ಹಲ್ಲಿಯ ಬಾಲ ತುಂಡಾದರೂ,ಮತ್ತೆ ಬೆಳೆಯಲು ಕಾರಣವೇನು?

ಈ ವಿಶ್ವವೇ ಅದ್ಭುತಗಳ ಆಗರ. ವಿಚಿತ್ರವಾದ ಸೃಷ್ಟಿ,ಅದರಲ್ಲಿ ಹಲವಾರು ಚಕಿತಗಳು,ವಿಶೇಷತೆಗಳು ನಮಗೆ ಗೊತ್ತಿರುತ್ತವೆ. ತಿಳಿಯದೇಯಿರುವ ವಿಶೇಷತೆಗಳು ಸಾಕಷ್ಟಿವೆ. ಒಂದು ರೀತಿಯಲ್ಲಿ ನಾವು ಕೆಲವು ರಹಸ್ಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ಆದರೂ ನಮಗೆ ತಿಳಿಯದ ರಹಸ್ಯಗಳು ಬೆಟ್ಟದಷ್ಟಿವೆ. ಪ್ರಾಣಿಗಳ ಬಗ್ಗೆಯಂತೂ ಲೆಕ್ಕಕ್ಕೆ ಸಿಗಲಾರದಷ್ಟು ವಿಚಿತ್ರಗಳು ನಮಗೆ ಕಾಣಿಸುತ್ತವೆ. ಅಂತಹ ವಿಚಿತ್ರಗಳಲ್ಲಿ ಹಲ್ಲಿಯೂ ಒಂದು. ಅಷ್ಟಕ್ಕೂ ಹಲ್ಲಿಯಲ್ಲಿ ಅಂತಹ ವಿಶೇಷತೆ ಏನಿದೆ ಎನ್ನುತ್ತೀರಾ? ಬನ್ನಿ ಆ ವಿಶೇಷತೆಯ ಬಗ್ಗೆ ತಿಳಿದುಕೊಳ್ಳೋಣ.
ಹಲ್ಲಿಯ ಬಾಲವನ್ನು ನೀವೆಂದಾದರೂ ಗಮನಿಸಿದ್ದೀರಾ? ಒಮ್ಮೊಮ್ಮೆ ಅದರ ಬಾಲ ತನ್ನಷ್ಟಕ್ಕೆ ತಾನೇ ತುಂಡಾಗಿ ಬೀಳುತ್ತದೆ. ಶತ್ರುಗಳ ಗಮನವನ್ನು ಇತರೆಡೆ ಸೆಳೆದು ಅಪಾಯದಿಂದ ಪಾರಾಗುವ ತಂತ್ರವಿದು. ಇತರೆ ಪ್ರಾಣಿಗಳು ಹಲ್ಲಿಯ ಮೇಲೆ ಆಕ್ರಮಣ ಮಾಡಿದಾಗ, ತಪ್ಪಿಕೊಳ್ಳಲು ತನ್ನ ಬಾಲವನ್ನು ತಾನೇ ತುಂಡರಿಸುತ್ತದಂತೆ. ಇದರಿಂದಾಗಿ ಆಕ್ರಮಣಮಾಡಲು ಬಂದ ಪ್ರಾಣಿಯ ಗಮನ ಕೆಳಗೆ ಬಿದ್ದು ಒದ್ದಾಡುತ್ತಿರುವ ಬಾಲದ ಮೇಲೆ ಕೇಂದ್ರೀಕೃತವಾಗುತ್ತದೆ. ಸಮಯ ನೋಡಿ ಹಲ್ಲಿ ಅಲ್ಲಿಂದ ಓಡಿ ಹೋಗಿ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುತ್ತದೆ. ಆದರೂ, ಹಲ್ಲಿ ತನ್ನ ಬಾಲವನ್ನು ತುಂಡರಿಸಿಕೊಂಡರೂ ಬಾಲ ಮತ್ತೆ ಬೆಳೆಯುತ್ತದೆಂಬ ವಿಷಯ ನಿಮಗೆ ಗೊತ್ತೆ? ಇಲ್ಲವೆಂದಾದಲ್ಲಿ,ಬನ್ನಿ ಅದು ಏಕೆ ಬೆಳೆಯುತ್ತದೆಂಬ ವಿಷಯವನ್ನು ತಿಳಿದುಕೊಳ್ಳೋಣ.

