ಆರೋಗ್ಯ ಸಲಹೆಗಳು: ತುಳಸಿ ಎಲೆಗಳಿಂದ ಟೈಫಾಯಿಡ್ ದೂರ.

ಆರೋಗ್ಯವೇ ಮಹಾಭಾಗ್ಯ ಅಂತಾರೆ ಹಿರಿಯರು. ಆರೋಗ್ಯವಾಗಿದ್ದರಷ್ಟೆ ನಾವು ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ ನಿತ್ಯ ಕೆಲಸದಲ್ಲಿ ಬ್ಯುಸಿಯಾಗಿರುವವರಿಗೆ ಆರೋಗ್ಯದ ಬಗ್ಗೆ ಅಷ್ಟು ಆಸಕ್ತಿ ಇರಲ್ಲ. ಇಂತಹವರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ತುತ್ತಾದರೂ ವೈದ್ಯರ ಬಳಿಗೆ ಓಡುತ್ತಾರೆ. ಔಷಧಿಗಳ ಮೇಲೆ ಔಷಧಿ ನುಂಗಬೇಕಾಗುತ್ತದೆ. ಹಾಗಾಗಿ ಅದೆಷ್ಟೇ ಕೆಲಸ ಕಾರ್ಯಗಳಿದ್ದರೂ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಸಮಸ್ಯೆ ಚಿಕ್ಕದಿದ್ದಾಗಲೇ ಅದನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿಕೊಳ್ಳಬೇಕು. ಮನೆಯಲ್ಲೇ ಆರೋಗ್ಯ ಸಲಹೆಗಳನ್ನು ಪಾಲಿಸುವ ಮೂಲಕ ಕೆಲವು ಅನಾರೋಗ್ಯಗಳನ್ನು ನಿವಾರಿಸಿಕೊಳ್ಳಬಹುದು. ಅವು ಏನು ಅಂತ ಈಗ ನೋಡೋಣ…

 

  • ನಿತ್ಯ ತುಳಸಿ ಎಲೆಗಳನ್ನು ತಿಂದರೆ ಹೆಪಟೈಟಿಸ್, ಟೈಫಾಯಿಡ್‌ನಂತಹ ರೋಗಗಳು ಹತ್ತಿರ ಸುಳಿಯಲ್ಲ.
  • ಒಣ ಖರ್ಜೂರವನ್ನು ಬಿಸಿನೀರಿನಲ್ಲಿ ನೆನೆಸಿ, ಆ ನೀರನ್ನು ಜೇನಿನೊಂದಿಗೆ ಬೆರೆಸಿ ಕುಡುದರೆ ಅಸ್ತಮಾ ರೋಗಿಗಳಿಗೆ ಇದು ಉತ್ತಮ.
  •  ಹುಣಸೆ ಸೊಪ್ಪು, ನೀರು, ಉಪ್ಪು ಬೆರೆಸಿ…ಚೆನ್ನಾಗಿ ಕಾಸಿ, ಆ ನೀರಿನಿಂದ ಬಟ್ಟೆಯಲ್ಲಿ ಕಾವು ಕೊಟ್ಟರೆ ಕೀಲುನೋವಿನಿಂದ ಉಪಶಮನ ಸಿಗುತ್ತದೆ.
  • ಹಲ್ಲುನೋವಿನಿಂದ ನರಳುತ್ತಿರುವವರು ನಿಂಬೆರಸದಲ್ಲಿ ಇಂಗು ಬೆರೆಸಿ ಸ್ವಲ್ಪ ಬಿಸಿ ಮಾಡಿ ಆ ರಸವನ್ನು ನೋವಿರುವ ಹಲ್ಲಿನ ಬಳಿ ಇಟ್ಟುಕೊಂಡರೆ ನೋವು ಶೀಘ್ರ ಕಡಿಮೆಯಾಗುತ್ತದೆ.
  •  ಒಳ್ಳೆಯ ಗಂಧವನ್ನು ಅರೆದು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚಿಕೊಂಡರೆ ಚರ್ಮದ ಮೇಲಿನ ದದ್ದುಗಳು, ಕಪ್ಪು ಮಚ್ಚೆಗಳು ಕಡಿಮೆಯಾಗುತ್ತವೆ.
  • ಸೊಳ್ಳೆಗಳು, ಯಾವುದಾದರೂ ಹುಳುಗಳು ಕಚ್ಚಿದಾಗ ಉರಿ, ನೋವಾಗುತ್ತದೆ. ಅದರ ಮೇಲೆ ನಿಂಬೆರಸ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
  •  ದಂತಕ್ಷಯದಿಂದ ತೊಂದರೆ ಅನುಭವಿಸುತ್ತಿರುವವರು ಎರಡು ತುಳಸಿ ಎಲೆ, ಚಿಟಿಕೆ ಉಪ್ಪು, ಚಿಟಿಕೆ ಮೆಣಸು ಬೆರೆಸಿ ಪೇಸ್ಟ್ ತರಹ ಮಾಡಿಕೊಂಡು ಹಚ್ಚಿದರೆ ಶೀಘ್ರವಾಗಿ ಅದರಿಂದ ವಿಮುಕ್ತಿ ಪಡೆಯಬಹುದು.

 

 


Click Here To Download Kannada AP2TG App From PlayStore!