ನೂತನ ದಂಪತಿಗಳಿಗೆ 14 ಉಪಯುಕ್ತ ಕಿವಿಮಾತುಗಳು..! ಇವನ್ನು ಪಾಲಿಸಿದಲ್ಲಿ ಜೀವನವೆಲ್ಲಾ ಸುಂದರ..!!!

ಮದುವೆಯಿಂದ ಎರಡು ದೇಹಗಳು ಮಾತ್ರವಲ್ಲ ಎರಡು ಹೃದಯಗಳು ಹತ್ತಿರವಾಗುತ್ತವೆ. ಇದರಿಂದಾಗಿ ದಂಪತಿಗಳು ಜೀವನ ಪೂರ್ತಿ ಒಂದಾಗಿ ಬಾಳುತ್ತಾರೆ. ಎಂತಹುದೇ ಸಮಸ್ಯೆಗಳು ಉಂಟಾದಲ್ಲಿ ಇಬ್ಬರೂ ಹಂಚಿಕೊಂಡು ಬಾಳಿದರೇನೆ ಅಂತಹ ದಾಂಪತ್ಯವನ್ನು ಆದರ್ಶ ದಾಂಪತ್ಯ ವೆಂದು ಕರೆಯುತ್ತಾರೆ. ಈ ನಿಟ್ಟಿನಲ್ಲಿ ನಾವು ತಿಳಿಸಲಿರುವ ಕೆಲವು ಕಿವಿ ಮಾತುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಸುಗಮವಾಗಿ ಸಾಗುತ್ತದೆ. ಆದರ್ಶ ದಂಪತಿಗಳಾಗಿ ಬಾಳಬಹುದು. ಬನ್ನಿ ಆಸೂಚನೆಗಳು ಯಾವುವೆಂದು ತಿಳಿಯೋಣ..!!

1. ನಮ್ಮ ಭವಿಷ್ಯಕ್ಕಿಂತಲೂ ಕುಟುಂಬ ಸದಸ್ಯರೇ ಮುಖ್ಯವೆಂದು ತಿಳಿಯಬೇಕು. ಎಲ್ಲವೂ ಸುಗಮವಾಗಿದ್ದರೇನೇ ತಮ್ಮ ಕೆರಿಯರ್ ಕಡೆ ಗಮನ ಹರಿಸಬೇಕು. ಕುಟುಂಬದಲ್ಲಿ ಯಾವುದೇ ರೀತಿಯ ಕಲಹಗಳು ಏರ್ಪಡದಂತೆ ನೋಡಿಕೊಳ್ಳಬೇಕು. ಎಂತಹುದೇ ಕ್ಲಿಷ್ಟ ಪರಿಸ್ಥಿತಿ ಬಂದರೂ ಕುಟುಂಬವನ್ನು ಬಿಟ್ಟುಕೊಡಬಾರದು.

2. ದಂಪತಿಗಳಿಬ್ಬರೂ ಉದ್ಯೋಗದಲ್ಲಿದ್ದಲ್ಲಿ… ಎಲ್ಲವನ್ನೂ ಹಂಚಿಕೊಳ್ಳಬೇಕು. ಉದಾ: ಕರೆಂಟ್ ಬಿಲ್. ಮನೆ ಬಾಡಿಗೆ ಹಾಗೂ ಇನ್ನಿತರೆ ಖರ್ಚು ವೆಚ್ಚಗಳನ್ನು ಹಂಚಿಕೊಳ್ಳಬೇಕು. ಇದರಲ್ಲಿ ಯಾರೊಬ್ಬರೂ ಹೆಚ್ಚೆಂಬ ಭಾವನೆ ಬರದಂತೆ ನೋಡಿಕೊಳ್ಳಬೇಕು.

3. ದಂಪತಿಗಳಿಬ್ಬರಿಗೂ ತಂದೆ ತಾಯಿಗಳು ಇದ್ದೇ ಇರುತ್ತಾರಲ್ಲವೇ? ಪರಸ್ಪರ ತಂದೆ ತಾಯಿಗಳನ್ನು ತಮ್ಮವರಂತೆ ಭಾವಿಸಿ ಸಂತೋಷ ಪಡಿಸಬೇಕು.

4. ಮನೆಗೆ ಸಂಬಂಧಿಸಿದ ಯಾವುದೇ ವಿಶಯವಾದರೂ ಅದು ತಮ್ಮದೇ ಎಂದು ಭಾವಿಸಬೇಕು. ಅದಕ್ಕೆ ಸೂಕ್ತವಾಗಿ ಸ್ಪಂಧಿಸಬೇಕು. ಕೇವಲ ಒಬ್ಬರು ಮಾತ್ರ ಆ ರೀತಿ ತಿಳಿಯಬಾರದು.

