5೦೦ ಜನ ಭಯೋತ್ಪಾದಕರನ್ನು ಎದುರಿಸಿ ಪರಮವೀರ ಚಕ್ರ ಪದಕ ಪಡೆದ ಮೊದಲ ಸೈನಿಕನ ಈತ…..!

ಅದು 1947ನೇ ವರ್ಷ. ಅಕ್ಟೋಬರ್ ತಿಂಗಳು 27 ನೇ ತಾರೀಖು. ಸ್ವಾತಂತ್ರ್ಯ ಬಂದು ಕೇವಲ ಎರಡು ತಿಂಗಳು ಮಾತ್ರವೇ ಆಗಿತ್ತು. ಬ್ರಿಟೀಷರ ಆಳ್ವಿಕೆಯಿಂದ ಮುಕ್ತಿ ಪಡೆದು ಸ್ವಂತ ಆಳ್ವಿಕೆಯ ಕಡೆಗೆ ಹೆಜ್ಜೆಹಾಕುತ್ತಿರುವ ಸ್ವತಂತ್ರ ಭಾರತವನ್ನು ಯಾವಾಗಲೂ ರಕ್ಷಿಸುವುದಕ್ಕಾಗಿ, ಶ್ರೀನಗರ, ಜಮ್ಮು ಗಡಿ ಪ್ರದೇಶಗಳಲ್ಲಿ ಸೈನಿಕರು ಆಗಲೇ ಗಡಿ ರಕ್ಷಣೆಗಿಳಿದಿದ್ದರು. ಅವರಿಗೆ ಆಗ ವಹಿಸಿದ ಕೆಲಸ…. ಗಡಿಭಾಗದಲ್ಲಿದ್ದು, ಶತ್ರುಗಳು ಬರದ ಹಾಗೇ ನೋಡಿಕೊಳ್ಳುವುದು. ಕಾವಲು ಕಾಯುವುದು. ಆದರೆ ಮುಂದಿನ ವಾರದೊಳಗೆ ಭಯೋತ್ಪಾದಕರ ರೂಪದಲ್ಲಿ ಒಂದು ದೊಡ್ಡ ಅಪಘಾತ ಬರುತ್ತದೆಯೆಂದು, ಆಗಿನ್ನೂ ನಮ್ಮ ಸೈನಿಕರಿಗೆ ಗೊತ್ತಿರಲಿಲ್ಲ. ಆದರೂ ಅವರು ಯಾವಾಗಲೂ ಎಚ್ಚರಿಕೆಯಿಂದಿರುತ್ತಿದ್ದರು. ಹೀಗೆ ಇದ್ದಕ್ಕಿದ್ದಂತೆ ಒಂದೇಸಾರಿ ಭಯೋತ್ಪಾದಕರ ಗುಂಪು ಧಾಳಿಮಾಡಿತು. 200 ಜನ ಸೈನಿಕರು ಕಾವಲು ಕಾಯುತ್ತಿದ್ದಾಗ, ಶ್ರೀನಗರ, ಜಮ್ಮು ಗಡಿ ಪ್ರದೇಶಗಳಲ್ಲಿ  ಪ್ರವೇಶಿದ 500 ಜನ ಟೆರ್ರರಿಸ್ಟುಗಳು ಭಾರತ ಸೈನಿಕರನ್ನು ಗುರಿಯಾಗಿಸಿಕೊಂಡ ಗುಂಡಿನ ಮಳೆಗೆರೆದರು.

