ಆರೋಗ್ಯಕರವಾಗಿರುವ ವ್ಯಕ್ತಿ ದಿನಕ್ಕೆ ಎಷ್ಟು ಸಲ ಮೂತ್ರ ವಿಸರ್ಜನೆ ಮಾಡಬೇಕು ಗೊತ್ತಾ..?

ನಾವು ತಿಂದ ಆಹಾರವನ್ನು, ಕುಡಿದ ದ್ರವಗಳನ್ನು ಮೂತ್ರಕೋಶಗಳು ಶೋಧಿಸಿದಾಗ ಬರುವ ವ್ಯರ್ಥ ದ್ರವನ್ನು ಮೂತ್ರ ಎನ್ನುತ್ತೇವೆ ಎಂದು ಎಲ್ಲರಿಗೂ ಗೊತ್ತು. ಮೂತ್ರ ವಿಸರ್ಜನೆ ಮಾಡುವುದು ಎಂದರೆ ವ್ಯರ್ಥಗಳನ್ನು ಹೊರಗೆ ಹಾಕುವುದು. ಈ ಕ್ರಮದಲ್ಲಿ ನಿತ್ಯ ಕೆಲವರು ಅಧಿಕವಾಗಿ, ಇನ್ನೂ ಕೆಲವರು ಕಡಿಮೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಅದಕ್ಕೆ ನಾನಾ ಕಾರಣಗಳಿವೆ. ಆದರೆ ಆರೋಗ್ಯಕರವಾದ ವ್ಯಕ್ತಿ ನಿತ್ಯ ಎಷ್ಟು ಸಲ ಮೂತ್ರ ವಿಸರ್ಜನೆ ಮಾಡಬೇಕು ನಿಮಗೆ ಗೊತ್ತಾ..? ತಿಳಿದುಕೊಳ್ಳೋಣ ಬನ್ನಿ.

ವ್ಯಕ್ತಿಗೆ ನಿತ್ಯ 2 ರಿಂದ 3 ಲೀಟರ್ ನೀರು ಅಗತ್ಯ. ಕಡ್ಡಾಯವಾಗಿ ಅಷ್ಟು ಪ್ರಮಾಣದ ನೀರು ಕುಡಿದರೇನೆ ದೇಹ ಸಂಪೂರ್ಣ ಬಳಸಿಕೊಂಡು ಜೀರ್ಣಕ್ರಿಯೆ ಸಕ್ರಮವಾಗಿ ನಡೆಯುತ್ತದೆ. ಅಗತ್ಯ ಪ್ರಮಾಣಕ್ಕಿಂತ ಕಡಿಮೆ ನೀರು ಕುಡಿದರೆ ಅನೇಕ ಅನಾರೋಗ್ಯಗಳು ಬರುತ್ತವೆ. ಮುಖ್ಯವಾಗಿ ಕಿಡ್ನಿಗಳು ತೊಂದರೆ ಒಳಗಾಗುವ ಸಾಧ್ಯತೆ ಇದೆ. ಆದರೆ ನಿತ್ಯ ಕನಿಷ್ಠ 2 ಲೀಟರ್ ನೀರನ್ನು ಕುಡಿಯುವ ಆರೋಗ್ಯಕರವಾದ ವ್ಯಕ್ತಿಗಳು 4 ರಿಂದ 7 ಸಲ ಮೂತ್ರ ವಿಸರ್ಜನೆ ಮಾಡಬೇಕಂತೆ. 4 ಸಲಕ್ಕಿಂತ ಕಡಿಮೆ ಮೂತ್ರ ವಿಸರ್ಜನೆ ಮಾತ್ರ ಮಾಡಬಾರದು. ಇಲ್ಲದಿದ್ದರೆ ಅನಾರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ಹಾಗೆಂದು ಹೆಚ್ಚು ಸಲ ಮೂತ್ರ ವಿಸರ್ಜನೆ ಮಾಡಿದರೂ ಯಾವುದೇ ತೊಂದರೆ ಇಲ್ಲ.