5. ಯಾವುದೇ ಸಮಸ್ಯೆ ಬಂದರೂ ದಂಪತಿಗಳಿಬ್ಬರೂ ಪರಸ್ಪರ ಚರ್ಚಿಸಿ ಬಗೆ ಹರಿಸಿಕೊಳ್ಳಬೇಕು. ಕಮ್ಯೂನಿಕೇಶನ್ ಗ್ಯಾಪ್ ಬರಲೇ ಬಾರದು. ಒಂದು ವೇಳೆ ಹಾಗೇನಾದರೂ ಬಂದರೆ… ಇಬ್ಬರೂ ಬೇರ್ಪಡುವ ಸಾಧ್ಯತೆಯಿದೆ.

6. ಮಲಗುವ ಕೋಣೆಯನ್ನು ಕೇವಲ ಶೃಂಗಾರಕ್ಕಾಗಿ ಮಾತ್ರವೇ ಮೀಸಲಿಡಬೇಕು. ಮನೆ, ಆಫೀಸು, ಕುಟುಂಬ ಸಧಸ್ಯರು ಹೀಗೆ ಯಾವುದೇ ವಿಶಯಗಳನ್ನು ಚರ್ಚಿಸಬಾರದು. ಅಲ್ಲಿ ಕೇವಲ ಇಬ್ಬರ ಮನಸ್ಸುಗಳು ಬೆರೆಯಲು ಮಾತ್ರ ಅವಕಾಶವಿರಬೇಕು.

7. ಕೆಲವೊಮ್ಮೆ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಹಾಗೆಂದ ಮಾತ್ರಕ್ಕೆ ಜಗಳವಾಡಬಾರದು. ಪರಸ್ಪರ ಅಭಿಪ್ರಾಯಗಳನ್ನು ಗೌರವಿಸಬೇಕು.

8. ಇಬ್ಬರಿಗೂ ಇಷ್ಟವಾಗುವ ಆಹಾರ ಪದಾರ್ಥಗಳನ್ನೇ ಮಾಡಬೇಕು. ಇಬ್ಬರ ಇಷ್ಟಾ ಇಷ್ಟಗಳನ್ನು ತಿಳಿದುಕೊಂಡು ಆಸ್ವಾಧಿಸಬೆಕು.

9. ಕೆಲವೊಮ್ಮೆ ದಂಪತಿಗಳು ತೀವ್ರವಾಗಿ ಸ್ಪಂಧಿಸುತ್ತಿರುತ್ತಾರೆ. ಹಾಗಾಗಲೇ ಕೂಡದು. ಸಣ್ಣ ವಿಶಯವನ್ನು ಗಹನವಾಗಿ ತೆಗೆದುಕೊಳ್ಳಬಾರದು.

10. ದಂಪತಿಗಳಾದರೂ ಮನುಷ್ಯರೇ ಅಲ್ಲವೇ. ಎಲ್ಲರಿಗೂ ತಮ್ಮದೇ ಆದ ಪ್ರೈವೆಸಿ ಅಗತ್ಯವಿರುತ್ತದೆ. ಈ ವಿಷಯದಲ್ಲಿ ಪರಸ್ಪರ ಗೌರವಿಸಬೇಕು. ಯಾವುದೇ ರೀತಿಯ ಗುಟ್ಟುಗಳಿರಬಾರದು. ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಪೂರ್ಣ ಅರಿವಿರಬೇಕು.

11. ಗಂಡ ಹೆಂಡತಿಯರ ಸಂಬಂಧದಲ್ಲಿ ಪರಸ್ಪರ ಗೌರವದಲ್ಲಿ ಕಡಿಮೆಯಾಗಬಾರದು.ಅದನ್ನು ಹಾಗೇ ಮುಂದುವರೆಸಿಕೊಂಡು ಹೋಗಬೇಕು.

12. ಮಕ್ಕಳ ವಿಷಯದಲ್ಲಿ ಇಬ್ಬರ ಪ್ರಮೇಯವಿರಬೇಕು.

13. ಅಗಾಗ್ಗೆ ಕುಟುಂಬವೆಲ್ಲವೂ ಒಟ್ಟಿಗೆ ಸೇರಿ ಪ್ರವಾಸ ಕೈಗೊಳ್ಳಬೇಕು. ಹೀಗೆ ಮಾಡುವುದರಿಂದ ಸಂಬಂಧಗಳು ಬಲಗೊಳ್ಳುತ್ತವೆ.

14. ಅನಾರೋಗ್ಯವಿದ್ದಲ್ಲಿ ಪರಸ್ಪರ ಒಟ್ಟಿಗಿದ್ದು ನೋಡಿಕೊಳ್ಳಬೇಕು. ಬಿಟ್ಟು ಹೋಗುವ ಮನಸ್ತತ್ವವನ್ನು ಹೊಂದಿರಬಾರದು.


Click Here To Download Kannada AP2TG App From PlayStore!