ಓದಿದ್ದು ಪಿಯುಸಿ…ಸಂಬಳ ತಿಂಗಳಿಗೆ ರೂ.12 ಲಕ್ಷಗಳು.!

ಕನಸು ನನಸಾಗುವುದು ಎಂದರೆ ಇದೇ…ಟೆಕ್ ದಿಗ್ಗಜ ಗೂಗಲ್‌ನಲ್ಲಿ ಅದ್ಭುತವಾದ ಉದ್ಯೋಗವನ್ನು ಸಾಧಿಸುವ ಮೂಲಕ ಕುಗ್ರಾಮವೊಂದರ ಸರಕಾರಿ ಶಾಲೆ ವಿದ್ಯಾರ್ಥಿಯೊಬ್ಬನ ಕನಸು ನಿಜವಾಗಿದೆ. ಅದೂ ತಿಂಗಳಿಗೆ ರೂ.12 ಲಕ್ಷ ಸಂಬಳದೊಂದಿಗೆ. ಚಂಡಿಗಢದ ಸರಕಾರಿ ಮಾದರಿ ಹಿರಿಯ ಸೆಕೆಂಡರಿ ಶಾಲೆ ವಿದ್ಯಾರ್ಥಿ ಹರ್ಷಿತ್ ಶರ್ಮಾ ಈ ಬಂಪರ್ ಆಫರ್ ದಕ್ಕಿಸಿಕೊಂಡಿದ್ದಾನೆ.

ಸಾಧಿಸಬೇಕೆಂಬ ಛಲದೊಂದಿಗೆ ಅಂದುಕೊಂಡಿದ್ದನ್ನು ಸಾಧಿಸಿದ ಮಣ್ಣಿನಲ್ಲಿ ಮಾಣಿಕ್ಯದಂತಹ ಕಥೆಗಳನ್ನು ಬಹಳಷ್ಟು ಕೇಳಿದ್ದೇವೆ. ಅಂತಹವರನ್ನು ಪ್ರತ್ಯಕ್ಷವಾಗಿ ಕೆಲವನ್ನು ನೋಡಿದ್ದೇವೆ ಕೂಡ. ಚಂಡಿಗಢದ ಹರ್ಷಿತ್ ಶರ್ಮಾ ಕಥೆ ಆ ತರಹದ್ದೇ. ಅಲ್ಲಿನ ಸರಕಾರಿ ಶಾಲೆಯಲ್ಲಿ ಮಾಡೆಲ್ ಸೆಕೆಂಡರಿ ಶಾಲೆ ಐಟಿ ವಿದ್ಯಾರ್ಥಿ ಹರ್ಷಿತ್ ಶರ್ಮಾ ಗೂಗಲ್‍ನಲ್ಲಿ ಉದ್ಯೋಗ ಸಾಧಿಸಬೇಕೆಂದು ಕನಸು ಕಂಡ. ಅದೂ ಗ್ರಾಫಿಕ್ ಡಿಸೈನರ್ ಆಗಿ. ಆ ಆಲೋಚನೆ ಆತನ ಜೀವನವಲ್ಲಿ ಅತ್ಯಂತ ಯಶಸ್ವಿಯಾದ ತಿರುವಿಗೆ ಕಾರಣವಾಯಿತು. ಇಂಟರ್‌ನೆಟ್ ದಿಗ್ಗಜ ಗೂಗಲ್ ಕಂಪೆನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಉದ್ಯೋಗಕ್ಕೆ ತಿಂಗಳಿಗೆ ರೂ.4 ಲಕ್ಷ ವೇತನದೊಂದಿಗೆ ಆಯ್ಕೆಯಾದ. ಹರ್ಷಿತ್ ಡಿಸೈನ್ ಮಾಡಿ ಕಳುಹಿಸಿದ ಪೋಸ್ಟರ್ಸ್‌ಗೆ ಗೂಗಲ್ ಕಂಪೆನಿ ಅಪಾಯಿಂಟ್‌ಮೆಂಟ್ ಲೆಟರ್ ಕಳುಹಿಸಿದೆ. ಅಷ್ಟೇ ಅಲ್ಲ ಗೂಗಲ್ ಒಂದು ವರ್ಷ ಶಿಕ್ಷಣಕ್ಕಾಗಿ ಕ್ಯಾಲಿಫೋರ್ನಿಯಾಗೆ ಕಳುಹಿಸುತ್ತಿದೆ. ಅಲ್ಲಿ ಆತನಿಗೆ ರೂ.4 ಲಕ್ಷ ಸ್ಟೈಫಂಡ್ ನೀಡಲಿದೆ. ಶಿಕ್ಷಣ ಮುಗಿದ ಬಳಿಕ ಹರ್ಷಿತ್ ತಿಂಗಳಿಗೆ ರೂ.12 ಲಕ್ಷ ವೇತನ ಪಡೆಯಲಿದ್ದಾರೆ.

