ಚಿನ್ನವನ್ನು ಹೇಗೆ ಬೇರ್ಪಡಿಸುತ್ತಾರೋ ತಿಳಿದುಕೊಳ್ಳಿ…? Watch Video.

ಚಿನ್ನ… ಈ ಹಳದಿ ಲೋಹದ ಬಗ್ಗೆ ಹೇಳಲೇ ಬೇಕಾದ ಅವಶ್ಯಕತೆಯೇ ಇಲ್ಲ. ಚಿನ್ನ ಅತ್ಯಂತ ಬೆಲೆಯುಳ್ಳದ್ದೆಂದು ಎಲ್ಲರಿಗೂ ಗೊತ್ತಿದೆ.ಹೆಚ್ಚು ಕಡಿಮೆ ಪ್ರಪಂಚದ ಎಲ್ಲ ದೇಶಗಳ ಆರ್ಥಿಕ ವ್ಯವಸ್ಥೆ ಚಿನ್ನದ ಮೇಲೆ ಅವಲಂಬಿಸಿರುತ್ತದೆ.ನಮ್ಮ ದೇಶದಲ್ಲಿ ಚಿನ್ನಕ್ಕಿರುವ ಬೇಡಿಕೆ ಅಷ್ಟಿಷ್ಟಲ್ಲ. ಮಹಿಳೆಯರೇ ಅಲ್ಲದೆ ಪುರುಷರು ಸಹ ಚಿನ್ನದ ಮೇಲೆ ವ್ಯಾಮೋಹಹೊಂದಿದ್ದು ವಿವಿಧ ರೀತಿಯ ಆಭರಣಗಳನ್ನು ಧರಿಸಿ ಬೀಗುತ್ತಿರುತ್ತಾರೆ. ಚಿನ್ನ ಎಲ್ಲಿ ಸಿಗುತ್ತದೆ,ಅದನ್ನು ಹೇಗೆ ಸಂಗ್ರಹಿಸುತ್ತಾರೆ ಎಂಬ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

gold-extract

gold-extract

ಕಬ್ಬಿಣ ,ಇದ್ದಿಲು ದೊರೆಯುವ ಹಾಗೆಯೇ ಚಿನ್ನವೂ ಸಹ ಗಣಿಗಳಲ್ಲಿ ದೊರೆಯುತ್ತದೆ. ಆದರೆ ಅದು ಶುದ್ಧ ಚಿನ್ನವಾಗಿ ದೊರೆಯದೆ,ಕಚ್ಚಾ ಅದಿರಿನ ರೂಪದಲ್ಲಿ ದೊರೆಯುತ್ತದೆ. ಹಲವಾರು ಕಾರಣಗಳು ಹಾಗು ಪರಿಸ್ಥಿತಿಗಳಲ್ಲಿ ಕೆಲವು ವಸ್ತುಗಳು ಒಟ್ಟಾಗಿ ಕಚ್ಚಾ ಅದಿರಾಗುತ್ತದೆ. ಈ ಅದಿರಿಗೆ ಕೆಲವು ರಾಸಾಯನಿಕಗಳನ್ನು ಸೇರಿಸಿ, ಸಂಸ್ಕರಿಸಿ ಕೊನೆಗೆ ಕುಲುಮೆಗಳಲ್ಲಿ ಕರಗಿಸಿ ಅಚ್ಚುಗಳಲ್ಲಿ ಹೊಯ್ಯುತ್ತಾರೆ ಹೀಗೆ ಚಿನ್ನ ತಯಾರಾಗುತ್ತದೆ. ಆದರೆ,24 ಕ್ಯಾರೆಟ್ ಚಿನ್ನವನ್ನು ಮಾತ್ರ ನಾವು ಶುದ್ಧ ಚಿನ್ನವೆನ್ನುತ್ತೇವೆ. ಇದರಲ್ಲಿ ಇತರೆ ಲೋಹಗಳು ಸೇರಿರುವುದಿಲ್ಲ. ಆದರೆ,22,18,14 ಕ್ಯಾರೆಟ್ ಚಿನ್ನವೂ ಸಹ ಮಾರುಕಟ್ಟೆಯಲ್ಲಿದೊರೆಯುತ್ತದೆ.ಇದರಲ್ಲಿ ಇತರೆ ಲೋಹಗಳೂ ಸೇರಿರುವುದರಿಂದ ಶೇಕಡಾವಾರು ಚಿನ್ನದ ಪ್ರಮಾಣ ಕಡಿಮೆಯಿರುತ್ತದೆ.ನಾವು ಆಭರಣಗಳಿಗಾಗಿ ಹೆಚ್ಚಾಗಿ ಉಪಯೋಗಿಸುವುದು 24 ಕ್ಯಾರೆಟ್ ಚಿನ್ನ.
ಚಿನ್ನವನ್ನು ಹೇಗೆ ತಯಾರಿಸುತ್ತಾರೆಂದರೆ…?

ಕಚ್ಚಾ ಅದಿರಿನಿಂದ ಶುದ್ಧ ಚಿನ್ನವನ್ನು ಹೇಗೆ ಬೇರ್ಪಡಿಸುತ್ತಾರೆಂಬುದನ್ನು ಈ ಕೆಳಗಿನ ವೀಡಿಯೊ ನೋಡಿ ತಿಳಿದುಕೊಳ್ಳಿ .


Click Here To Download Kannada AP2TG App From PlayStore!

Share this post

scroll to top