ಪ್ರವಾಹ ಪ್ರದೇಶಗಳಲ್ಲಿ ಹೀಗೆ ಮಾಡಿದರೆ, ಪ್ರಾಣ ಹಾನಿಯಿಂದ ಪಾರಾಗಬಹುದಂತೆ…!

ಪ್ರಾಕೃತಿಕ ವಿಪತ್ತುಗಳು ಯರಿಗೂ ಹೇಳಿ ಬರುವುದಿಲ್ಲ. ವಿಪತ್ತುಗಳು ಯಾವಾಗ ಉಂಟಾದರೂ ಯಾರಿಗೂ ತಿಳಿಯದಂತೆ ಉಂಟಾಗುತ್ತವೆ. ಹೀಗಾದಾಗ ಎಷ್ಟೋ ಮಂದಿಯನ್ನು ಬಲಿತೆಗೆದುಕೊಳ್ಳುತ್ತದೆ. ಅಂತಹ ವಿಪತ್ತುಗಳಲ್ಲಿ ಪ್ರವಾಹ ಗಮನಾರ್ಹವಾದದ್ದು. ಉತ್ತರಖಂಡ್ ದಲ್ಲಿ ಪ್ರವಾಹ ಉಂಟಾಗಿ ಬಹಳಷ್ಟು ಜನರ ಪ್ರಾಣಗಳನ್ನು ಬಲಿಪಡೆಯಿತು. ಪ್ರವಾಹ ಬರಲು ಕಾರಣ ಏನೇ ಆದರೂ ಎಷ್ಟೋ ಜನರು ಪ್ರಾಣ ಕಳೆದುಕೊಂಡರು. ಪ್ರವಾಹದ ಹರಿವು ಹೆಚ್ಚಾಗಿದ್ದ ಕಡೆಯೇನಾದರೂ ಅವರಿದ್ದಲ್ಲಿ ಅವರ ಕತೆ ಮುಗಿದೇ ಹೋಗುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಬದುಕಿ ಉಳಿಯುವುದು ಬಹಳ ಕಷ್ಟ. ಆದರೆ, ಪ್ರವಾಹ ಬಂದಾಗ ಕೆಲವು ಸೂಚನೆಗಳನ್ನು ಪಾಲಿಸಿದಲ್ಲಿ ನಮ್ಮ ಪ್ರಾಣವನ್ನು ಉಳಿಸಿಕೊಳ್ಳಬಹುದು. ಅದು ಹೇಗೆಂದರೆ…


ಸಾಮಾನ್ಯವಾಗಿ ನೀರು ಹರಿಯುತ್ತಿದ್ದರೂ,ಹರಿಯದಿದ್ದರೂ ಅಷ್ಟೋ ಇಷ್ಟೋ ಶಕ್ತಿ ಇದ್ದೇ ಇರುತ್ತದೆ..ಆದರೆ,ಮನುಷ್ಯನಿಗಿಂತ ನೀರಿನ ಪ್ರಮಾಣ ಹೆಚ್ಚಾಗಿದ್ದಲ್ಲಿ ಆ ನೀರು ಎಷ್ಟೇ ವೇಗವಾಗಿ ಹರಿಯುತ್ತಿದ್ದರೂ ಅದು ಆ ಮನುಷ್ಯನನ್ನು ತಳ್ಳುತ್ತದೆ. ಈ ನಿಟ್ಟಿನಲ್ಲಿ ಪ್ರವಾಹ ಹೆಚ್ಚಾದಾಗ ನೀರಿನ ವೇಗ ಹೆಚ್ಚಾಗಿರುತ್ತದೆ ಹಾಗಾಗಿ ಆ ಪ್ರವಾಹದಲ್ಲಿ ಎಷ್ಟು ಜನ ಸಿಲುಕಿಕೊಂಡರೂ ಕೊಚ್ಚಿಕೊಂಡು ಹೋಗುತ್ತಾರೆ. ಆದರೆ, ನೀರಿನ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಪ್ರತಿರೋದ ಏರ್ಪಟ್ಟಲ್ಲಿ ಅಲ್ಲಿ ಮನುಷ್ಯರಿದ್ದರೂ ಅವರಿಗೇನೂ ಆಗುವುದಿಲ್ಲ. ಆ ಶಕ್ತಿ ಹೇಗೆ ಬರುತ್ತದೆಂದರೆ, ಮನುಷ್ಯರೆಲ್ಲರೂ ಒಬ್ಬರ ಹಿಂದೆ ಒಬ್ಬರು ಅಂತರವಿಲ್ಲದೆ ಗಟ್ಟಿಯಾಗಿ ಹಿಡಿದುಕೊಂಡು ನಿಂತರೆ ಸಾಕು. ಇದರಿಂದಾಗಿ ಆ ಮನುಷ್ಯರ ಬಲವೆಲ್ಲವೂ ಒಟ್ಟಾಗಿ ನೀರಿನ ಪ್ರವಾಹಕ್ಕೆ ವಿರುದ್ಧವಾಗಿ ಕೆಲಸಮಾಡಿ ಸಮರ್ಥಕವಾಗಿ ಅಡ್ಡಿಯಾಗುತ್ತದೆ. ಈ ರೀತಿಯಾಗಿ ಪ್ರವಾಹದ ವೇಗ ಕಡಿಮೆಯಾದಾಗ ಜನರೆಲ್ಲರೂ ಬದುಕುಳಿಯಬಹುದು. ಆದರೆ,ಜನರು ಅಕ್ಕಪಕ್ಕದಲ್ಲಿ ಇದ್ದರೆ ಇದು ಸಾಧ್ಯವಾಗುವುದಿಲ್ಲ.

ಮೇಲೆ ಹೇಳಿರುವ ಸೂಚನೆಯನ್ನು ಪಾಲಿಸಿದಲ್ಲಿ ಪ್ರವಾಹದಿಂದ ಸುಲಭವಾಗಿ ಪಾರಾಗಬಹುದು. ಈ ಪದ್ಧತಿಯನ್ನು ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸಿ ಯಶಸ್ವಿಯಾಗಿದ್ದಾರೆ. ಪರೀಕ್ಷೆ ನಡೆಸಿದ ವೀಡಿಯೋ ನೀವು ನೋಡಬಹುದು. ಪ್ರವಾಹ ಬಂದರೆ ಪಾರಾಗುವ ವಿಧಾನವನ್ನು ತಿಳಿದುಕೊಂಡಿರಲ್ಲಾ ? ಇಷ್ಟವಾದಲ್ಲಿ ಎಲ್ಲರೊಡನೆ ಹಂಚಿಕೊಳ್ಳಿ.


Click Here To Download Kannada AP2TG App From PlayStore!

Share this post

scroll to top