ಹೃದಯಾಘಾತ ರಾತ್ರಿ 2 ಗಂಟೆ ಯಿಂದ 2:30 ಸಮಯದಲ್ಲೆ ಹೆಚ್ಚಾಗಿ ಕಂಡು ಬರುತ್ತದೆ ಏಕೆ ಗೋತ್ತಾ…?

ನೀವು ಗಮನಿಸಿದ್ದೀರೊ, ಇಲ್ಲವೋ ಅನೇಕ ಸಂದರ್ಭಗಳಲ್ಲಿ ಹಾರ್ಟ್ ಎಟಾಕ್ ರಾತ್ರಿ 02 ಗಂಟೆಯಿಂದ ಸಮಯದಲ್ಲೆ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಯದಲ್ಲೇ ಬರುವುದಕ್ಕೆ ಕಾರಣವೇನೆಂದರೆ….. ಮಾನವ ಶರೀರದಲ್ಲಿ ಒಂದೊಂದು ಅವಯವ ಒಂದೊಂದು ಸಮಯದಲ್ಲಿ ತುಂಬಾ ವೇಗವಾಗಿ ಕೆಲಸ ಮಾಡುತ್ತದೆ. ಈ ನಿಯಮಕ್ಕೆ ಅನುಗುಣವಾಗಿ ಹೃದಯ ರಾತ್ರಿ 2 ಗಂಟೆ ಯಿಂದ 02:30 ಸಮಯದೊಳಗೆ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಆ ಸಮಯದಲ್ಲಿ ವೇಗವಾಗಿ ಕೆಲಸ ಮಾಡುವ ಹೃದಯಕ್ಕೆ ಅಧಿಕ ಪ್ರಮಾಣದಲ್ಲಿ ಆಮ್ಲಜನಕ [ಆಕ್ಸಿಜನ್] ಬೇಕಾಗುತ್ತದೆ. ಆ ವೇಗಕ್ಕೆ ಸರಿಹೊಂದುವ ಆಮ್ಲಜನಕ ದೊರೆಯದ ಸ್ಥಿತಿಯಲ್ಲಿ ಹೃದಯ ತಕ್ಷಣವೇ ನಿಂತುಹೋಗುವುದು, ವಿಫರೀತವಾದ ನೋವು ಕಂಡುಬರುತ್ತದೆ. ಆದ್ದರಿಂದ ತುಂಬಾ ಜನರಲ್ಲಿ ಹೃದಯಾಘಾತ ರಾತ್ರಿ 2 ಗಂಟೆ ಯಿಂದ 02:30 ಸಮಯದಲ್ಲೆ ಹೆಚ್ಚಾಗಿ ಕಂಡು ಬರುತ್ತವೆ.

Watch Video:

ಹೃದಯ ರೋಗ ನಿವಾರಣಾ ಕ್ರಮಗಳು:

•ಪ್ರತಿದಿನ ಅರ್ಧ ಗಂಟೆ ಸಮಯ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ ,ದಿನಕ್ಕೆ ಒಂದೂವರೆ ಚಮಚದಷ್ಟು ಉಪ್ಪನ್ನು ಮಾತ್ರ ಸೇವಿಸಿ , ಸಾಧ್ಯವಾದರೆ ಪ್ರತಿದಿನ ಐದು ತರಹದ ಹಣ್ಣುಗಳನ್ನು ತಿನ್ನಿ. ಮಧ್ಯಪಾನ, ಧೂಮಪಾನ ಸೇವಿಸುವ ಅಭ್ಯಾಸವಿದ್ದರೆ ಬಿಟ್ಟುಬಿಡಿ.  ಹೃದಯ ಆರೋಗ್ಯವಾಗಿರಬೇಕೆಂದರೆ ಮೆಟ್ಟಿಲುಗಳನ್ನು ಬಳಸಿ. ಕೊಬ್ಬಿನಾಂಶ ಕಡಿಮೆ ಇರುವ ಆಹಾರ ಪಧಾರ್ಥಗಳನ್ನು ತೆಗೆದುಕೊಳ್ಳಿ.ಎತ್ತರಕ್ಕೆ ಅನುಗುಣವಾಗಿ ತೂಕ ಇರುವ ಹಾಗೆ ನೋಡಿಕೊಳ್ಳಿ. ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಮಧಮೆಹ[ ಶುಗರ್] ಇರುವವರಿಗೆ,( ಮುಖ್ಯವಾಗಿ ಮಹಿಳೆಯರಲ್ಲಿ) ಹೃದಯ ರೋಗ ಬರುವ ಅವಕಾಶಗಳು ಹೆಚ್ಚು.

