ದೇವಸ್ಥಾನಕ್ಕೆ ಹೋಗಿಬಂದ ಆಕೆ ತಂದೆಯೊಂದಿಗೆ ಇನ್ನುಮುಂದೆ ದೇವಸ್ಥಾನಕ್ಕೆ ಹೋಗಲ್ಲ ಎಂದಳು.. ಯಾಕೆ ಗೊತ್ತಾ..? ಬಳಿಕ ತಂದೆ ಏನೆಂದರೆಂದರೆ..?

ಓರ್ವ ಯುವತಿಯೊಬ್ಬಳು ದೇವಸ್ಥಾನಕ್ಕೆ ಹೋಗಿ ಹಿಂತಿರುಗಿ ಬಂದಳು.. ದರ್ಶನ ಚೆನ್ನಾಗಿ ಆಯಿತಾ ಮಗಳೇ, ಎಂದು ತಂದೆ ಪ್ರಶ್ನಿಸಿದರು….

ಮಗಳು: ಇನ್ನು ಮುಂದೆ ನನ್ನನ್ನು ದೇವಸ್ಥಾನಕ್ಕೆ ಹೋಗು ಎಂದು ಹೇಳಬೇಡಿ.. ಕೋಪದಿಂದ ನುಡಿದಳು…

ತಂದೆ: ಏನು ನಡೆಯಿತು ಮಗಳೇ..

ಮಗಳು: ದೇವಸ್ಥಾನದಲ್ಲಿ ಒಬ್ಬರಿಗೂ ಭಕ್ತಿ ಇಲ್ಲ, ದೇವರ ಮೇಲೆ ಧ್ಯಾನ ಇಲ್ಲ. ಎಲ್ಲರೂ ಅವರ ಮೊಬೈಲ್ ಫೋನ್‌ಗಳಲ್ಲಿ ಮಾತನಾಡುವುದು, ಫೋಟೋಗಳನ್ನು ತೆಗೆಯುವುದು,
ಭಕ್ತಿಗೆ ಸಂಬಂಧಿಸಿದ್ದು ಅಲ್ಲವೆ ಬೇರೆ ಸಂಗತಿಗಳನ್ನು ಚರ್ಚಿಸುವುದನ್ನು ಮಾಡುತ್ತಿದ್ದಾರೆ. ಕನಿಷ್ಠ ಭಜನೆಗಳ ಬಳಿ ಸಹ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಯಾರಲ್ಲೂ ನನಗೆ ಭಕ್ತಿ ಕಾಣಿಸಲಿಲ್ಲ.

ತಂದೆ: (ಸ್ವಲ್ಪ ಹೊತ್ತು ಮೌನವಾಗಿದ್ದು) ಸರಿ.. ನೀನು ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ನನ್ನದೊಂದು ಸಣ್ಣ ಕೋರಿಕೆ… ನೆರವೇರಿಸುತ್ತೀಯಾ..?

ಮಗಳು: ಖಂಡಿತ ಅಪ್ಪಾ… ನಿಮ್ಮ ಮಾತನ್ನು ನಾನು ಯಾವಾಗಲೂ ಇಲ್ಲ ಎಂದಿಲ್ಲ. ಹೇಳಿ ಏನು ಮಾಡಬೇಕು…

ತಂದೆ: ಒಂದು ಗಾಜಿನ ಗ್ಲಾಸಿನ ತುಂಬ ನೀರು ತೆಗೆದುಕೊಂಡು ಹೋಗು ದೇವಸ್ಥಾನಕ್ಕೆ.. ಮೂರೇ ಮೂರು ಪ್ರದಕ್ಷಿಣೆ ಮಾಡಿ ಬರಬೇಕು.. ಆದರೆ ಸಣ್ಣ ಸೂಚನೆ…ನಿನ್ನ ಗ್ಲಾಸ್‌ನಿಂದ ಒಂದೇ ಒಂದು ಹನಿ ನೀರು ಚೆಲ್ಲಬಾರದು. ಈ ಕೆಲಸ ಮಾಡುತ್ತೀಯಾ…….

