ಈಗ ಧಾರಾಳವಾಗಿ ಸಿಗುವ ಹೀರೇಕಾಯಿ ಮಹತ್ವ ಗೊತ್ತಾದರೆ…ಈವತ್ತೇ ಶುರುವಚ್ಚಿಕೊಳ್ತೀರ!!

ಮಾಮೂಲಿಯಾಗಿ ಆದರೆ ಹೀರೇಕಾಯಿ ತಿನ್ನಬೇಕೆಂದರೆ ತುಂಬಾ ಮಂದಿ ಇಷ್ಟಪಡಲ್ಲ. ಮುಖ ಒಂಥರಾ ಮಾಡ್ತಾರೆ. ಅಯ್ಯೋ ಈವತ್ತೂ ಹೀರೇಕಾಯಾ? ಅಂತಾರೆ. ಆದರೆ ಹೀರೇಕಾಯಿ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಅಂತಿದ್ದಾರೆ ವೈದ್ಯರು. ಹೀರೇಕಾಯಿ ನಮ್ಮ ಆಹಾರದಲ್ಲಿ ಕಡ್ಡಾಯವಾಗಿ ಇರಬೇಕಾದ ತರಕಾರಿ ಅಂತಿದ್ದಾರೆ ವೈದ್ಯರು. ಹೀರೇಕಾಯಲ್ಲಿ ಸಹಜವಾಗಿರುವ ನಾರಿನ ಅಂಶದಲ್ಲಿ ಅದೆಷ್ಟೋ ಪ್ರಯೋಜನಗಳಿವೆಯಂತೆ. ಇನ್ನೂ ಏನೇನು ಲಾಭ ಅಂತ ನೋಡೋಣ ಬನ್ನಿ…

  • ಇದು ಸುಲಭವಾಗಿ ಜೀರ್ಣವಾಗುತ್ತದೆ. ಆ ಬಳಿಕ ಮಲಬದ್ಧತೆ, ಜೀರ್ಣ ಸಂಬಂಧಿ ಸಮಸ್ಯೆಗಳು ಮಾಯವಾಗುತ್ತವೆ.
  • ಹೀರೇಕಾಯಲ್ಲಿ ನೀರಿನ ಅಂಶ ಹೆಚ್ಚಾಗಿರುವ ಕಾರಣ ಮಲಬದ್ಧತೆ ಬರದಂತೆ, ಮೂಲವ್ಯಾಧಿ ಇರುವವರಿಗೆ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
  • ಇದರಲ್ಲಿನ ಬೀಟಾ ಕೆರೋಟಿನ್ ಎಂಬ ಪದಾರ್ಥ ರಕ್ತವನ್ನು ಶುದ್ಧಗೊಳಿಸುತ್ತದೆ, ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.
  • ಅಷ್ಟೇ ಅಲ್ಲದೆ ಇದು ಲಿವರ್, ಹೃದಯದ ಕೆಲಸವನ್ನು ಇನ್ನಷ್ಟು ಉತ್ತಮ ಪಡಿಸುತ್ತದೆ.
  • ಹೀರೇಕಾಯಲ್ಲಿ ಕೊಬ್ಬು, ಕೊಲೆಸ್ಟರಾಲ್ ಅಂಶ ಕಡಿಮೆ ಇರುವ ಕಾರಣ ತೂಕ ಕಡಿಮೆಯಾಗಬೇಕು ಎಂದಿರುವವರಿಗೆ ಇದು ಉತ್ತಮ ಆಹಾರ. ಹಸಿವನ್ನು ನೀಗಿಸುತ್ತಾ ತೂಕ ಕಡಿಮೆಯಾಗಲು ಹೀರೇಕಾಯಿ ಒಳ್ಳೆಯದು ಅಂತಿದ್ದಾರೆ ವೈದ್ಯರು. ಇನ್ನು ನಿತ್ಯ ಒಂದು ಗ್ಲಾಸ್ ಹೀರೇಕಾಯಿ ಜ್ಯೂಸ್ ಕುಡಿದರೆ ಕಾಮಾಲೆ ಕಡಿಮೆಯಾಗುತ್ತದೆ.

ಇನ್ನು ಎಲ್ಲರಿಗಿಂತಲೂ ಮಧುಮೇಹ ರೋಗಿಗಳಿಗಾದರೆ ಅತ್ಯದ್ಭುತವಾಗಿ ಕೆಲಸ ಮಾಡುತ್ತದೆ. ಇದನ್ನು ಕಾಯಿ ರೂಪದಲ್ಲಾದರೂ, ಪಲ್ಯ, ಅಥವಾ ಚಟ್ನಿ ರೂಪದಲ್ಲಿ, ಜ್ಯೂಸ್ ಮಾಡಿಕೊಂಡು ಕುಡಿದರೂ ಮಧುಮೇಹವನ್ನು ನಿಯಂತ್ರಿಸುತ್ತದೆ. ಇಷ್ಟೆಲ್ಲಾ ರೋಗಗಳು ಹೀರೇಕಾಯಿಯಿಂದಲೇ ಸಾಧ್ಯವಾಗುತ್ತದೆ ಎಂದರೆ ಯಾರು ತಾನೆ ಹೀರೇಕಾಯಿ ತಿನ್ನಲ್ಲ ಹೇಳಿ. ಈಗ ಹೆಚ್ಚಾಗಿ ಸಿಗುವ ತರಕಾರಿ ಇದು. ಎಲ್ಲಾ ಕಾಯಿಲೆಗಳಿಗೂ ಇದು ಉತ್ತಮ ಔಷಧಿ ಇದ್ದಂತೆ. ಇಂದೇ ಹೀರೇಕಾಯಿ ತಿನ್ನುವುದನ್ನು ಶುರುವಚ್ಚಿಕೊಳ್ಳಿ.

 


Click Here To Download Kannada AP2TG App From PlayStore!