“ನನ್ನ ಹೆಂಡತಿ ಏನು ಕೆಲಸ ಮಾಡಲ್ಲ..?” ಎಂಬ ಗಂಡನಿಗೆ “ಸೈಕಾಲಜಿಸ್ಟ್” ಎಂತಹ ಕೌಂಟರ್ ಕೊಟ್ಟ ಗೊತ್ತಾ..? ಕೊನೆಗೆ ಏನಾಯಿತು?

ನನ್ನ ಹೆಂಡತಿ ಏನು ಕೆಲಸ ಮಾಡಲ್ಲ!
ಗಂಡನೊಬ್ಬನಿಗೂ, ಸೈಕಾಲಜಿಸ್ಟ್‌ಗೂ
ನಡುವೆ ನಡೆದ ಸಂಭಾಷಣೆ
(ಅಂತರ್ಜಾದಲ್ಲಿ ಸಿಕ್ಕಾಪಟ್ಟೆ ಪ್ರಚಾರದಲ್ಲಿರುವ ಪೋಸ್ಟ್)
ಸೈ: ನೀವು ಏನು ಮಾಡುತ್ತಿದ್ದೀರ?
ಗಂ: ನಾನು ಬ್ಯಾಂಕ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ
ಮಾಡುತ್ತಿದ್ದೇನೆ.
ಸೈ: ನಿಮ್ಮ ಹೆಂಡತಿ ಏನು ಮಾಡುತ್ತಾರೆ?
ಗಂ: ಆಕೆ ಮನೆಯಲ್ಲೇ ಇರುತ್ತಾಳೆ.
ಸೈ: ನಿಮ್ಮ ಕುಂಟುಂಬದಲ್ಲಿ ಬೆಳಗ್ಗೆ ತಿಂಡಿ ಯಾರು
ಮಾಡುತ್ತಾರೆ?


ಗಂ: ನನ್ನ ಹೆಂಡತಿ. ಯಾಕೆಂದರೆ ಆಕೆಗೆ ಯಾವುದೇ
ಉದ್ಯೋಗ ಇಲ್ಲ ಹಾಗಾಗಿ.
ಸೈ: ತಿಂಡಿ ತಯಾರಿಸಲು ನಿಮ್ಮ ಹೆಂಡತಿ ಎಷ್ಟು
ಹೊತ್ತಿಗೆ ನಿದ್ದೆಯಿಂದ ಏಳುತ್ತಾರೆ?
ಗಂ: ಅವಳು ಮುಂಜಾನೆ 5 ಗಂಟೆಗೆ ಏಳುತ್ತಾಳೆ.
ಮೊದಲು ಮನೆ ಸ್ವಚ್ಛಗೊಳಿಸಿ ಬಳಿಕ ತಿಂಡಿ
ತಯಾರಿಸುತ್ತಾಳೆ.
ಸೈ: ನಿಮ್ಮ ಮಕ್ಕಳು ಶಾಲೆಗೆ ಹೇಗೆ ಹೋಗುತ್ತಾರೆ?
ಗಂ: ಮಕ್ಕಳನ್ನು ನನ್ನ ಹೆಂಡತಿಯೇ ಸ್ಕೂಲಿಗೆ
ಕರೆದುಕೊಂಡು ಹೋಗುತ್ತಾಳೆ.
ಯಾಕೆಂದರೆ ಆಕೆಗೆ ಬೇರೆ ಏನೂ ಕೆಲಸ ಇಲ್ಲ ಹಾಗಾಗಿ.
ಸೈ: ಮಕ್ಕಳನ್ನು ಶಾಲೆಗೆ ಬಿಟ್ಟು ಬಂದ ಬಳಿಕ ನಿಮ್ಮ
ಹೆಂಡತಿ ಮನೆಯಲ್ಲಿ ಏನು ಮಾಡುತ್ತಾರೆ?
ಗಂ: ಮಾರುಕಟ್ಟೆಗೆ ಹೋಗಿ ತರಕಾರಿ ತಂದು
ಅಡುಗೆ ಮಾಡುತ್ತಾಳೆ. ಆಮೇಲೆ ಬಟ್ಟೆ ಒಗೆಯುತ್ತಾಳೆ.
ನಿಮಗೆ ಗೊತ್ತೇ ಇದೆಯಲ್ಲಾ ಆಕೆ ಬೇರೆ
ಏನೂ ಉದ್ಯೋಗ ಮಾಡಲ್ಲ ಎಂದು! ಹಾಗಾಗಿ!
ಸೈ: ನೀವು ಸಂಜೆ ಮನೆ ತಲುಪಿದ ಮೇಲೆ ಏನು ಮಾಡ್ತೀರ?
ಗಂ: ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಯಾಕೆಂದರೆ
ದಿನವೆಲ್ಲಾ ಕೆಲಸ ಮಾಡಿ ಸುಸ್ತಾಗಿ ಇರುತ್ತೇನೆ ಅದಕ್ಕೆ.
ಸೈ: ನಿಮ್ಮ ಹೆಂಡತಿ ಏನು ಮಾಡುತ್ತಾಳೆ?
ಗಂ: ಅಡುಗೆ ಮಾಡುತ್ತಾಳೆ. ಮಕ್ಕಳಿಗೆ ಬಡಿಸುತ್ತಾಳೆ.
ಬಳಿಕ ನನಗೆ. ಆ ಬಳಿಕ ಮಕ್ಕಳನ್ನು ನಿದ್ದೆ ಮಾಡಿಸುತ್ತಾಳೆ.
ಬಳಿಕ ಪಾತ್ರೆ ತೊಳೆಯುತ್ತಾಳೆ.
ಮನೆ ಸ್ವಚ್ಛಗೊಳಿಸುತ್ತಾಳೆ. ಆಮೇಲೆ ನಿದ್ದೆ ಮಾಡುತ್ತಾಳೆ.

