ಶರೀರದ ಮೇಲೆ ಅಸಹ್ಯವಾಗಿ ಕಾಣಿಸುವ ನರೋಲಿ(Warts)ಯನ್ನು ಹೀಗೆ ತೊಲಗಿಸಿ.!

ಅಂದವಾಗಿ ಕಾಣಿಸಿಕೊಳ್ಳಬೇಕೆನ್ನುವ ಆಸೆ ಎಲ್ಲರಿಗೂ ಇರುತ್ತದೆ.ಇಂದಿನ ದಿನಗಳಲ್ಲಿ ಗಂಡು ಹೆಣ್ಣೆಂಬ ಬೇಧವಿಲ್ಲದೆ ಪ್ರತಿಯೊಬ್ಬರೂ ತಮ್ಮ ಅಂದವನ್ನು ಕಾಪಾಡಿಕೊಳ್ಳಲು ಶ್ರಮಪಡುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನರೋಲಿಯಂತಹ ಸಣ್ಣ ಪುಟ್ಟ ಸಮಸ್ಯೆಗಳು ಮನಸ್ಸಿಗೆ ಅಶಾಂತಿಯನ್ನುಂಟುಮಾಡುತ್ತವೆ. ಇವು ಅಷ್ಟೇನೂ ತೊಂದರೆ ಕೊಡದಿದ್ದರೂ,ಕುರೂಪವಾಗಿ ಕಾಣುವುದರಿಂದ ಎಲ್ಲರೂ ಇವುಗಳನ್ನು ತೊಲಗಿಸಲು ಇಷ್ಟಪಡುತ್ತಾರೆ. ಈ ನಿಟ್ಟಿನಲ್ಲಿ ದುಷ್ಪರಿಣಾಮ ಬೀರುವ ಆಲೋಪತಿ ಔಷದಗಳನ್ನು ಉಪಯೋಗಿಸದೆ, ಎಲ್ಲ ಕಡೆಯೂ ದೊರಕುವ ವಸ್ತುಗಳಿಂದ ಈ ನರೋಲಿಗಳನ್ನು ಹೋಗಲಾಡಿಸುವುದು ಹೇಗೆಂದು ತಿಳಿದುಕೊಳ್ಳೋಣ.

 

ಟೀಟ್ರೀ ಆಯಿಲ್…
ಕತ್ತು ಹಾಗು ಮುಖದ ಮೇಲೆ ಬರುವ ನರೋಲಿಗಳನ್ನು ಹೋಗಲಾಡಿಸಲು ಟೀಟ್ರೀ ಆಯಿಲ್ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಇದನ್ನು ಉಪಯೋಗಿಸುವುದೂ ಬಹಳ ಸುಲಭ. ಒಂದು ಹತ್ತಿ ಉಂಡೆಯನ್ನು ಈ ಆಯಿಲ್ ನಲ್ಲಿ ಅದ್ದಿ,ನರೋಲಿ ಮೇಲೆ ಇಟ್ಟು ರಾತ್ರಿಯೆಲ್ಲಾ ಹಾಗೆ ಬಿಡಬೇಕು. ಬೆಳಿಗ್ಗೆ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ನರೋಲಿಗಳು ಬೇಗನೆ ಮಾಯವಾಗುತ್ತವೆ.

ಹರಳೆಣ್ಣೆ…
ಸ್ವಲ್ಪ ಬೇಕಿಂಗ್ ಸೋಡಾವನ್ನು ಹರಳೆಣ್ಣೆಯಲ್ಲಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ನರೋಲಿಗಳ ಮೇಲೆ ಹಚ್ಚಿ.ಕೆಲವು ದಿನಗಳ ಕಾಲ ಹೀಗೆ ಹಚ್ಚುವುದರಿಂದ ನರೋಲಿಗಳು ಬಿದ್ದುಹೋಗುತ್ತವೆ. ಕೆಲವೊಮ್ಮೆ ಚರ್ಮದಲ್ಲಿ ಚುಚ್ಚಿದಂತೆ ಆಗುತ್ತದೆ. ಆದುದರಿಂದ ಎಚ್ಚರಿಕೆಯಿಂದ ಉಪಯೋಗಿಸಿ.

