾಲನ್ನು ಮೇಲೆತ್ತಿ ಯಾಕೆ ಮೂತ್ರ ವಿಸರ್ಜಿಸುತ್ತವೆಂದರೆ…ಸಾಮಾನ್ಯವಾಗಿ ಯಾವುದೇ ನಾಯಿಯಾದರೂ ಕಾಲು ಮೇಲೆತ್ತಿ ಸ್ವಲ್ಪ ಎತ್ತರದಲ್ಲಿ ಮೂತ್ರ ವಿಸರ್ಜಿಸುತ್ತವೆ. ಅದೂ ಸಹ ತಮ್ಮ ಮೂತಿಗೆ ಎಟುಕುವಷ್ಟು ಎತ್ತರದಲ್ಲೇ ಮೂತ್ರಿಸುತ್ತವೆ ಹೀಗೆ ಮಾಡುವುದು ಯಾಕೆಂದರೆ…ಇನ್ನೊಮ್ಮ ಮೂಸಿ ನೋಡಿ ಮೂತ್ರ ವಿಸರ್ಜಿಸಲು ಅನುಕೂಲವಾಗುವಂತೆ ಎತ್ತರದಲ್ಲೇ ಮೂತ್ರ ಮಾಡುತ್ತವೆ. ಆದರೆ, ಕೇವಲ ಟೈರುಗಳ ಮೇಲಲ್ಲದೆ, ದೀರ್ಘಕಾಲ ಸ್ವಚ್ಛ ಮಾಡದ ಇತರೇ ಯಾವುದೇ ಸ್ಥಳದಲ್ಲೂ ಮೂತ್ರ ವಿಸರ್ಜಿಸುತ್ತವೆ. ಯಾಕೆಂದರೆ ಅಂತಹ ಪ್ರದೇಶಗಳೂ ಸಹ ಕಸ ವಿಲೇವಾರಿ ಪ್ರದೇಶಗಳಂತೆ ವಾಸನೆ ಹೊಂದಿರುತ್ತವೆ. ಆದುದರಿಂದ ನಿಮ್ಮ ವಾಹನಗಳ ಟೈರುಗಳ ಮೇಲೆ ನಾಯಿಗಳು ಮೂತ್ರ ವಿಸರ್ಜಿಸಿದರೆ ಅವುಗಳನ್ನು ಹೊಡೆದು ಓಡಿಸಬೇಡಿ. ನಾವು ಮಾಡುವ ತಪ್ಪು ,ನಾಯಿಗಳು ಮೂತ್ರ ವಿಸರ್ಜಿಸುವಂತೆ ಮಾಡುತ್ತದೆ. ಆದುದರಿಂದ ವಸ್ತುಗಳನ್ನು, ವಾಹನಗಳನ್ನು ಆದಷ್ಟು ಮಟ್ಟಿಗೆ ಶುಭ್ರವಾಗಿರಿಸಿಕೊಳ್ಳುವುದು ನಮ್ಮ ಕರ್ತವ್ಯ.