ಮೇಲೆ ಹೇಳಿದ ಕಥೆಯಲ್ಲಿ ಹೆಚ್ಚಿನ ಕೆಲಸ
ಯಾರು ಮಾಡುತ್ತಿದ್ದಾರೆ?

ಮುಂಜಾನೆಯಿಂದ ಅರ್ಧರಾತ್ರಿ ತನಕ ವಿಶ್ರಾಂತಿ
ಇಲ್ಲದಂತೆ ದಿನವೆಲ್ಲಾ ಕೆಲಸ ಮಾಡುವುದು ಪತ್ನಿ.
ಆದರೆ ಗಂಡನ ದೃಷ್ಟಿಯಲ್ಲಿ ಆಕೆಗೆ ಉದ್ಯೋಗವೇನು
ಇಲ್ಲದ ಕಾರಣ, ಕೆಲಸ ಮಾಡುತ್ತಿಲ್ಲ ಎಂದರ್ಥ!
ಹೌದು ಗೃಹಿಣಿಯರಿಗೆ ಮನೆವಾರ್ತೆ ನೋಡಿಕೊಳ್ಳಲು
ಯಾವುದೇ ವಿದ್ಯಾರ್ಹತೆ, ಅನುಭವ ಅಗತ್ಯವಿಲ್ಲ.
ಕುಟುಂಬದಲ್ಲಿ ಆಕೆಯ ಪಾತ್ರ ಬಹಳ ಮುಖ್ಯ.

ಉದ್ಯೋಗ ಮಾಡುತ್ತಿದ್ದರೇನೇ ಕೆಲಸ ಮಾಡುತ್ತಿದ್ದಂತೆ
ಎಂಬ ಭಾವನೆಯಿಂದ ಹೊರಬರಬೇಕು.
ಮೊದಲು ನಿಮ್ಮ ಪತ್ನಿಯನ್ನು ಅಭಿನಂದಿಸಿ.
ಯಾಕೆಂದರೆ ಆಕೆ ಮಾಡುತ್ತಿರುವ ತ್ಯಾಗವನ್ನು
ಯಾವುದರಿಂದಲೂ ಅಳೆಯಲು ಸಾಧ್ಯವಿಲ್ಲ.
ಯಾವುದೇ ಪ್ರತಿಫಲ ನಿರೀಕ್ಷಿಸದೆ ಆಕೆ ಮಾಡುತ್ತಿರುವ
ಜವಾಬ್ದಾರಿಯುತ ಕೆಲಸವನ್ನು ಕೀಳಾಗಿ ನೋಡಬೇಡಿ.
ಈ ಸಂಭಾಷಣೆ ಬಹಳಷ್ಟು ಮಂದಿಯ
ಆಲೋಚನೆಗಳಿಗೆ ಪ್ರತಿಬಿಂಬದಂತೆ. ಹಾಗಾಗಿ ಮನೆಯಲ್ಲಿ
ಯಾವಾಗಲೂ ಒಬ್ಬರ ಪಾತ್ರವನ್ನು ಇನ್ನೊಬ್ಬರು
ಕೀಳಾಗಿ ನೋಡದೆ ಸಹಕರಿಸಿಕೊಳ್ಳಿ.
ಆಗಲೇ ಸಂಸಾರ ಆನಂದಸಾಗರವಾಗುತ್ತದೆ.


Click Here To Download Kannada AP2TG App From PlayStore!