ಹಾವಿನ ವಿಷ ಕುಡಿದರೂ ಈತ ಸಾಯಲಿಲ್ಲ…ಯಾಕೆಂಬ ವಿಷಯ ತಿಳಿದರೆ ಶಾಕ್ ಆಗುತ್ತೀರಿ!!!

ತುಂಬಾ ಜನರಿಗೆ ಹಾವನ್ನು ಕಂಡರೆ ಹೌಹಾರುತ್ತಾರೆ. ಹಾವನ್ನು ಕಂಡು ರಾತ್ರಿ ಕನಸಿನಲ್ಲಿ ಬಂದಿತ್ತೆಂಬ ಭಯಕ್ಕೆ ತಾಯಿತಗಳನ್ನೂ ಕಟ್ಟಿಸಿಕೊಳ್ಳುವವರಿದ್ದಾರೆ. ಹಾವು ಕಡಿಯುವುದರಿಂದ ಅಲ್ಲದೆ ಹಾವಿನ ಬಗ್ಗೆ ಇರುವ ಭಯದಿಂದ ಸಂಭವಿಸುವ ಮರಣಗಳೇ ಹೆಚ್ಚಾಗಿರುತ್ತವೆ ಎಂಬ ಪುರಾವೆಗಳೂ ಇವೆ. ಸಾಮಾನ್ಯರಿಗೇ ಹೀಗೆ ನಡೆಯಬಹುದು. ಆದರೆ ಕೆಲವರಿಗೆ ಹಾವುಗಳೊಂದಿಗೆ ಆಟವಾಡುವುದೂ ಒಂದು ಆಸೆಯಾಗಿರುತ್ತದೆ. ಹಾವುಗಳೊಂದಿಗೆ ಕುಣಿಯುತ್ತಾ ಎಲ್ಲರಲ್ಲೂ ಆಶ್ಚರ್ಯಪಡಿಸುತ್ತಾರೆ. ಹಾಗೆಯೇ ಇಲ್ಲೊಬ್ಬ ನಮ್ಮ ಮನೆಯಲ್ಲಿ ಹಾವು ಬಂದಿದೆ ಎಂದು ಫೋನ್ ಮಾಡಿದರೆ ಸಾಕು ಉತ್ಸಾಹದಿಂದ ಬಂದು ಹಾವನ್ನು ಹಿಡಿದು ಕೊರಳಿಗೆ ಹೂಮಾಲೆಯಂತೆ ಧರಿಸುತ್ತಾನೆ. ಅದರ ವಿಷವನ್ನು ಕಾಫಿ, ಟೀಯಲ್ಲಿ ಬೆರೆಸಿಕೊಂಡು ಕುಡಿಯುತ್ತಾನೆ. ಹಲ್ಲುಗಳನ್ನು ಕಿತ್ತು ಕಾಡಲ್ಲಿ ಬಿಡುತ್ತಾನೆ. ಇದನ್ನು ನೆನೆಸಿಕೊಂಡರೆ ಮೈಯೆಲ್ಲಾ ಝುಂ ಎನ್ನುತ್ತದೆ. ವಿಚಿತ್ರವೆನಿಸುತ್ತದೆ.

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ತಲಾರಿ ಚಿರಂಜೀವಿ ಹೀಗೆ ಹೇಳುತ್ತಾರೆ. ಆರ್ಮಿಯಲ್ಲಿ ಕೆಲಸ ಮಾಡುವ ತನ್ನ ಅಜ್ಜನಿಗಷ್ಟೇ ಅಲ್ಲದೆ ತನ್ನ ತಂದೆಗೂ ಹಾವುಗಳನ್ನು ಹಿಡಿಯುವ ಅಭ್ಯಾಸ ಇತ್ತಂತೆ.