ಹಲ್ಲಿಗಳಲ್ಲಿ ಸ್ಯಾಟಲೈಟ್ ಎಂದು ಕರೆಯಲ್ಪಡುವ ಜೀವಕೋಶಗಳಿರುತ್ತವೆ. ಇವು ಅತ್ಯಂತ ಶೀಘ್ರವಾಗಿ ಕೆಲಸಮಾಡುತ್ತವೆ. ಹಲ್ಲಿಯ ಬಾಲ ತುಂಡಾಗಿ ಬಿದ್ದತಕ್ಷಣ ಈ ಕೋಶಗಳು ಅಲ್ಲಿಗೆ ಹೋಗಿ,ಜಖಂಗೊಂಡಿರುವ ಕೋಶಗಳನ್ನು ದುರಸ್ತಿ ಮಾಡುವ ಕಾರ್ಯದಲ್ಲಿ ತೊಡಗುತ್ತವೆ.ಹೊಸ ಕೋಶಗಳ ಗುಂಪನ್ನು ರಚಿಸುತ್ತಾ ಸಾಗುತ್ತವೆ. ಇದರಿಂದಾಗಿ ಕೆಲವು ದಿನಗಳಲ್ಲೇ ಹಲ್ಲಿಯ ಬಾಲ ಮೊದಲಿದ್ದ ಸ್ಥಿತಿಗೆ ಬರುತ್ತದೆ. ಹೀಗೆ ಬಾಲ ಬೆಳೆಯಲು ಮರಿಮಹಲ್ಲಿಗಳಿಗೆ ಮಾತ್ರ ಹೆಚ್ಚು ಸಮಯ ಬೇಕಾಗುತ್ತದಂತೆ.ಆದರೆ,ಹೊಸದಾಗಿ ಬೆಳೆದ ಬಾಲಕ್ಕೆ ಸಂಫುರ್ಣವಾದ ಶಕ್ತಿ ಇರುವುದಿಲ್ಲವಂತೆ.ಆದರೆ,ದೊಡ್ಡ ಹಲ್ಲಿಗಳಲ್ಲಿ ಬಾಲ ಬೇಗ ಬೆಳೆಯುತ್ತದಂತೆ. ತುಂಡಾಗಿ ಬಿದ್ದುಹೋದ ಬಾಲ ಬೇಗ ಬೆಳೆಯ ಬೇಕಾದರೆ,ಒಳ್ಳೆಯ ಪೌಷ್ಟಿಕ ಹಾರವನ್ನು ಸೇವಿಸಬೇಕಂತೆ. ಹೀಗಿದೆ ನೋಡಿ.ಹಲ್ಲಿ ಮತ್ತು ಅದರ ಬಾಲದ ಪುರಾಣ.ವಿಜ್ಞಾನಿಗಳ ಪ್ರಕಾರ ಮಾನವನ ಜೀನ್ಸ್ ಗಳಿಗೂ, ಹಲ್ಲಿಗಳ ಜೀನ್ಸ್ ಗಳಿಗೂ ಸಾಮ್ಯತೆ ಇದೆಯಂತೆ. ಈರೀತಿಯಾಗಿ ಹಲ್ಲಿಯ ಬಾಲ ಬೆಳೆಯುವುದರ ಕುರಿತು ವಿಜ್ಞಾನಿಗಳು ಪರಿಶೋದನೆಗಳನ್ನು ಮಾಡುತ್ತಿದ್ದಾರೆ.ಒಂದುವೇಳೆ ಆ ಪರಿಶೋದನೆಗಳು ಸಫಲವಾದರೆ,ಹಲ್ಲಿಯ ಜೀನ್ಸ್ ಗಳನ್ನು ಮಾನವರ ಮೇಲೂ ಪ್ರಯೋಗಿಸುತ್ತಾರೆ.ಇದರಿಂದಾಗಿ ಮನುಷ್ಯ ತನ್ನ ಕಳೆದುಹೋದ ಅಂಗಗಳನ್ನು ಮತ್ತೆ ಬೆಳೆಯುತ್ತವೆ. ಒಂದು ವೇಳೆ ಹೀಗಾದರೆ ಮತ್ತೊಂದು ಹೊಸ ಪ್ರಪಂಚವನ್ನು ಸೃಷ್ಟಿಸಿದಂತಾಗುತ್ತದೆ.


Click Here To Download Kannada AP2TG App From PlayStore!