ಪ್ಲಾಸ್ಟಿಕ್ (ನಕಲಿ )ಅಕ್ಕಿ, ಅಸಲಿ(ನೈಜ) ಅಕ್ಕಿಯನ್ನು ಗುರುತಿಸುವುದು ಹೇಗೆಂದು ತಿಳಿಯಲು.

ಜನರನ್ನು ಮೋಸಗೊಳಿಸುವುದರಲ್ಲಿ ಚೀನಾದವರನ್ನು ಮೀರಿಸುವವರಿಲ್ಲ.ಆ ದೇಶ ತಯಾರಿಸುವ ನಕಲಿ ವಸ್ತುಗಳು ಅಷ್ಟಿಷ್ಟಲ್ಲ.ಎಲೆಕ್ಟ್ರಾನಿಕ್ ವಸ್ತುಗಳಿಂದ ಮೊದಲ್ಗೊಂಡು ತಿನ್ನುವ ಆಹಾರ ಪದಾರ್ಥಗಳ ವರೆಗೆ ಎಲ್ಲವನ್ನೂ ನಕಲಿ ಮಾಡಿ ಪ್ರಪಂಚದಾದ್ಯಂತ ಮಾರುಕಟ್ಟೆಗಳಿಗೆ ಬಿಡುಗಡೆಗೊಳಿಸಿದ್ದಾರೆ. ಮೊನ್ನೆ ಯವರೆಗೂ ನಕಲಿ ಕ್ಯಾಬೇಜ್,ತದನಂತರ ಕೋಳಿ ಮೊಟ್ಟೆ ಇದೀಗ ತಾಜಾ ನಕಲಿ ಅಕ್ಕಿ.ಅದೂ ಸಹ ಪ್ಲಾಸ್ಟಿಕ್ ನಿಂದ ತಯಾರಿಸಿದಂತಹವು. ಹೌದು.ನೀವು ಕೇಳುತ್ತಿರುವುದು ಸತ್ಯ.ಈಗ ಭಾರತವನ್ನೊಳಗೊಂಡಂತೆ ಸಿಂಗಪೂರ್‌, ವಿಯೆನ್ನಾ, ಇಂಡೋನೇಷ್ಯಾ, ಫಿಲಿಪೈನ್ಸ್ ಮೊದಲಾದ ದೇಶಗಳಲ್ಲಿ ನಕಲಿ ಅಕ್ಕಿಯದ್ದೇ ಕಾರು ಬಾರು.ವುಚಾಂಗ್ ಎಂಬ ಕಂಪೆನಿ ನಕಲಿ ಅಕ್ಕಿಯನ್ನು ತಯಾರಿಸಿ ಇತರೆ ದೇಶಗಳಿಗೆ ರಪ್ತು ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಆದರೆ,ಈ ವೃತ್ತಾಂತ ಇಂದು ನೆನ್ನೆಯದಲ್ಲ. ಕಳೆದ ನಾಲಕ್ಕು ವರ್ಷಗಳಿಂದಲೂ ಇದೇ ಕೆಲಸ ಎಗ್ಗಿಲ್ಲದಂತೆ ಸಾಗಿದೆ.ಈ ದಿಶೆಯಲ್ಲಿ ಅವರು ಇದುವರೆಗೆ ಸುಮಾರು 9 ಲಕ್ಷ ಟನ್‌ಗಳಷ್ಟು ನಕಲಿ ಅಕ್ಕಿಯನ್ನು ತಯಾರಿಸಿ ಆಯಾ ದೇಶಗಳಲ್ಲಿ ಮಾರಾಟಮಾಡಿದ್ದಾರೆ.

ಕೃತಯ ಅಕ್ಕಿ ಹೇಗೆ ತಯಾರಿಸುತ್ತಾರೆ:  ನೋಡಲು ಅಸಲಿ ಅಕ್ಕಿಯನ್ನು ಹೋಲುವ ನಕಲಿ ಅಕ್ಕಿಯನ್ನು ಹೇಗೆ ತಯಾರಿಸುತ್ತಾರೆಂದರೆ.ಆಲೂಗಡ್ಡೆ,ಗೆಣಸು,ಪ್ಲಾಸ್ಟಿಕ್ ಹಾಗು ಇತರೆ ಕೃತಕ ರಾಸಾಯನಿಕಗಳ ಮಿಶ್ರಣದೊಂದಿಗೆ , ವಿಶೇಷ ಯಂತ್ರಗಳ ಮೂಲಕ ಪ್ಲಾಸ್ಟಿಕ್ ಅಕ್ಕಿಯನ್ನು ತಯಾರಿಸುತ್ತಾರೆ.ಹೀಗೆ ತಯಾರಿಸಲಾದ ಅಕ್ಕಿಗೆ ಅಸಲೀ(ನೈಜ)ಅಕ್ಕಿಯಂತೆ ಕಾಣುವ ಹಾಗೆ ಪಾಲಿಷ್ ಮಾಡುತ್ತಾರೆ. ನಂತರ ನೈಜ ಅಕ್ಕಿಯ ವಾಸನೆಯನ್ನು ಹೋಲುವಂತೆ ರಾಸಾಯನಿಕ ಗಳನ್ನು ಸಿಂಪಡಿಸುತ್ತಾರೆ. ಹೀಗೆ ತಯಾರಾದ ನಕಲಿ ಅಕ್ಕಿಯನ್ನು ಅಸಲಿ ಅಕ್ಕಿಯೊಂದಿಗೆ ಮಿಶ್ರಮಾಡಿ ಮಾರಾಟಮಾಡುತ್ತಿದ್ದಾರೆ.ಅದರೆ, ಕೆಲವು ದೇಶಗಳು ನಕಲಿ ಅಕ್ಕಿಯ ಬಲಿಪಶುಗಳಾಗಿದ್ದರೆ ಮಲೇಷಿಯಾ ಮಾತ್ರ ಇಂತಹ ನಕಲಿ ಅಕ್ಕಿಯನ್ನು ಗುರುತಿಸಿ ಮಾರುಕಟ್ಟೆಗೆ ಪ್ರವೇಶಿಸದಂತೆ ಕ್ರಮಕೈಗೊಂಡಿದೆಯಂತೆ.

