ವೃದ್ಧಾಪ್ಯ ಬಂದಿದೆಯೆಂದು ತಾಯಿಯನ್ನು ಕಾಡಿನಲ್ಲಿ ಬಿಡಲು ಹೋದ ಮಗ, ಕೊನೆಗೆ ಹೀಗೆ…!?

ಹಿಂದಿನ ಕಾಲದಲ್ಲಿ ಜಪಾನ್ ದೇಶದಲ್ಲಿ ಒಂದು ಪದ್ಧತಿಯಿತ್ತಂತೆ….. ಅದೇನೆಂದರೆ… ವಯಸು ಮೀರಿದ ,ಯಾವಕೆಲಸಗಳನ್ನೂ ಮಾಡಲಾಗದ ,ಕೊನೇ ಪಕ್ಷ ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿರುವ ತಂದೆ ತಾಯಿಗಳನ್ನು ಯಾವುದಾದರೊಂದು ಬೆಟ್ಟ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದರಂತೆ… ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳಲಾಗದೆ ಆ ಮುದುಕರು ಹಸಿವಿನಿಂದ ನರಳಿ ನರಳಿ ಸಾಯುತ್ತಿದ್ದರಂತೆ…. ಒಬ್ಬ ಯುವಕನೂ ಸಹ ವಯಸ್ಸಾದ ತನ್ನ ತಾಯಿಯನ್ನು ತನ್ನ ಭುಜಗಳ ಮೇಲೆ ಹೊತ್ತಿಕೊಂಡು ಬೆಟ್ಟ ಪ್ರದೇಶದಲ್ಲಿ ಬಿಟ್ಟು ಬರಲು ಹೊರಟನಂತೆ. ಮಾರ್ಗದ ಮಧ್ಯೆ ತನ್ನ ಭುಜಗಳಮೇಲಿದ್ದ ತಾಯಿ ಏನನ್ನೋ ಮಾಡುತ್ತಿರುವುದನ್ನು ಗಮನಿಸಿದ..ಗಿಡಗಳ ರೆಂಬೆಗಳನ್ನು ಮುರಿಯುತ್ತಿದ್ದ ತನ್ನ ತಾಯಿಯನ್ನು ಪ್ರಶ್ನಿಸದೆ ಮುಂದೆ ಸಾಗುತ್ತಾನೆ.

ಬಹಳ ದೂರ ಕ್ರಮಿಸಿದನಂತರ ತನ್ನ ತಾಯಿಯನ್ನು ಕೆಳಗಿಳಿಸಿ. ಹೀಗೆ ಕೇಳಿದ… ‘ನಿನ್ನನ್ನು ನನ್ನ ಭುಜಗಳ ಮೇಲೆ ಹೊತ್ತುಕೊಂಡು ಬರುತ್ತಿರುವಾಗ, ನೀನು ಗಿಡದ ಕೊಂಬೆಗಳನ್ನು ಮುರಿಯುತ್ತಾ ಕೆಳಗೆ ಬೀಳಿಸುತ್ತಿದ್ದೆ. ಹಾಗೆ ಏಕೆ ಮಾಡಿದೆ ಹೇಳು’. ಅದಕ್ಕೆ ಆ ತಾಯಿ ಹೀಗೆ ಸಮಾಧಾನವನ್ನಿತ್ತಳು….’ಮಗೂ ನಾನು ಮುದುಕಿಯಾಗಿದ್ದೀನಿ. ನನ್ನನ್ನು ಬೆಟ್ಟ ಪ್ರದೇಶದಲ್ಲಿ ಬಿಡುತ್ತೀಯ. ಪರವಾಗಿಲ್ಲ. ನಾನು ಹಿಂದಿರುಗಿ ಬರಬಾರದೆಂದು ಬಹಳ ದೂರ ಹೊತ್ತುಕೊಂಡು ಬಂದಿದ್ದೀಯ. ಒಂದು ವೇಳೆ ನೀನು ಹಿಂದಿರುಗಿ ಹೋಗುವಾಗ ದಾರಿತಪ್ಪಿ ಕಷ್ಟಪಡುತ್ತೀಯ. ನಿನಗೆ ಬಂದ ದಾರಿಯನ್ನು ತೋರಿಸುವ ಉದ್ಧೇಶದಿಂದಲೆ ಮರದ ರೆಂಬೆಗಳನ್ನು ಮುರಿಯುತ್ತಾ ದಾರಿಯುದ್ದಕ್ಕೂ ಹಾಕುತ್ತಾ ಬಂದೆ. ಆ ರೆಂಬೆಗಳ ಗುರುತಿನಿಂದಲೇ ನೀನು ಕ್ಷೇಮವಾಗಿ ಮನೆಗೆ ಹೋಗಬಹುದು ಎಂದು ಹಾಗೆ ಮಾಡಿದೆ’. ತಾಯಿಯ ಈ ಮಾತುಗಳನ್ನು ಕೇಳಿದ ಮಗನ ಕಣ್ಣಲ್ಲಿ ನೀರುತುಂಬಿತು. ಅಮ್ಮ ಎಲ್ಲಿದ್ದರೂ ದೇವತೆಯೇ…. ತನ್ನ ಕೊನೆಯುಸಿರು ಇರುವವರೆಗೂ ತನ್ನ ಮಕ್ಕಳಿಗೆ ಒಳ್ಳೆಯದಾಗಲೆಂದೇ ಆಶಿಸುತ್ತಾಳೆ. ಆ ಯುವಕನಿಗೆ ಜ್ಙಾನೋದಯವಾಗಿ ತನ್ನ ತಾಯಿಯನ್ನು ಮರಳಿ ಮನೆಗೆ ಕರೆದುಕೊಂಡು ಬಂದು ಚೆನ್ನಾಗಿ ನೋಡಿಕೊಳ್ಳಲಾರಂಭಿಸಿದ.


Click Here To Download Kannada AP2TG App From PlayStore!

Share this post

scroll to top