ಮಳೆ ನೀರನ್ನು ಕುಡಿಯಬಹುದೇ..? ಕುಡಿದರೆ ಏನಾಗುತ್ತದೆ..?

ಮಳೆ…ಕಳೆದ ಒಂದು ವಾರದಿಂದ ಬಹಳಷ್ಟು ಕಡೆ ಸುರಿಯುತ್ತಿದೆ. ಆದರೆ ಕೆಲವು ಕಡೆ ಮಳೆ ಇಲ್ಲ. ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಇದೆಲ್ಲಾ ಬಿಡಿ..ಈಗ ವಿಷಯಕ್ಕೆ ಬರೋಣ. ಮಳೆ ನೀರಿನ ಬಗ್ಗೆ ಜನರಲ್ಲಿ ಈಗಲೂ ಕೆಲವು ಸಂದೇಹಗಳಿವೆ. ಮಳೆ ನೀರನ್ನು ಕುಡಿಯಬಹುದೇ, ಕುಡಿಯಬಾರದೆ? ಇದಕ್ಕೆ ವಿಜ್ಞಾನಿಗಳು ಕೊಡುತ್ತಿರುವ ಉತ್ತರ…ಹೌದು, ಮಳೆ ನೀರನ್ನು ಕುಡಿಯಬಹುದು. ಅದರಿಂದ ನಮಗೆ ಯಾವುದೇ ತೊಂದರೆ ಇಲ್ಲ. ನಿಜವಾಗಿ ಹೇಳಬೇಕೆಂದರೆ ಈ ನೀರು ಜಗತ್ತಿನಲ್ಲೇ ಅತ್ಯುತ್ತಮವಾದದ್ದು. ವಿಜ್ಞಾನಿಗಳು ಮಾಡಿರುವ ಅಧ್ಯಯನವೇ ಇದನ್ನು ಖಚಿತಪಡಿಸಿವೆ. ಆದರೆ ಮಳೆನೀರನ್ನು ನೇರವಾಗಿ ಸಂಗ್ರಹಿಸಬೇಕು. ಅದೂ ಕೂಡ ಸ್ವಚ್ಛವಾದ ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆ ರೀತಿ ಸಂಗ್ರಹಿಸಿದ ನೀರನ್ನು ಕುಡಿಯಬಹುದು. ಇದರಿಂದ ಏನೆಲ್ಲಾ ಲಾಭ ಇದೆ ಅಂತ ಈಗ ನೋಡೋಣ.

1. ಮಳೆ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ವ್ಯರ್ಥಗಳು ಹೊರಹೋಗುತ್ತವೆ. ದೇಹ ಆಂತರಿಕವಾಗಿ ಸ್ವಚ್ಛವಾಗುತ್ತದೆ. ರಕ್ತದಲ್ಲಿನ ಪಿಎಚ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ದೇಹದಲ್ಲಿನ ದ್ರವಗಳು ಸಮಪ್ರಮಾಣದಲ್ಲಿರುತ್ತದೆ.

2. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕ್ಯಾನ್ಸರ್ ನಂತಹ ಕಾಯಿಲೆಗಳು ಬರಲ್ಲ. ಸೋಂಕು ಸಹ ಬರದಂತೆ ಕಾಪಾಡುತ್ತದೆ. ರೋಗಗಳಿಂದ ರಕ್ಷಣೆ ಸಿಗುತ್ತದೆ.

3. ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 2, 3 ಟೇಬಲ್ ಸ್ಫೂನ್ ಮಳೆ ನೀರನ್ನು ಕುಡಿದರೆ ಜೀರ್ಣ ಸಮಸ್ಯೆಗಳು ನಿವಾರಣೆಯಾಗುತ್ತವೆ. ಗ್ಯಾಸ್, ಅಸಿಡಿಟಿ, ಮಲಬದ್ಧತೆ ಇರಲ್ಲ. ಕರುಳು, ಜೀರ್ಣಕೋಶ ಸ್ವಚ್ಛವಾಗುತ್ತದೆ.

4. ಮಳೆ ನೀರನ್ನು ಕುಡಿಯುತ್ತಿದ್ದರೂ ಅಥವಾ ಆ ನೀರಿನಿಂದ ಸ್ನಾನ ಮಾಡಿದರೂ ಕೂದಲು ದೃಢವಾಗಿ ಬದಲಾಗುತ್ತದೆ. ದಟ್ಟವಾಗಿ ಬೆಳೆಯುತ್ತವೆ. ತಲೆಹೊಟ್ಟಿನ ಸಮಸ್ಯೆ ಇರಲ್ಲ. ಕೂದಲಿಗೆ ಬೇಕಾದ ಪೋಷಣೆ ಲಭಿಸುತ್ತದೆ.