ಅಸಲಿ ಮತ್ತು ನಕಲಿ ಅಕ್ಕಿಯನ್ನು ಗುರುತಿಸುವುದು ಹೇಗೆ:

ನೋಡಲು ನಕಲಿ ಅಕ್ಕಿ ಅಸಲಿ ಅಕ್ಕಿಯಂತೆ ಕಂಡರೂ ಕೆಲವು ಪರಿಕ್ಷಾ ವಿಧಾನಗಳಿಂದ ನಕಲಿ ಅಕ್ಕಿಯನ್ನು ಗುರುತಿಸಬಹುದು. ಹೇಗೆಂದರೆ: –

  • ಒಂದು ಚಮಚ ಅಕ್ಕಿಯನ್ನು ಒಂದು ಲೋಟ ತಣ್ಣಗಿನ ನೀರಿನಲ್ಲಿ ಹಾಕಿ ಚೆನ್ನಾಗಿ ಕಲೆಸಬೇಕು.ಒಂದು ವೇಳೆ ನೀರಿನ ಮೇಲೆ ಅಕ್ಕಿ ತೇಲಿದರೆ ಅದು ನಕಲಿ ಅಕ್ಕಿಯೆಂದೂ ಹಾಗಲ್ಲದೆ ನೀರಿನಲ್ಲಿ ಮುಳುಗಿದರೆ ಅದು ಅಸಲಿ ಅಕ್ಕಿ ಯೆಂದು ತಿಳಿಯಬೇಕು.
  • -ಸ್ವಲ್ಪ ಅಕ್ಕಿಯನ್ನು ನೆಲದಮೇಲೆ ಹರಡಿ,ಬೆಂಕಿಕಡ್ಡಿಯನ್ನು ಗೀರಿ ಅಕ್ಕಿಗೆ ಮುಟ್ಟಿಸಿದರೆ,ಅಕ್ಕಿ ನಕಲಿಯಾಗಿದ್ದರೆ ಉರಿದು ದುರ್ವಾಸನೆ ಬರುತ್ತದೆ.
  • -ಅಕ್ಕಿಯನ್ನು ಬೇಯಿಸಿದಾಗ ಮೆತ್ತಗಾಗದೆ ಗಟ್ಟಿಯಾಗಿದ್ದರೆ ಅದು ನಕಲಿ(ಕೃತಕ) ಅಕ್ಕಿಯೆಂದು ತಿಳಿಯಬೇಕು.
  • -ಅಕ್ಕಿಯನ್ನು ಬೇಯಿಸುವಾಗ,ನೀರಿನ ಮೇಲೆ ತೆಳುವಾದ ಪದರ ಏರ್ಪಟ್ಟು ಛಿದ್ರವಾಗದೆ ಇದ್ದರೆ ಅದು ನಕಲಿ ಅಕ್ಕಿಯೆಂದು ತಿಳಿಯ ಬೇಕು.
  • -ಅಸಲಿ ಅಕ್ಕಿಯ ಅನ್ನ ಮಾಡಿದಾಗ ಒಂದು ದಿನದ ಒಳಗೆ ಅನ್ನ ಹಳಸುತ್ತದೆ. ಹಾಗಾಗದಿದ್ದರೆ ಆ ಅನ್ನವನ್ನು ಪ್ಲಾಸ್ಟಿಕ್ ಅಕ್ಕಿಯಿಂದ ತಯಾರಿಸಲಾಗಿದೆಯೆಂದು ತಿಳಿಯಬೇಕು
  • -ಒಂದು ಹೆಂಚಿನ ಮೇಲೆ ಸ್ವಲ್ಪ ಎಣ್ಣೆ ಹಾಕಿ ಕಾದನಂತರ ಅಕ್ಕಿಯನ್ನು ಹಾಕಬೇಕು.
  • ನಕಲಿ ಅಕ್ಕಿಯಾದರೆ ಹೆಂಚಿಗೆ ಅಂಟಿಕೊಂಡು ದುರ್ವಾಸನೆ ಬೀರುತ್ತದೆ. ನಕಲಿ ಅಕ್ಕಿಯನ್ನು ಕಂಡುಹಿಡಿಯುವುದು ಹೇಗೆಂದು ನಿಮಗೀಗ ತಿಳಿಯಿತಲ್ಲಾ…
  • ಇನ್ನು ಮುಂದೆ ನೀವು ಕೊಂಡು ತರುವ ಅಕ್ಕಿಯ ಸಾಚಾತನದ ಬಗ್ಗೆ ಪರೀಕ್ಷಿಸಿ ನಂತರ ಉಪಯೋಗಿಸಿ. ಮತ್ತಷ್ಟು ವಿವರಗಳಿಗಾಗಿ ಈ ಕೆಳಗಿನ ವಿಡಿಯೋ ವೀಕ್ಷಿಸಿ.

Click Here To Download Kannada AP2TG App From PlayStore!

Share this post

scroll to top