ಆಗಿನ್ನೂ ನಮ್ಮ ಸೈನಿಕರಿಗೆ  ಸರಿಯಾದ ಆಯುಧಗಳಿರಲಿಲ್ಲ. ಆಗತಾನೇ ಸ್ವಾತಂತ್ರ್ಯ ಸಿಕ್ಕಿದ್ದರಿಂದ… ಎಲ್ಲಾ ಶಾಖೆಗಳು ಆಗತಾನೇ ಹೊಸದಾಗಿ ನಿರ್ವಹಿಸಲ್ಪಡುತ್ತಿವೆ. ಹಾಗಾಗಿ ನಮ್ಮ ಸೈನಿಕರು ಇರುವ ಹಳೆಯ ಆಯುಧಾಗಳಿಂದಲೇ ಕಾವಲು ಕಾಯಲು ಸಿದ್ದರಾಗಿದ್ದಾರೆ. ಅದೇ ಸಮಯದಲ್ಲಿ ದಾಳಿ ಮಾಡಿದಂತಹ ಭಯೋತ್ಪಾದಕರ ಬಳಿ  ಮಾತ್ರ ಅತ್ಯಾಧುನಿಕವಾದ ಆಯುಧಗಳಿವೆ. ಮೋಟರ್’ಗಳೂ ಇವೆ. ಅವುಗಳಿಂದ ಅವರು ಗಡಿಭಾಗದಲ್ಲಿರುವ ನಮ್ಮ ಸೈನಿಕರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ಇದರಿಂದ ಮೊದ ಮೊದಲು ನಮ್ಮ ಸೈನಿಕರು ವಿಚಲಿತರಾದರೂ ನಂತರ  ಚೈತನ್ಯವಂತರಾಗಿ ಅವರ ದಾಳಿಯನ್ನು ಎದುರಿಸುತ್ತಿದ್ದರು. ಹಾಗೆ ಎದುರಿಸುತ್ತಿದ್ದ ನಮ್ಮ ಸೈನಿಕರ ಸಂಖ್ಯೆ ಕೇವಲ 50 ಜನ ಮಾತ್ರ. ಆದರೂ ತಮ್ಮ ಹತ್ತಿರಕ್ಕೆ ನುಗ್ಗಿ ಬರುತ್ತಿದ್ದ ಭಯೋತ್ಪಾದಕರನ್ನು ಹಿಮ್ಮೆಟ್ಟಿಸುತ್ತಿದ್ದರೆ ವಿನಃ ಹಿಂದೆಜ್ಜೆಹಾಕಲಿಲ್ಲ. ಏಕೆಂದರೆ ಆ ಗುಂಪಿಗೆ ನಾಯಕತ್ವವನ್ನು ವಹಿಸಿಕೊಂದವರು ಮೇಜರ್ ಸೋಮನಾಥ್ ಶರ್ಮಾ. ಅಂದಿಗೆ ಆತನು ಮಿಲಿಟರಿಯಲ್ಲಿ ಸೇರಿ ಕೇವಲ 8 ತಿಂಗಳು ಮಾತ್ರವಾಗಿದೆ. ಆದರೂ ಟ್ರೈನಿಂಗ್ ನಲ್ಲಿ ಶರ್ಮಾ ತೋರಿಸಿದ ಪ್ರತಿಭೆಯ ಆಧಾರವಾಗಿ ಆತನಿಗೆ  50 ಜನ ಸೈನಿಕರಿರುವ  ಗುಂಪನ್ನು ನಿರ್ವಹಿಸುವ ಮೇಜರ್ ಜವಾಬ್ದಾರಿಯನ್ನು  ಮಿಲಿಟರಿಯ ಉನ್ನತಾಧಿಕಾರಿಗಳು ಒಪ್ಪಿಸಿದರು. ಅವರು ಆತನ ಮೇಲಿಟ್ಟಿರುವ ವಿಶ್ವಾಸವನ್ನು ಶರ್ಮಾರವರು ಸುಳ್ಳುಮಾಡಲಿಲ್ಲ. ಭಯೋತ್ಪಾದಕರನ್ನು ಮಣ್ಣುಮುಕ್ಕಿಸಲು ಮುನ್ನುಗ್ಗಿದರು. ಆದರೆ ಅವರ ಆಧುನಿಕ ಆಯುಧಗಳ ಮುಂದೆ ನಮ್ಮ ಸೈನಿಕರು ಹೆಚ್ಚಿನಕಾಲ ಉಳಿಯಲಾಗಲಿಲ್ಲ. ತುಂಬಾ ಜನ ಆಗಲೇ ಮೃತ ಪಟ್ಟಿದ್ದಾರೆ. ಇನ್ನೂ ಕೆಲವರು ತೀರ್ವವಾದ ಗಾಯಗಳಿಂದ  ನೆಲಕ್ಕುರಿಳಿದರು. ಆದರೂ ಶರ್ಮಾ ಒಬ್ಬನೇ ಭಯೋತ್ಪಾದಕರ ಎದುರು ನಿಂತು ಹೋರಾಟ ಮಾಡಿದನು. ಸಾಕಷ್ಟು ಜನ ಭಯೋತ್ಪಾದಕರನ್ನು ಕೊನೆಗಾಣಿಸಿದನು. ಆದರೆ ಕೊನೆಗೆ ಟೆರರಿಸ್ಟುಗಳ ಗುಂಡಿಗೆ ಬಲಿಯಾದನು. ಆತನು ತನ್ನ ಕೊನೇ ಗಳಿಗೆಯಲ್ಲಿ ಹೇಳಿದಂತ ಮಾತುಗಳು ಹೀಗಿವೆ…..

