ಒಬ್ಬ ಮನಸ್ಸುಳ್ಳ ಕಾಂಟ್ರ್ಯಾಕ್ಟರ್ ತನ್ನ ಮಗಳ ಮದುವೆ ಹೇಗೆ ಮಾಡಿದನೆಂದರೆ..? ಗಾಲಿ ಜನಾರ್ದನ ರೆಡ್ದಿ, ನಿತಿನ್ ಗಡ್ಕರಿ ನೋಡಿ ಕಲಿಯಬೇಕು!

ಬೇಸಿಕ್‍ ಆಗಿ ಕಾಂಟ್ರ್ಯಾಕ್ಟರ್ ಎಂದರೆ ಹೇಗಿರುತ್ತಾರೆ! ವೈಟ್ ಅಂಡ್ ವೈಟ್ ಡ್ರೆಸ್… ಬೆವರಿಲ್ಲದಂತೆ ಹತ್ತುವ ಕಾರು…ಇಳಿಯುವ ಕಾರಿನಿಂದ ಹಿಡಿದು ಚೆಕ್ ಪುಸ್ತಕಗಳು, ಸೂಟ್ ಕೇಸ್ ತುಂಬಾ ನೋಟಿನ ಕಂತೆಗಳು..ಮ್ಯಾಗ್ಜಿಮನ್ ಫೋನಲ್ಲೇ ಡೀಲ್ ಸೆಟ್ಲ್ ಮಾಡುತ್ತಿರುತ್ತಾರೆ. ನಿತ್ಯ ರಾಜಕೀಯ ನಾಯಕರೊಂದಿಗೆ ಟಚ್‌ನಲ್ಲಿರುತ್ತಾ… ಬಾಯಿ ಬಿಟ್ಟರೆ ಕರೆನ್ಸಿ ಭಾಷೆಯಲ್ಲೇ ಮಾತನಾಡುತ್ತಾ…ಅವರ ದರ್ಜಾನೇ ಬೇರೆ. ಅಷ್ಟೆಲ್ಲಾ ಹಣ ಇರುವ ದೊಡ್ಡ ಕಾಂಟ್ರ್ಯಾಕ್ಟರ್ ಮನೆಯಲ್ಲಿ ಹುಟ್ಟುಹಬ್ಬ ಎಂದರೇನೆ ಆರ್ಭಟ ನೋಡಕ್ಕಾಗಲ್ಲ. ಇನ್ನು ಮಗಳ ಮದುವೆ ಎಂದರೆ ಹೇಗಿರಬೇಡ.

ವಿಐಪಿಗಳು, ಗೂಟದ ಕಾರುಗಳು, ಸಿನಿಮಾ ತಾರೆಗಳ ಥಳಕು, ಫುಡ್, ಲಿಕ್ಕರ್, ಡ್ಯಾನ್ಸ್ ಆ ಹಂಗಾಮಾನೇ ಬೇರೆ. ಆದರೆ ಆ ತರಹದ ಏನೂ ಇಲ್ಲದೆ ಹಣವುಳ್ಳ ಒಬ್ಬ ಕಾಂಟ್ರ್ಯಾಕ್ಟರ್ ತನ್ನ ಮಗಳ ಮದುವೆ ಮಾಡಿದ. ಹಣವನ್ನು ಕುಡಿಯುವ ನೀರಿಗೂ ಬಳಸೆ ಅದನ್ನು ಒಂದು ಒಳ್ಳೆಯ ಕೆಲಸಕ್ಕೆ ಬಳಸಿದ. ಇಷ್ಟಕ್ಕೂ ಏನು ಆ ಒಳ್ಳೆ ಕೆಲಸ ಗೊತ್ತಾ?

ಮನೋಜ್ ಮನೋಟ್ ಎಂಬ ಔರಂಗಾಬಾದ್‌ನಲ್ಲಿ ಒಬ್ಬ ದೊಡ್ಡ ಬಿಜಿನೆಸ್ ಮ್ಯಾನ್. ಹೆಸರಾಂತ ಕಾಂಟ್ರ್ಯಾಕ್ಟರ್ ಕೂಡ. ಕೋಟೀಶ್ವರ ಎಂದು ಬೇರೆ ಹೇಳಬೇಕಾಗಿಲ್ಲ. ಇತ್ತೀಚೆಗೆ ಮಗಳ ಮದುವೆ ನಿಶ್ಚಯವಾಯಿತು. ಆಡಂಬರವಾಗಿ ನಡೆಸಬೇಕೆಂದು ಪ್ಲಾನ್ ಮಾಡಿದ. ಎಲ್ಲೂ ಕಡಿಮೆಯಾಗಬಾರದೆಂದು ಡಿಸೈಡ್ ಮಾಡಿದ. ಏನಿಲ್ಲ ಎಂದರೂ ರೂ.70-80 ಲಕ್ಷ ಖರ್ಚು ಮಾಡಬೇಕು ಎಂದುಕೊಂಡ. ಇದೇ ಸಂಗತಿಯನ್ನು ಆಪ್ತಮಿತ್ರನಾದ ಸ್ಥಳೀಯ ಎಂಎಲ್‌ಎಗೂ ಹೇಳಿದ. ಮನಸ್ಸಿನಲ್ಲಿನ ಮಾತು ಹೇಳಿದ.

