ಮೊದಲ ಹೆರಿಗೆಗೂ, ಎರಡನೆಯ ಹೆರಿಗೆಗೂ ನಡುವೆ ಎಷ್ಟು ಅಂತರ ಇದ್ದರೆ ಒಳ್ಳೆಯದು!?

ಬಹಳಷ್ಟು ಮಂದಿ ಮಹಿಳೆಯರು… ಒಂದು ವರ್ಷ ಗ್ಯಾಪ್‌ನಲ್ಲೇ ಇನ್ನೊಂದು ಹೆರಿಗೆಗೆ ಸಿದ್ಧವಾಗುತ್ತಾರೆ.! ಇದರಿಂದ ತಾಯಿ-ಮಗುವಿನ ಆರೋಗ್ಯದ ಮೇಲೆ ಯಾವ ರೀತಿ ಪ್ರಭಾವ ಉಂಟಾಗುತ್ತದೆ? ಇಷ್ಟಕ್ಕೂ ಮೊದಲ ಹೆರಿಗೆಗೂ, ಎರಡನೆಯದಕ್ಕೂ ನಡುವೆ ಎಷ್ಟು ಅಂತರ ಇದ್ದರೆ ಒಳ್ಳೆಯದು!? ಎಂಬ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

 • WHO (ವಿಶ್ವ ಆರೋಗ್ಯ ಸಂಸ್ಥೆ) ಪ್ರಕಾರ ಮೊದಲ ಹೆರಿಗೆ, ಎರಡನೇಯ ಹೆರಿಗೆ ನಡುವೆ – 2 ವರ್ಷ 9 ತಿಂಗಳ ಅಂತರ ಇದ್ದರೆ ಒಳ್ಳೆಯದು.
 • ಭಾರತ ಸರಕಾರ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ಪ್ರಕಾರ…ಮೊದಲ ಹೆರಿಗೆಗೂ, ಎರಡನೆಯದಕ್ಕೂ ನಡುವೆ – 3 ವರ್ಷಗಳ ಗ್ಯಾಪ್ ಇರಬೇಕು.
 • ಬಹಳಷ್ಟು ಅಧ್ಯಯನಗಳ ಪ್ರಕಾರ…. 18 ತಿಂಗಳ ಅಂತರ ಇದ್ದರೂ ಸಾಕು.!

ಇದರ ಪ್ರಕಾರ ಮೊದಲ ಹೆರಿಗೆಗೂ, ಎರಡನೆಯದಕ್ಕೂ 18ರಿಂದ 3 ವರ್ಷಗಳವರೆಗೂ ಅವರವರ ಪಾಸಿಬಿಲಿಟಿಗೆ ತಕ್ಕಂತೆ ಅಂತರ ಇದ್ದರೆ ತಾಯಿ, ಮಗುವಿಗೆ ಒಳ್ಳೆಯದು.

ಈಗ ಕೆಲವು ಅಂಕಿಸಂಖ್ಯೆಗಳನ್ನು ನೋಡೋಣ:

 • ನಮ್ಮ ದೇಶದಲ್ಲಿ ಶೇ.86ರಷ್ಟು ಗರ್ಭಿಣಿಯರಿಗೆ ನಾರ್ಮಲ್ ಡೆಲಿವರಿ ಆಗುತ್ತದೆ. ಅಂದರೆ ಉಳಿದ ಶೇ.14 ಮಂದಿಗೆ ಸಿಜೇರಿಯನ್ ಆಗುತ್ತದೆ ಎಂದರ್ಥ. ನಾರ್ಮಲ್ ಡೆಲಿವರಿಗೆ ಹೋಲಿಸಿದರೆ ಸಿಜೇರಿಯನ್ ಮಾಡಿಸಿಕೊಂಡವರು ಸ್ವಲ್ಪ ಹೆಚ್ಚಿನ ಅಂತರ ತೆಗೆದುಕೊಳ್ಳುವುದು ಉತ್ತಮ.
 • ನಾರ್ಮಲ್ ಡೆಲಿವರಿ ಆದವರಲ್ಲಿ 18 ತಿಂಗಳ ಅಂತರದ ಬಳಿಕ ಎರಡನೇ ಹೆರಿಗೆಯಾದರೆ… ಅದರಲ್ಲಿ ಶೇ.79ರಷ್ಟು ಎರಡನೇ ಸಲ ಕೂಡ ನಾರ್ಮಲ್ ಡೆಲಿವರಿ ಆಗುತ್ತದಂತೆ.! ಉಳಿದ ಶೇ.7ರಷ್ಟು ಮಂದಿಗೆ ವಿವಿಧ ಕಾರಣಗಳಿಂದ ಸಿಜೇರಿಯನ್ ಆಗುತ್ತದಂತೆ.!!

ಫಸ್ಟ್ ಡೆಲಿವರಿಗೂ ಸೆಕೆಂಡ್ ಡೆಲಿವರಿಗೂ ಕನಿಷ್ಟ 18 ತಿಂಗಳ ಗ್ಯಾಪ್ ಸಹ ಇಲ್ಲದಿದ್ದರೆ ಆಗುವ ನಷ್ಟಗಳು:

 • ಮಾಸು ಜಾರುವುದು-ನಿತ್ಯ ಯೋನಿ ಭಾಗ ಕೆಂಪಾಗಿ, ವಿಪರೀತ ರಕ್ತಸ್ರಾವ ಆಗುವುದು.
 • ತಿಂಗಳು ತುಂಬದೆ ಮಕ್ಕಳು ಜನಿಸುವುದು.
 • ಹುಟ್ಟಿದ ಮಕ್ಕಳ ತೂಕ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ದೈಹಿಕವಾಗಿ ಬಲಹೀನವಾಗಿರುತ್ತಾರೆ.
 • ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.
 • ಒಂದರ ಹಿಂದೆ ಒಂದು ಮಕ್ಕಳು ಜನಿಸಿದರೆ ಅವರನ್ನು ಪೋಷಿಸುವುದು ಕಷ್ಟವಾಗುತ್ತದೆ.
 • ಆರ್ಥಿಕ ಭಾರ ಹೆಚ್ಚಾಗಿ ಎದುರಿಸಬೇಕಾಗುತ್ತದೆ.
 • ಮಾನಸಿಕ ನೆಮ್ಮದಿ ಕೆಡುತ್ತದೆ.