ಈ ಒಂದು ಫೋಟೋ ನೋಡಿದರೆ ಸಾಕು…ಇಂಡೋನಿಷಿಯಾ ದೇಶದ ಮೇಲೆ ಇರುವ ಗೌರವ ಇನ್ನಷ್ಟು ಹೆಚ್ಚುತ್ತದೆ..! ಯಾಕೆ ಗೊತ್ತಾ?

ಈ ಫೋಟೋದಲ್ಲಿ ನಿಮಗೇನು ಕಾಣಿಸುತ್ತದೆ? ಕುರ್ಚಿಯಲ್ಲಿ ಕುಳಿತ ಮಹಿಳೆಯರು ಕಾಲನ್ನು ತೊಳೆಯುತ್ತಿರುವ ಮಕ್ಕಳು ಕಾಣಿಸುತ್ತಿದಾರೆ ಅಲ್ಲವೇ! ಈ ಫೋಟೋ ಹಿಂದೆ ತಾಯಿಗೆ ನಡೆಯುವ ಸೇವೆ ಅಡಗಿದೆ, ತಾಯಿ ಪ್ರೀತಿಯನ್ನು ದೊಡ್ಡದಾಗಿ ಜಗತ್ತಿಗೆ ಸಾರುವ ಆತ್ಮೀಯತೆ ಅಡಗಿದೆ. ಮಾನವೀಯತೆ ಮೌಲ್ಯಗಳನ್ನು ಹೇಳುತ್ತಾ ನಾಳಿನ ಪೌರರನ್ನು ತಿದ್ದಿತೀಡುವ ಪ್ರಯತ್ನ ಅಡಗಿದೆ. ಈ ಒಂದು ಫೋಟೋದಿಂದ ನನಗೆ ಇಂಡೋನೇಷಿಯಾ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು.

ಏನೀ ಫೋಟೋ…
ಇದು ಒಂದು ಸ್ಕೂಲ್ ಫೋಟೋ…ಇಂಡೋನೇಷಿಯಾದಲ್ಲಿನ ಪ್ರತಿ ಶಾಲೆಯಲ್ಲೂ…ವಾರಕ್ಕೆ ಒಮ್ಮೆ ತಮ್ಮ ಶಾಲೆಗಳಲ್ಲಿ ಓದಿಕೊಳ್ಳುತ್ತಿರುವ ಮಕ್ಕಗಳ ತಾಯಂದಿರಿಗೆ ಕಡ್ಡಾಯವಾಗಿ ತಮ್ಮ ಶಾಲೆಗೆ ಕರೆದು..ಅವರನ್ನು ಸನ್ಮಾನಿಸಿ… ಬಳಿಕ ಅವರೆಲ್ಲರನ್ನೂ ಕುರ್ಚಿಯಲ್ಲಿ ಕೂರಿಸಿ..ಅವರ ಮಕ್ಕಳಿಂದ ತಾಯಂದಿರ ಕಾಲು ತೊಳೆಸುತ್ತಾರೆ. ಆ ಕಾರ್ಯಕ್ರಮದ ಬಳಿಕ ತಾಯಂದಿರು ಮಕ್ಕಳನ್ನು ಆತ್ಮೀಯತೆಯಿಂದ ತಬ್ಬಿಕೊಳ್ಳುತ್ತಾರೆ. ಕೆಲವರು ತಾಯಂದಿರಾದರೆ ತಮ್ಮ ಮಕ್ಕಳು ಕಾಲು ತೊಳೆಯುತ್ತಿದ್ದರೆ…ತಡೆದುಕೊಳ್ಳಲಾಗದೆ ಕಣ್ಣು ತುಂಬಿ ಬರುತ್ತದೆ. ಇಲ್ಲಿದೆ ನೋಡಿ ಆ ಫೋಟೋ..

 

ಚಿಕ್ಕಂದಿನಿಂದ ತಂದೆತಾಯಿ ಮೇಲೆ ಗೌರವವನ್ನು ಹೆಚ್ಚಿಸುವ ಈ ಕಾರ್ಯಕ್ರಮದಿಂದ…ಇಂಡೋನೇಷಿಯಾದಲ್ಲಿ ಒಂದೇ ಒಂದು ಅನಾಥಾಶ್ರಮ ಇಲ್ಲದಿರುವುದು ಗಮನಾರ್ಹ. ಇದು ಒಳ್ಳೆಯದನ್ನು ತಿಳಿಹೇಳುವ ವಿಧಾನ. ಲವ್ ಯೂ ಇಂಡೋನೇಷಿಯಾ.

 


Click Here To Download Kannada AP2TG App From PlayStore!