ಅದಕ್ಕೆ ಆ ಎಂಎಲ್‌ಎ ಮೇಲೆಕೆಳಗೆ ನೋಡಿ ಹೀಗೆಂದ… ನೋಡು ಮನೋಜ್. ಯಾವುದೇ ತಂದೆಯಾದರೂ ತನ್ನ ಮಗಳ ಮದುವೆಯನ್ನು ಆಡಂಬರವಾಗಿ ಮಾಡಬೇಕು ಎಂದುಕೊಳ್ಳುತ್ತಾನೆ. ನೀನೂ ಅಷ್ಟೆ. ಬೇಡ ಅನ್ನಲ್ಲ. ಹಣವುಳ್ಳ ಆದಕಾರಣ ನಿನ್ನ ಸಾಮರ್ಥ್ಯಕ್ಕೆ ತಕ್ಕಂತೆ 70-80 ಲಕ್ಷ ಖರ್ಚು ಮಾಡುತ್ತಿದ್ದೀಯ. ಸಾವಿರಾರು ಮಂದಿಯನ್ನು ಕರೆದು ಒಳ್ಳೆಯ ಊಟ ಹಾಕಿಸುತ್ತೀಯ. ನಿನ್ನ ಮಗಳ ಬಗ್ಗೆ ಜನ ಎರಡು ದಿನ ಮಾತನಾಡಿಕೊಳ್ಳುತ್ತಾರೆ…ಮೂರನೇ ದಿನ ಚರ್ಚಿಸಿಕೊಳ್ಳುತ್ತಾರೆ. ಮಹಾ ಎಂದರೆ ಒಂದು ವಾರ ಮಾತನಾಡಿಕೊಳ್ಳುತ್ತಾರೆ. ಆ ಬಳಿಕ ಮರೆತುಹೋಗುತ್ತಾರೆ. ಆದ್ದರೆ ಆ ರೀತಿ ಅಲ್ಲದೆ ನಿನಗೊಂದು ಸಲಹೆ ನೀಡುತ್ತೇನೆ. ಅದೇನು ಎಂದು ಕೇಳಿದ ಮನೋಜ್

ಕಟ್ ಮಾಡಿದರೆ… ಮದುವೆಗೂ ಮುನ್ನವೇ ಮನೋ ಸೂರಿಲ್ಲದ ಬಡವರಿಗೆ 90 ಮನೆ ಕಟ್ಟಿಸಿಕೊಡಲು ನಿರ್ಧರಿಸಿದ. ತರಾತುರಿಯಲ್ಲಿ 40 ಮನೆ ಕಟ್ಟಿಸಿ ಬಡವರಿಗೆ ಉಡುಗೊರೆಯಾಗಿ ನೀಡಿದ. ಉಳಿದವು ಇನ್ನೂ ನಿರ್ಮಾಣ ಹಂತದಲ್ಲಿವೆ. ಅವುಗಳ ಖರ್ಚು ಒಂದೂವರೆ ಕೋಟಿ ದಾಟಿದೆ. ಎಂಎಲ್ಎ ಸಲಹೆ ಮೇರೆಗೆ ತಂದೆ ತೆಗೆದುಕೊಂಡ ನಿರ್ಧಾರವನ್ನು ಮಗಳೂ ಸಹ ಸಾಕಷ್ಟು ಸಂಭ್ರಮಿಸಿದಳು. ಇದಕ್ಕೆ ಮೀರಿದ ಗಿಫ್ಟ್ ಇನ್ನೊಂದಿಲ್ಲವೆಂದು ಆಕೆ ಹೆಮ್ಮೆ ಪಡುತ್ತಿದ್ದಾಳೆ.

ಈ ದಿನಗಳಲ್ಲೂ ಇಂತಹವರಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ. ಹಣ, ರಾಜಕೀಯ ನಾಯಕರು, ಈ ಎರಡೂ ಮಾತು ಬಿಟ್ಟರೆ ಬೇರೆ ಜಗತ್ತಿನ ಬಗ್ಗೆ ಹಿಡಿಸಿಕೊಳ್ಳದ ಕಾಂಟ್ರ್ಯಾಕ್ಟರ್‌ಗಳು…ಮಗಳ ಮದುವೆಗೆ ಆಗುವ ಖರ್ಚನ್ನು ಬಡವರಿಗಾಗಿ ಖರ್ಚು ಮಾಡುವುದು ಸುಮ್ಮನೆ ಅಲ್ಲ.

ಇತ್ತೀಚೆಗಷ್ಟೇ ನೋಡಿದೆವು… ಗಾಲಿ ಜನಾರ್ದನ ರೆಡ್ಡಿ ಮಗಳ ಮದುವೆ ಯಾವ ರೀತಿ ನಡೆಯಿತು ಎಂದು. ಒಂದು ಕಡೆ ನೋಟು ನಿಷೇಧದಿಂದ ಜನರೆಲ್ಲಾ ಒದ್ದಾಡುತ್ತಿದ್ದರೆ ಗಾಲಿ ಗಣಿಧಣಿ ಮಾತ್ರ ಮಗಳ ಮದುವೆಯನ್ನು ಆಡಂಬರವಾಗಿ ಮಾಡಿದ. ಬೆಂಗಳೂರಿನಲ್ಲಿ ನಡೆದ ಅತ್ಯಂತ ದುಬಾರಿ ಮದುವೆ ಇದಂತೆ. ಅದೇ ರೀತಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಗಳ ಮದುವೆ ಸಹ ನಡೆದಿದೆ. ಇದಕ್ಕೇನಂತೀರಿ?


Click Here To Download Kannada AP2TG App From PlayStore!