“ಶತ್ರುಗಳು ನನಗೆ ಅತೀ ಸಮೀಪದಲ್ಲಿದ್ದರು. ನಮ್ಮ ಸಂಖ್ಯೆ  ತುಂಬಾ ಕಡಿಮೆಯಾಯಿತು. ಸೈನಿಕರೆಲ್ಲರೂ ಮೃತಪಟ್ಟಿದ್ದರು. ನಮ್ಮ ಕಡೆಗೆ ಭಯೋತ್ಪಾದಕರು ಮುನ್ನುಗ್ಗಿ ಬರುತ್ತಿದ್ದಾರೆ. ಆದರೂ ನಾನು ಉಳಿದ ಸೈನಿಕರೊಂದಿಗೆ ಸೇರಿ ಮುಂದಕ್ಕೆ ಹೋಗಲು ನಿರ್ಧರಿಸಿದೆ, ನನ್ನ ಉಸಿರು ನಿಲ್ಲುವವರೆಗೂ ಶತ್ರುಗಳ ಮೇಲೆ ಹೋರಾಟವನ್ನು ನಿಲ್ಲಿಸಲಿಲ್ಲ.”

ಹಾಗೆ ಶರ್ಮಾ ಮೃತಪಟ್ಟರೂ ಹೆಚ್ಚು ಸಮಯದವರಗೆ ಹೋರಾಟ ಮಾಡಿದ್ದರಿಂದ ಶತ್ರುಗಳಿಗೆ ನಮ್ಮ ಭೂಭಾಗದೊಳಗೆ ಪ್ರವೇಶಮಾಡಲು ತಡವಾಯಿತು. ಅಷ್ಟೊತ್ತಿಗೆ  ಇನ್ನೂ ಕೆಲವು ಸೈನಿಕರು ಅಲ್ಲಿಗೆ ಸೇರಿ  ಉಳಿದಂತಹ ಶತ್ರುಗಳನ್ನು ಕೊನೆಗಾಣಿಸಿದರು. ಇದೆಲ್ಲದಕ್ಕೂ ಶರ್ಮರವರು ಮಾಡಿದ ಹೋರಾಟವೇ ಕಾರಣ. ಸೋಮನಾಥ್ ಶರ್ಮರವರ ತ್ಯಾಗ  ಅಮರವಾದದ್ದು. ಆತನಿಗೆ ಸರ್ಕಾರ ಪರಮವೀರಚಕ್ರ ಪದಕವನ್ನು ನೀಡಿ ಗೌರವಿಸಿದೆ. ಈ ಅವಾರ್ಡ್’ನ್ನು ಪಡೆದ ಮೊದಲ ಸೈನಿಕನಾಗಿ ಶರ್ಮಾನ ಹೆಸರು ಇತಿಹಾಸದಲ್ಲಿ ಉಳಿದುಕೊಂಡಿದೆ. 1923 ಜನವರಿ 21 ರಂದು ಹಿಮಾಚಲ ಪ್ರದೇಶದಲ್ಲಿ ಜನಿಸಿದ ಆತ, ತನ್ನ ಕುಟುಂಬದಲ್ಲಿನ ತಂದೆ, ಮಾವ ಸಹ  ಸೈನಿಕರಾಗಿ ಸೇವೆ ಮಾಡಿದ್ದನ್ನು ನೋಡಿ ತಾನೂ ಸೈನಿಕನಾಗಬೇಕೆಂದು ನಿರ್ಧಾರ ಮಾಡಿದ್ದರು. ಹಾಗೆಯೇ ಇಡೀ ದೇಶವೇ ಹೆಮ್ಮೆ ಪಡುವಂತಹ ಸೈನಿಕನಾದನು. ಮಿಲಟರಿಯಲ್ಲಿ ಕೆಲಸಮಾಡಿದ್ದು ಕೆಲವು ತಿಂಗಳುಗಳೇ ಆದರೂ ಶತ್ರುಗಳ ಹೋರಾಟದಲ್ಲಿ ಆತನು ತೋರಿಸಿದ ಧೈರ್ಯ, ತ್ಯಾಗವನ್ನು ನಾವು ಮರೆಯಲಾಗುವುದಿಲ್ಲ.
ಜೈಹಿಂದ್….


Click Here To Download Kannada AP2TG App From PlayStore!

Share this post

scroll to top