ಹೃದಯಾಘಾತಕ್ಕೆ ಮುಂಚೆ ನಮಗೆ ಕಂಡುಬರುವ ಲಕ್ಷಣಗಳು:
1)ಸಾಮಾನ್ಯ ಶೀತ, ಜ್ವರ, ಆಗಾಗ ಬರುತ್ತಿದ್ದರೆ, ಅವು ಕಡಿಮೆಯಾಗದೆ ಇದ್ದರೂ, ಆನುಮಾನಿಸಬೇಕಾಗುತ್ತದೆ, ಏಕೆಂದರೆ ಅವು ಹಾರ್ಟ್ ಎಟಾಕ್ ಬರುತ್ತದೆ ಎನ್ನುವುದಕ್ಕೆ ಸೂಚನೆಗಳಾಗಿರುತ್ತವೆ. ಇದರ ಜೊತೆಗೆ ಕೆಮ್ಮು ಸಹ ಹೆಚ್ಚಾಗಿ ಬರುತ್ತಿದ್ದರೆ ಅದನ್ನು ಸಹ ಹಾರ್ಟ್ ಎಟಾಕ್ ಬರುವ ಚಿನ್ಹೆಯಂತೆ ಅನುಮಾನಿಸಬಹುದು.
2)ಎದೆಯಲ್ಲಿ ಅಸೌಕರ್ಯವಾಗಿದ್ದರೂ, ಏನೋ ಭಾರವಾದ ವಸ್ತುವನ್ನು ಎದೆಮೇಲೆ ಇಟ್ಟಂತೆ ಅನಿಸಿದರೂ ಹಾರ್ಟ್ ಎಟಾಕ್ ಗೆ ಸೂಚನೆಯಾಗುವುದು. ಇಂತಹ ಲಕ್ಷಣಗಳು ಕಂಡುಬಂದರೆ ಆಲೋಚನೆ ಮಾಡುವುದನ್ನು ಬಿಟ್ಟು ತಕ್ಷಣವೇ ವೈಧ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಬೇಕು.
3)ಹಾರ್ಟ್ ಎಟಾಕ್’ಗೆ ಸಂಬಂಧಿಸಿದ ಲಕ್ಷಣಗಳಲ್ಲಿ ಮತ್ತೊಂದು ಉಸಿರಾಟ ನಿಂತುಹೋಗುವುದು, ಉಸಿರಾಟದ ತೊಂದರೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ಇದು ಸಹ ಪ್ರಮುಖ ಲಕ್ಷಣವೆಂದು ಅನುಮಾನಿಸುವುದು.
4)ಅತಿಯಾಗಿ ಸುಸ್ತಾಗುವುದು, ಮೈ ಕೈ ನೋವು ಪದೇ ಪದೇ ಕಂಡುಬಂದರೆ, ಅದನ್ನು ಅಶ್ರದ್ದೆ ಮಾಡಬಾರದು. ಏಕೆಂದರೆ ಅವು ಕೂಡ ಹಾರ್ಟ್ ಎಟಾಕ್ ಬರುತ್ತವೆ ಎನ್ನುವುದಕ್ಕೆ ಸೂಚಕವಾಗಿರುತ್ತವೆ.
5) ಅರೆನಿದ್ರಾವಸ್ಥೆ, ನಿದ್ರೆ ಬರದಿರುವುದು, ಹೆಚ್ಚಾಗಿ ಬೆವರುವಿಕೆ ಇವು ಸಹ ಹೃದಯಾಘಾತ ಕ್ಕೆ ಲಕ್ಷಣವಾಗು ಅವಕಾಶವಿದೆ.
6)ಕಣ್ಣಿನ ತುದಿಯಲ್ಲಿ ಬಾವು ಕಂಡಾಗ ಅದನ್ನು ಕಡೆಗಣಿಸಬಾರದು ಕಾರಣ ಅದು ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.
7)ಯಾವಾಗಲೂ ಹೊಟ್ಟೆ ತೊಳೆಸಿದಂತಾಗುವುದು, ತಿಂದ ಆಹಾರ ಜೀರ್ಣವಾಗದೆ ಇದ್ದರೂ,ಗ್ಯಾಸ್, ಅಸಿಡಿಟಿ, ಕಂಡು ಬಂದರು,ಹೊಟ್ಟೆನೋವು ಬಂದರು, ಇವೆಲ್ಲವೂ ಕೂಡಾಹೃದಯಾಘಾತದ ಗುಣಲಕ್ಷಣಗಳೆನ್ನಬಹುದು.
8)ಶರೀರದ ಮೇಲ್ಭಾಗದಿಂದ ಎಡಗೈ ಕೆಳಗಿನವರೆಗೂ, ನೋವು ಕಂಡುಬಂದರೆ ಹಾಗೂ ಒಂದೊಂದು ಸಾರಿ ದವಡೆಗಳಲ್ಲಿ , ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳಬಹುದು ಇದು ಸಹ ಮತ್ತೊಂದು ಲಕ್ಷಣವಾಗಿರುತ್ತದೆ ಎನ್ನಬಹುದು.
9)ಕಾಲುಗಳಲ್ಲಿ, ಪಾದಗಳಲ್ಲಿ, ಹಿಮ್ಮಡಿಯಲ್ಲಿ, ಬಾವು ಕಂಡುಬರುವುದು ಕೂಡಾ ಹೃದಯಾಘಾತದ ಸೂಚನೆಯಾಗಿ ಭಾವಿಸುವುದು.
10)ಹೃದಯಸಂಬಂಧಿ ಸಮಸ್ಯೆಗಳು ಇದ್ದರೆ ಹೃದಯ ಬಡಿತವೂ ಸಹ ಅಸಾಧಾರಣವಾಗಿರುತ್ತದೆ ಆದ್ದರಿಂದ ಕಾಲಕಾಲಕ್ಕೆ ವೈದ್ಯರನ್ನು ಭೇಟಿಮಾಡಬೇಕು. ಅಸಹಜ ಹೃದಯ ಬಡಿತ ಕಂಡುಬಂದಲ್ಲಿ ವೈದ್ಯರ ಸಲಹೆಯನ್ನು ಪಡೆಯಿರಿ.


Click Here To Download Kannada AP2TG App From PlayStore!