ಹದಿನೇಳನೇ ವಯಸ್ಸಿನಿಂದ ಗ್ರಾಫಿಕ್ ಡಿಸೈನಿಂಗ್ ಮಾಡಲು ಆರಂಭಿಸಿದೆ ಎಂದೂ, ಇದಕ್ಕೆ ತನ್ನ ಬಂಧು ರೋಹಿತ್ ಶರ್ಮಾ ಪ್ರೇರಣೆ ಎಂದು ಹರ್ಷಿತ್ ಶರ್ಮಾ ತಿಳಿಸಿದ್ದಾರೆ. ಗೂಗಲ್‌ಗೆ ಸೆಲೆಕ್ಟ್ ಆಗುತ್ತೀನೆಂದು ಅಂದುಕೊಂಡಿರಲಿಲ್ಲ. ಆದರೆ ನನ್ನ ಗುರಿ ಅದೇ ಆಗಿತ್ತು. ಕೊನೆಗೆ ಸಾಧಿಸಿದೆ. ಕನಸು ನನಸಾಯಿತು. ಇದಕ್ಕಾಗಿ ಯಾವುದೇ ವಿಶೇಷ ತರಬೇತಿ ತೆಗೆದುಕೊಳ್ಳಲಿಲ್ಲವೆಂದು ಗ್ರಾಫಿಕ್ ಡಿಸೈನಿಂಗ್‌ನಲ್ಲಿ ತನ್ನನ್ನು ತಿದ್ದಿತೀಡಿದ ರೋಹಿತ್‌ಗೆ ಕೃತಜ್ಞತೆಗಳನ್ನು ತಿಳಿಸಿದ್ದಾನೆ. ತನ್ನ ಮಾವನ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಹರ್ಷಿತ್ ಅಮಿತಾನಂದ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 7ರಂದು ಹರ್ಷಿತ್ ಕ್ಯಾಲಿಫೋರ್ನಿಯಾಗೆ ತರಬೇತಿಗಾಗಿ ಹೊರಡಲಿದ್ದಾರೆ.

ಇದಿಷ್ಟೇ ಅಲ್ಲದೆ ಡಿಜಿಟಲ್ ಇಂಡಿಯಾದಲ್ಲಿನ ಅತ್ಯುತ್ತಮ ಪ್ರತಿಭೆಗೆ ಹರ್ಷಿ ಪಿಎಂಓ ಕಾರ್ಯಾಲಯದಿಂದ ರೂ.7 ಸಾವಿರ ಬಹುಮಾನವನ್ನೂ ಪಡೆದಿದ್ದಾನೆ. ಇದರ ಜತೆಗೆ ಓದಿಕೊಳ್ಳುತ್ತಾ ಬಾಲಿವುಡ್, ಹಾಲಿವುಡ್ ತಾರೆಗಳ ಪೋಸ್ಟರ್‌ಗಳನ್ನು ರೂಪಿಸುತ್ತಿದ್ದ. ಆ ಮೂಲಕ ತಿಂಗಳಿಗೆ ರೂ.40-50 ಸಾವಿರ ಗಳಿಸುತ್ತಿದ್ದ.

 


Click Here To Download Kannada AP2TG App From PlayStore!