5. ಮಳೆ ನೀರಿನಿಂದ ಚರ್ಮ ಕಾಂತಿಯುವಾಗಿ ಬದಲಾಗುತ್ತದೆ. ಮೃದುವಾಗಿ ತಯಾರಾಗುತ್ತದೆ. ಯಾವಾಗಲೂ ಯೌವನದಿಂದ ಕಾಣುತ್ತೀರ. ಚರ್ಮ ಸಮಸ್ಯೆಗಳು ಇರಲ್ಲ. ಮೊಡವೆಗಳು, ಮಚ್ಚೆಗಳು ಮಾಯವಾಗುತ್ತವೆ.

6. ಮಳೆ ನೀರಿನಿಂದ ಬಟ್ಟೆ ಒಗೆದರೆ ಅವು ಬಹಳ ಬೇಗ ಕೊಳೆಯನ್ನು ಬಿಟ್ಟುಕೊಳ್ಳುತ್ತದೆ. ಕೊಳೆ ಬೇಗ ಹೋಗುತ್ತದೆ. ಬಟ್ಟೆಗಳು ಸಹ ಮೃದುವಾಗಿ ಇರುತ್ತವೆ. ಕಲರ್ ಹೋಗಲ್ಲ.

7. ಮಳೆ ನೀರು ಗಿಡಗಳಿಗೆ ತುಂಬಾ ಒಳ್ಳೆಯದು. ಆ ನೀರನ್ನು ಸಂಗ್ರಹಿಸಿ ನಿತ್ಯ ಗಿಡಗಳಿಗೆ ಹಾಕಿದರೆ ಗಿಡಗಳು ದಟ್ಟವಾಗಿ ಬೆಳೆಯುತ್ತವೆ.

8. ನಮಗಷ್ಟೆ ಅಲ್ಲ, ಮಳೆ ನೀರು ನಾಯಿಗಳು, ಬೆಕ್ಕುಗಳು, ಇತರೆ ಸಾಕು ಪ್ರಾಣಿಗಳಿಗೂ ಒಳ್ಳೆಯದು. ಅವಕ್ಕೂ ಆರೋಗ್ಯ ಚೆನ್ನಾಗಿರುತ್ತದೆ.

9. ಮಳೆ ನೀರನ್ನು ಒಂದು ಗ್ಲಾಸ್‌ನಲ್ಲಿ ತೆಗೆದುಕೊಂಡು ಅದರಲ್ಲಿ 1/4 ಟೀಸ್ಫೂನ್ ಅರಿಶಿಣ ಬೆರೆಸಿ ನಿತ್ಯ ಬೆಳಗ್ಗೆ ಕುಡಿಯುತ್ತಿದ್ದರೆ ಅಧಿಕ ತೂಕ ಕಡಿಮೆಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.

ಗರ್ಭಿಣಿಯರು ಮಳೆ ನೀರನ್ನು ಕುಡಿಯಬಾರದು. ಆ ನೀರನ್ನು ಕುದಿಸಿ ಕುಡಿಯಬೇಕು. ಇದರಿಂದ ಯಾವುದೇ ಸಮಸ್ಯೆ ಬರಲ್ಲ. ಇಲ್ಲದಿದ್ದರೆ ಹೊಟ್ಟೆಯಲ್ಲಿನ ಭ್ರೂಣ ಸೋಂಕಿಗೆ ಗುರಿಯಾಗುತ್ತದೆ. ಮಳೆ ನೀರನ್ನು ತಡೆದುಕೊಳ್ಳುವ ಶಕ್ತಿ ಭ್ರೂಣಕ್ಕೆ ಇರಲ್ಲ. ಇನ್ನು ಮಳೆ ನೀರನ್ನು ಸಂಗ್ರಹಿಸುವಲ್ಲೂ ಎಚ್ಚರಿಕೆ ವಹಿಸಬೇಕು. ಮಳೆ ನೀರು ಗೋಡೆಗಳು, ಗಿಡಗಳು, ಮನೆ ಮಾಳಿಗೆ ಈ ರೀತಿ ಯಾವುದನ್ನೂ ತಾಕದೆ ನೇರವಾಗಿ ಪಾತ್ರೆಗೆ ಬೀಳುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಯಾವುದನ್ನಾದರೂ ತಾಕಿದರೆ ಅವುಗಳಲ್ಲಿ ಇರುವ ಬ್ಯಾಕ್ಟೀರಿಯಾ, ಕೆಮಿಕಲ್ಸ್ ನೀರಿನಲ್ಲಿ ಸೇರುತ್ತದೆ, ನಮಗೆ ಸೋಂಕುಗಳು ಉಂಟಾಗುತ್ತವೆ.

 


Click Here To Download Kannada AP2TG App From PlayStore!