ಮಗಳು: ಹಾಗೆಯೇ ಆಗಲಿ. ಖಂಡಿತ ತರುತ್ತೇನೆ ನಿಮಗಾಗಿ ಎಂದು.. ಒಂದು ಗ್ಲಾಸ್ ತುಂಬ ನೀರು ತೆಗೆದುಕೊಂಡು ಹೊರಟಳು.. ಮೂರು ಗಂಟೆಗಳ ಬಳಿಕ ಮನೆಗೆ ಗ್ಲಾಸ್ ನೀರಿನಿಂದ ಹಿಂತಿರುಗಿದಳು..

ಮಗಳು: ತಗೋ ಅಪ್ಪಾ…ನಾನು ದೇವಸ್ಥಾನಕ್ಕೆ ಈ ಗ್ಲಾಸ್ ನೀರಿನಿಂದ ಹೋಗಿ ನೀವು ಹೇಳಿದ ರೀತಿ ಮೂರು ಪ್ರದಕ್ಷಿಣೆ ಪೂರ್ಣಗೊಳಿಸಿ ಬಂದೆ. ಒಂದೇ ಒಂದು ಹನಿ ನೀರು ಸಹ ಚೆಲ್ಲಲಿಲ್ಲ…

ತಂದೆ ಮೂರು ಪ್ರಶ್ನೆಗಳನ್ನು ಕೇಳಿದರು.
1. ನೀನು ಪ್ರದಕ್ಷಿಣೆ ಮಾಡುತ್ತಿದ್ದಾಗ ಎಷ್ಟು ಮಂದಿ ತಮ್ಮ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು.?
2. ಎಷ್ಟು ಮಂದಿ ಅನಗತ್ಯ ವಿಚಾರಗಳನ್ನು ದೇವಸ್ಥಾನದಲ್ಲಿ ಚರ್ಚಿಸುತ್ತಿದ್ದರು?
3. ಎಷ್ಟು ಮಂದಿ ಸ್ವಲ್ಪವೂ ಭಕ್ತಿ ಇಲ್ಲದೆ ನಡೆದುಕೊಂಡರು?
ಮಗಳು: ನಾನೇಗೆ ಹೇಳಲು ಸಾಧ್ಯ ಅಪ್ಪಾ.. ನನ್ನ ದೃಷ್ಟಿಯೆಲ್ಲಾ ಗ್ಲಾಸ್‌ನಿಂದ ಒಂದೇ ಒಂದು ಹನಿ ನೀರು ಚೆಲ್ಲದಂತೆ ಎಚ್ಚರ ವಹಿಸಿದ್ದೆ, ನನ್ನ ದೃಷ್ಟಿಯೆಲ್ಲಾ ಅದರ ಮೇಲೇ ಇತ್ತು…

ತಂದೆ: ಇದೇನಮ್ಮಾ ನಾನು ಹೇಳಬೇಕೆಂದುಕೊಂಡಿದ್ದು. ನೀನು ದೇವಸ್ಥಾನಕ್ಕೆ ಹೋದಾಗ ನಿನ್ನ ದೃಷ್ಟಿ ಭಗವಂತನ ವಿಗ್ರಹದ ಮೇಲೆ, ನಿನ್ನ ಧ್ಯಾನ ಅವರ ಮೇಲೆ ಇರಬೇಕು. ಆಗ ನೀನು ಅಂತಃ ಮುಖಿಯಾಗಿ ಭಗವಂತನ ಪಡೆಯುತ್ತೀಯ. ಜೀವನ ವೃದ್ಧಿಗೊಳ್ಳಲು ಈ ವಿಧವಾದ ಏಕಾಗ್ರತೆ ಸಾಧಿಸಬೇಕು.

ಮಗಳು: ತುಂಬಾ ಧನ್ಯವಾದ ಅಪ್ಪ. ತುಂಬಾ ಅರ್ಥಗರ್ಭಿತವಾದ ವಿಚಾರಗಳನ್ನು ತಿಳಿಸಿದಿರಿ.


Click Here To Download Kannada AP2TG App From PlayStore!

Share this post

scroll to top