ಬಾಲ್ಯದಲ್ಲಿ ಹಾವು ಮತ್ತು ಕಪ್ಪೆಯೊಂದಿಗೆ ತಾನು ಆಟವಾಡುವುದನ್ನು ಕಂಡು ಅವರ ತಂದೆ ತನ್ನನ್ನು ಗದರಿಸಿ ಹಾವನ್ನು ಸಾಯಿಸಿದರಂತೆ. ಅದರಿಂದ ತನಗೆ ಕೋಪ ಬಂದು ಹಾವನ್ನು ಸಾಯಿಸುವುದು ತಪ್ಪು. ಅದರೊಂದಿಗೆ ಏಕೆ ಆಟವಾಡಬಾರದು ಎಂದು ಆಲೋಚನೆ ಹುಟ್ಟಿತು. ತಂದೆ ಇಲ್ಲದ ಸಮಯದಲ್ಲಿ ಹಾವಿನೊಂದಿಗೆ ಆಟವಾಡುತ್ತಿದ್ದ. ಒಂದು ದಿನ ಹಾವಿನ ವಿಷ ಕುಡಿದರೆ ಸಾಯುತ್ತೇವೆಯೇ, ಇಲ್ಲವೇ ಎಂಬ ಅನುಮಾನ ಬಂದು ಟೀ ಯಲ್ಲಿ ವಿಷವನ್ನು ಬೆರೆಸಿ ಕುಡಿದಾಗ ಏನೂ ಆಗಲಿಲ್ಲ. ಅಂದಿನಿಂದ ಹಾಗೆಯೇ ಅಭ್ಯಾಸವಾಗಿಬಿಟ್ಟಿತು. ಯಾರ ಹತ್ತಿರವೂ ಹಣವನ್ನು ತೆಗೆದುಕೊಳ್ಳದೆ ಹಿಡಿದ ಹಾವುಗಳನ್ನು ಸಾಯಿಸದೆ…ಅವುಗಳಿಂದ ಅಪಾಯವೆಂದು ಹಲ್ಲುಗಳನ್ನು ಕಿತ್ತು ಕಾಡಿನಲ್ಲಿ ಬಿಡುತ್ತೇನೆ. ಇದುವರೆಗೂ ಸುಮಾರು 500 ಹಾವುಗಳನ್ನು ಹಿಡಿದಿದ್ದೇನೆ. ಅವುಗಳನ್ನು ಹಿಡಿಯುವಾಗ ಎಷ್ಟೋ ಸಲ ಕಚ್ಚಿವೆ. ಮದ್ಯಪಾನ ಮಾಡಿ ಮಲಗಿಕೊಳ್ಳುತ್ತಿದ್ದೆ ಆದರೂ ನನಗೆ ಏನೂ ಆಗಿಲ್ಲ.

ಹಾವಿನ ವಿಷವನ್ನು ವೆನಂ ಎನ್ನುತ್ತಾರೆ. ಇದು ಒಂದು ಪ್ರೋಟೀನ್. ಇದನ್ನು ಕುಡಿದಾಗ ಜೀರ್ಣಾಶಯದ ಒಳಗೆ ಹೋಗುವುದರಿಂದ ಪ್ರಾಣಾಪಾಯ ಸಂಭವಿಸುವುದಿಲ್ಲ. ಭೂಮಿ ಮೇಲೆ 300 ಕ್ಕೂ ಅಧಿಕ ರೀತಿಯ ಹಾವುಗಳಿವೆ. ಶೇ.98 ರಷ್ಟು ಹಾವುಗಳಲ್ಲಿ ವಿಷ ಇರುವುದಿಲ್ಲ. ಉಳಿದ ಶೇ.2 ರಷ್ಟು ಹಾವುಗಳು ಕಡಿದರೆ ಮಾತ್ರ ಅಪಾಯ ಇರುತ್ತದೆ ಎನ್ನುತ್ತಾರೆ… ಕರ್ನೂಲು ಜಿಲ್ಲೆಯ “ಜನ ವಿಜ್ಞಾನ ವೇದಿಕೆ” ಯ ನಾಯಕ ಸುರೇಶ್.


Click Here To Download Kannada AP2TG App From PlayStore!