ಮನೆಯಲ್ಲೇ ಸಾಬೂನು (Soap) ತಯಾರಿಸುವ ವಿಧಾನ.

ಬೆಳಿಗ್ಗೆ ನಿದ್ದೆಯಿಂದ ಎದ್ದು ರಾತ್ರಿ ಮಲಗುವ ವರೆಗೂ ಕನಿಷ್ಠ ನಾಲಕ್ಕುಸಲ ವಾದರೂ ಸಾಬೂನನ್ನು ಉಪಯೋಗಿಸುತ್ತಿರುತ್ತೇವೆ. ಪ್ರತಿಯೊಬ್ಬರೂ ಉಪಯೋಗಿಸುವ ಸೋಪಿನ ಬ್ರ್ಯಾಂಡ್ ಬೇರೆ ಬೇರೆ ಯಾಗಿರುತ್ತದೆ. ಕೆಲವರು ಕಾಲಕ್ಕೆ ತಕ್ಕಂತೆ,ಇನ್ನು ಕೆಲವರು ಸುಂದರವಾದ ಪ್ಯಾಕಿಂಗ್ ನೋಡಿ, ಮತ್ತೆ ಕೆಲವರು ಟಿವಿ ಯಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಸಾಬೂನನ್ನು ಉಪಯೋಗಿಸುತ್ತಾರೆ. ಅಧಿಕ ಹಣ ನೀಡಿ ಸಾಬೂನನ್ನು ಅಂಗಡಿಗಳಲ್ಲಿ ಕೊಂಡುಕೊಳ್ಳುವ ಬದಲು ನಾವೇ ಮನೆಯಲ್ಲಿ ತಯಾರಿಸಿ ಉಪಯೋಗಿಸಿದರೆ,ಹಣದ ಉಳಿತಾಯವೂ ಆಗುತ್ತದೆ ಮತ್ತು ಹಲವು ರಾಸಾಯನಿಕಗಳನ್ನು ಉಪಯೋಗಿಸಿ ಮಾಡಿರಬಹುದಾದ ಸಾಬೂನುಗಳಿಂದ ದೂರವಿದ್ದು ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

‘ಕಾಂತಿವರ್ಧಕ’ವೆಂದೇ ಪ್ರಖ್ಯಾತಿ ಪಡೆದಿರುವ ಲೋಳೆಸರ (Aloevera) ದಿಂದ ಸಾಬೂನು ತಯಾರು ಮಾಡುವ ವಿಧಾನ :

ಲೋಳೆಸರ ಸಾಬೂನು ತಯಾರಿಸಲು ಬೇಕಾಗುವ ಪದಾರ್ಥಗಳು :

  • 110 ಗ್ರಾಂ ಲೋಳೆಸರ ತಿರುಳು
  • 110 ಮಿ.ಲೀ ಕಾಸ್ಟಿಕ್ ಸೋಡಾ (ಸೂಪರ್ ಮಾರ್ಕೆಟ್ ಗಳಲ್ಲಿ ಲಭ್ಯ)
  • 750 ಮಿ.ಲೀ ಆಲೀವ್ ಎಣ್ಣೆ
  • 250 ಮಿ.ಲೀ ಶುದ್ಧ ನೀರು
  • ಪರಿಮಳ ಎಣ್ಣೆ  (Essence Oil)

 

jabon-de-sabila-700x325

 

ತಯಾರಿಸುವ ವಿಧಾನ :

ನೀರನ್ನು ಬಿಸಿಮಾಡಿ ಪ್ಲಾಸ್ಟಿಕ್ ಬೇಸಿನ್ ಗೆ ಹಾಕಿ. ಇದಕ್ಕೆ ಕಾಸ್ಟಿಕ್ ಸೋಡಾ ಬೆರೆಸಿ ಚೆನ್ನಾಗಿ ಮಿಶ್ರಣಮಾಡಿ. ಈ ಮಿಶ್ರಣವನ್ನು ಚೆನ್ನಾಗಿ ಆರಲು ಬಿಡಿ. ಅಷ್ಟರೊಳಗೆ, ಚಾಕು ಅಥವ ಚಮಚದ ಸಹಾಯದಿಂದ ಲೋಳೆಸರದ ತಿರುಳನ್ನು ಬೇರ್ಪಡಿಸಿ ,ಮಿಕ್ಸಿಯಲ್ಲಿ ಹಾಕಿ ಜೆಲ್ ರೂಪ ಬರುವವರೆಗೂ ರುಬ್ಬಿಕೊಳ್ಳಿ. ಆಲೀವ್ ಎಣ್ಣೆಯನ್ನು ಸ್ವಲ್ಪ ಬಿಸಿಮಾಡಿಕೊಳ್ಳಿ.ಕಾಸ್ಟಿಕ್ ಸೋಡಾ ಬೆರೆಸಿದ ನೀರಿಗೆ ಆಲೀವ್ ಎಣ್ಣೆಯನ್ನು ಸೇರಿಸಿ,ದಪ್ಪವಾಗುವವರೆಗೂ ಚೆನ್ನಾಗಿ ಕಲೆಸಿ. ನಂತರ ಲೋಳೆಸರ ಹಾಕಿ ಕಲೆಸಿ. ಸುವಾಸನೆಗಾಗಿ ಲ್ಯಾವೆಂಡರ್ ಆಯಿಲ್,ರೋಜ್ ವಾಟರ್ ಸೇರಿಸಿ. ಈರೀತಿ ತಯಾರಾದ ಮಿಶ್ರಣವನ್ನು ಆಳ ಕಡಿಮೆಯಿರುವ ತಟ್ಟೆಗೆ ಸುರಿಯಿರಿ. ಒಂದು ದಿನದವರೆಗೂ ಆರಲು ಬಿಡಿ. ನಂತರ ಘನರೂಪದಲ್ಲಿರುವ Aloevera Soap ನ್ನು ಬೇಕಾದ ಗಾತ್ರಕ್ಕೆ ತುಂಡರಿಸಿಕೊಳ್ಳಿ.15 ರಿಂದ 30 ದಿನಗಳಲ್ಲಿ ಗಟ್ಟಿಯಾದ ನಂತರ ಉಪಯೋಗಿಸಬಹುದು.


Click Here To Download Kannada AP2TG App From PlayStore!

Share this post

scroll to top