ಲಕ್ಷ್ಮೀಚೇಳು (ಜರಿ) ಕಡಿದರೆ ಈ ರೀತಿ ಮಾಡಿದರೆ ಸೇಫ್… ನೋವು ಕಡಿಮೆಯಾಗುತ್ತದೆ, ಎಲ್ಲರಿಗೂ ತಿಳಿಸಿ..!

ಜರಿ, ಲಕ್ಷ್ಮೀಚೇಳು, ಶತಪದಿ ಹೆಸರು ಕೇಳಿದರೇನೇ ಬಹಳಷ್ಟು ಮಂದಿಯ ಮೈಯ ರೋಮಗಳೆಲ್ಲಾ ಎದ್ದು ನಿಲ್ಲುತ್ತವೆ. ಜರಿಯಲ್ಲಿನ ವಿಷ ಅಷ್ಟೇನು ಪ್ರಾಣಾಪಾಯ ತರುವಂತಹದ್ದೇನು ಅಲ್ಲ. ಆದರೆ ಇದು ಕಡಿದರೆ ಮಾತ್ರ ಅಸಾಧ್ಯ ನೋವು ಇರುತ್ತದೆ. ಹೆಚ್ಚಾಗಿ ಕತ್ತಲು, ತೇವ, ಕೊಳೆತ ಪ್ರದೇಶಗಳಲ್ಲಿ ಇರುವ ಜರಿ ಸಣ್ಣಸಣ್ಣ ಹುಳುಗಳನ್ನು ತಿಂದು ಜೀವಿಸುತ್ತದೆ. ಇದು ರಾತ್ರಿ ಹೊತ್ತು ಮಾತ್ರ ಸಂಚರಿಸುತ್ತಾ ಆಹಾರ ಅನ್ವೇಷಣೆ ಮಾಡುತ್ತದೆ. ಇವು ಕಡಿದಾಗ ಸುಮಾರು ಮೂರು ಗಂಟೆಗಳ ಕಾಲ ವಿಪರೀತ ನೋವು ಇರುತ್ತದೆ.

ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು:
* ಜರಿ ಕಡಿದಾಗ ಕೂಡಲೆ ಕಡಿದ ಜಾಗವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
* ಜರಿ ಕಚ್ಚಿದ ಭಾಗವನ್ನು ಬಿಸಿ ನೀರಿನಲ್ಲಿ ಮುಳುಗಿಸಿದ ಬಟ್ಟೆಯಲ್ಲಿ ಹೊರೆಸಬೇಕು. ಬಿಸಿಯ ಕಾರಣ ವಿಷದ ತೀವ್ರತೆ ಕಡಿಮೆಯಾಗುವ ಅವಕಾಶ ಇರುತ್ತದೆ.
* ಜರಿ ಕಡಿದ ದೇಹದ ಭಾಗದ ಮೇಲೆ ಅರಿಶಿಣ ಹಚ್ಚಬೇಕು.
* ಆ ಜಾಗದಲ್ಲಿ ಬೆಳ್ಳುಳ್ಳಿ ಪೇಸ್ಟನ್ನು ಪಟ್ಟಿಯಂತೆ ಹಾಕುವುದರಿಂದ ನೋವು, ಊತ ಕಡಿಮೆಯಾಗುತ್ತದೆ.

ಲಕ್ಷಣಗಳು:
* ಜರಿ ಕಡಿದ ಸಮಯದಿಂದ 10 ಗಂಟೆಗಳವರೆಗೂ ವಿಪರೀತ ಉರಿಯಿಂದ ಕೂಡಿದ ನೋವಿರುತ್ತದೆ.
* ಜರಿ ಕಡಿದ ಜಾಗದಲ್ಲಿ ಕಪ್ಪಗಿನ ಅಥವಾ ಕೆಂಪಗಿನ ಮಚ್ಚೆಯಾಗುತ್ತದೆ.
* ಜರಿ ಕಚ್ಚಿದ ಜಾಗ ಕೆಂಪಗೆ ಬದಲಾಗಿ, ಉರಿ, ಊತ ಉಂಟಾಗುತ್ತದೆ.
* ನಿದ್ರಿಸುವ ಸಮಯದಲ್ಲಿ ಜರಿ ಕಚ್ಚಿದರೆ ಆಗುವ ನೋವನ್ನು ಭರಿಸುವುದು ತುಂಬಾ ಕಷ್ಟ.

ಮನೆಯ ಒಳಗೆ ಬಾರದಂತೆ ತೆಗೆದುಕೊಳ್ಳಬಹುದಾದ ಎಚ್ಚರಿಕೆಗಳು..
* ಜರಿ ಮನೆಯ ಒಳಗೆ ಬಾರದಂತೆ ಕಿಟಕಿಗಳಿಗೆ ಮೆಶ್ ಹಾಕಿಸಿಕೊಳ್ಳಬೇಕು.
* ಕಿಟಕಿಗಳ ಬಳಿ ನ್ಯಾಪ್ತಾಲಿನ್ ಉಂಡೆಗಳನ್ನು ಇಡಬೇಕು.
* ಚಳಿಗಾಲದಲ್ಲಿ ಪ್ರತಿ ದಿನ ಮನೆಯ ರಂಧ್ರಗಳ ಬಳಿ ಕರಿಬೇವು ಸಾಧ್ಯವಾದರೆ ಅರಿಶಿಣ ಹಾಕಬೇಕು
* ಪ್ರತಿ ವಾರ ನೆಲವನ್ನು ಸ್ವಚ್ಛಗೊಳಿಸಬೇಕು.
* ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಆಂಟಿಬಯೋಟಿಕ್ ಪ್ರಭಾವ ಜರಿಗಳಷ್ಟೇ ಅಲ್ಲದೆ ಇತರೆ ವಿಷ ಕೀಟಗಳು ಸಹ ಮನೆಯ ಒಳಗೆ ಬರಲ್ಲ. ಈ ಮೂಲಕ ವಿಷಪೂರಿತ ಜರಿಗಳನ್ನು ಮನೆಯ ಒಳಗೆ ಬಾರದಂತೆ ಮಾಡಬಹುದು.


Click Here To Download Kannada AP2TG App From PlayStore!

Share this post

scroll to top