ನಿಂಬೆ ರಸ…
ಚರ್ಮವನ್ನು ರಕ್ಷಿಸುವುದರಲ್ಲಿ ನಿಂಬೆರಸ ಪ್ರಮುಖವಾದುದು. ಅನೇಕ ಔಷಧೀಯ ಗುಣಗಳು ನಿಂಬೆ ರಸದಲ್ಲಿವೆ. ಸ್ವಲ್ಪ ನಿಂಬೆ ರಸವನ್ನು ಸಮಸ್ಯೆಯಿರುವ ಕಡೆ ಹಚ್ಚಿ ರಾತ್ರಿಯೆಲ್ಲಾ ಹಾಗೇ ಬಿಟ್ಟು, ಬೆಳಿಗ್ಗೆ ನೀರಿನಿಂದ ತೊಳೆದರೆ ಒಳ್ಳೆಯ ಫಲಿತಾಂಶ ಲಭಿಸುತ್ತದೆ.

ಆಪಲ್ ಸಿಡಾರ್ ವಿನೆಗರ್...
ಒಂದು ಕಾಟನ್ ಉಂಡೆಯನ್ನು ಆಪಲ್ ಸಿಡಾರ್ ವಿನೆಗರ್ ನಲ್ಲಿ ಅದ್ದಿ ನರೋಲಿ ಮೇಲೆ ಬಳಿಯಬೇಕು. ಒಳ್ಳೆಯ ಫಲಿತಾಂಶ ನೀಡುತ್ತದೆ.

ಬಾಳೆಹಣ್ಣಿನ ಸಿಪ್ಪೆ...
ಬಾಳೆಹಣ್ಣಿನ ಸಿಪ್ಪೆಯೆಂದು ನಿರ್ಲಕ್ಷಿಸಬೇಡಿ.ಇದರಲ್ಲಿ ಚರ್ಮವನ್ನು ಸಂರಕ್ಷಿಸುವ ಗುಣಗಳಿವೆ. ಒಂದು ಸಣ್ಣ ತುಂಡು ಬಾಳೆ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು, ಸಿಪ್ಪೆಯ ಒಳಗಿನ ಭಾಗ ನರೋಲಿಮೇಲೆ ಬರುವಂತೆ ಇಟ್ಟು,ಬಟ್ಟೆಯಿಂದ ಕಟ್ಟಿ ಅಥವ ಪ್ಲಾಸ್ಟರ್ ನಿಂದ ಅಂಟಿಸಿ. ಪದೇ ಪದೇ ಈ ರೀತಿ ಮಾಡುತ್ತಿದ್ದಲ್ಲಿ,ನರೋಲಿಗಳು ದೂರವಾಗುತ್ತವೆ.

ನೀರುಳ್ಳಿ…
ಒಂದು ಗ್ಲಾಸ್ ಉಪ್ಪು ನೀರಿನಲ್ಲಿ ಸ್ವಲ್ಪ ನೀರುಳ್ಳಿ ಹಾಕಿ ಸ್ವ ತೊಳೆಯಬೇಕು.ಲ್ಪ ಸಮಯ ನೆನೆಸಿ.ನಂತರ ಈ ಮಿಶ್ರಣವನ್ನು ಚರ್ಮದ ಮೇಲೆ ಹಚ್ಚಿ ಶುಭ್ರವಾದ ಬಟ್ಟೆಯಿಂದ ಮುಚ್ಚಬೇಕು. ರಾತ್ರಿಯೆಲ್ಲ ಹಾಗೇ ಇರಿಸಿ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಪ್ರತೀದಿನ ಇದೇ ರೀತಿ ಒಂದು ವಾರ ಕಾಲ ಮಾಡುತ್ತಾ ಬಂದರೆ,ಮುಖ ಹೊಳೆಯುತ್ತದೆ.

ಪೈನಾಪಲ್ ಜ್ಯೂಸ್…
ಸಮಸ್ಯೆಯಿರುವ ಚರ್ಮದ ಭಾಗದ ಮೇಲೆ ಪೈನಾಪಲ್ ಜ್ಯೂಸನ್ನು ಹಚ್ಚುತ್ತಾ ಬಂದಲ್ಲಿ ಒಳ್ಳೆಯ ಪಲಿತಾಂಶ ಕಂಡುಬರುತ್ತದೆ.


Click Here To Download Kannada AP2TG App From PlayStore!