ಆಲ್ಕೋಹಾಲ್, ಕಾಫಿ, ಟೀಯಂತಹವು ಕುಡಿದಾಗ, ಮೂತ್ರಕೋಶ ಸೋಂಕು ಇರುವವರು, ಡಯಾಬಿಟೀಸ್ ಇರುವವರು, ನೀರನ್ನು ಅಧಿಕವಾಗಿ ಕುಡಿಯುವವರು ಸಹಜವಾಗಿ 7 ಸಲಕ್ಕಿಂತಲೂ ಹೆಚ್ಚಾಗಿ ಮೂತ್ರವಿಸರ್ಜನೆ ಮಾಡುತ್ತಾರೆ. ಆರೋಗ್ಯಕರವಾಗಿರುವ ವ್ಯಕ್ತಿಗಳು 7 ಸಲಕ್ಕಿಂತಲೂ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಿದರೆ ಅದರ ಬಗ್ಗೆ ಆಲೋಚಿಸಬೇಕಾದ ಅಗತ್ಯವಿಲ್ಲ. ಅದು ಸಹಜ. ಆದರೆ ಕೇವಲ 2 ಲೀಟರ್ ನೀರು ಮಾತ್ರ ಕುಡಿಯುತ್ತಾ ನಿತ್ಯ 11 ಸಲಕ್ಕಿಂತಲೂ ಹೆಚ್ಚು ಸಲ ಮೂತ್ರ ವಿಸರ್ಜನೆ ಮಾಡಿದರೆ ಆಗ ಆ ಪರಿಸ್ಥಿತಿಯನ್ನು ಅನಾರೋಗ್ಯ ಸ್ಥಿತಿ ಎಂದು ಅನುಮಾನಿಸಬೇಕು. ಕೂಡಲೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ಮೂತ್ರದ ಬಗ್ಗೆ ಈಗ ಕೆಲವು ಮುಖ್ಯವಾದ ವಿಷಯಗಳನ್ನು ತಿಳಿದುಕೊಳ್ಳೋಣ.

  • 1. ಮೂತ್ರವನ್ನು ಹೆಚ್ಚು ಹೊತ್ತು ತಡೆಯಬಾರದು. ಇದರಿಂದ ಮೂತ್ರಕೋಶ ಸೋಂಕು, ಕಿಡ್ನಿ ಸ್ಟೋನ್ಸ್ ಬರುತ್ತವೆ.
  • 2. ಆರೋಗ್ಯವಾಗಿರುವ ವ್ಯಕ್ತಿಯ ಮೂತ್ರ ಹಳದಿ-ಬಿಳಿ ಮಿಶ್ರಿತ ಬಣ್ಣದಲ್ಲಿ ಇರುತ್ತದೆ.
  • 3. ಕೆಲವು ವಿಧದ ಆಹಾರ ಪದಾರ್ಥಗಳನ್ನು ತಿಂದಾಗ, ದ್ರವಗಳನ್ನು ಕುಡಿದಾಗ ಮೂತ್ರದ ಬಣ್ಣ ಬದಲಾಗುತ್ತದೆ. ಅಷ್ಟೆ ಅಲ್ಲ ಕೆಲವು ಸಂದರ್ಭಗಳಲ್ಲಿ ವಾಸನೆಯೂ ಬರುತ್ತದೆ. ಆರೋಗ್ಯಕರವಾದ ಆಹಾರ ತಿಂದಾಗ ಮೂತ್ರದ ಬಣ್ಣ ಹೇಗಿದ್ದರೂ, ಯಾವುದೇ ರೀತಿಯ ವಾಸನೆ ಬಂದರೂ ಭಯ ಇಲ್ಲ. ಅದೇ ಜಂಕ್ ಫುಡ್ ನಂತಹವು ತಿಂದಾಗ ಮೂತ್ರದ ಬಣ್ಣ ಬದಲಾಗುವುದು, ದುರ್ವಾಸನೆ ಬರುವುದು ಮಾಡಿದರೆ ಅನುಮಾನಿಸಬೇಕು.
  • 4. ಮೂತ್ರದಲ್ಲಿ ಸಿಹಿಯ ವಾಸನೆ ಬರುತ್ತಿದ್ದರೆ ಅವರಿಗೆ ಡಯಾಬಿಟೀಸ್ ಇದೆ ಎಂದು ತಿಳಿದುಕೊಳ್ಳಬೇಕು.
  • 5. ಮೂತ್ರದಲ್ಲಿ ಸುಮಾರು ಶೇ.95ರಷ್ಟು ನೀರು ಇರುತದೆ. ಉಳಿದದ್ದು ವ್ಯರ್ಥ ಪದಾರ್ಥ.
  • 6. ಸಾಮಾನ್ಯವಾಗಿ ಆರೋಗ್ಯಕರವಾದ ವ್ಯಕ್ತಿ ಮೂತ್ರ ವಿಸರ್ಜನೆ ವ್ಯವಧಿ 7 ಸೆಕೆಂಡ್‌ಗಳ ವರೆಗೂ ಇರುತ್ತದೆ. ಆದರೆ ಅದು ವಯಸ್ಸು ಜಾಸ್ತಿ ಆಗುತ್ತಾ ಹೋದಂತೆ ಕಡಿಮೆಯಾಗುತ್ತದೆ.
  • 7. ವಯಸ್ಸು ಜಾಸ್ತಿ ಆಗುತ್ತಿದ್ದಂತೆ ಮೂತ್ರ ವಿಸರ್ಜನೆ ಪದೇಪದೆ ಹೋಗಬೇಕಾಗುತ್ತದೆ.

Click Here To Download Kannada AP2TG App From PlayStore!