ಆಕೆ ಸಾಯುತ್ತಾಳೆಂದು ಗೊತ್ತಾದ ಹೆಂಡತಿಯ ಕೋರಿಕೆಯನ್ನು ತೀರಿಸಿದ ಗಂಡ. ಆ ಕೋರಿಕೆ ಏನೆಂದು ಗೊತ್ತಾ..!

ಭಯಂಕರವಾದ ಕ್ಯಾನ್ಸರ್ ರೋಗದಿಂದ ನರಳುತ್ತಿರುವ ತನ್ನ ಹೆಂಡತಿಯನ್ನು ಕಾಪಾಡಿಕೊಳ್ಳಲು ಗಂಡ ಶತ ಪ್ರಯತ್ನ ಮಾಡುತ್ತಿದ್ದಾನೆ. ಡಾಕ್ಟರ್ ಗಳೂ ಸಹ ಆಕೆಯ ಪ್ರಾಣ ಉಳಿಸಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಿದ್ದಾರೆ. ಕೊಚ್ಚಿ ಯ ಒಂದು ಅಸ್ಪತ್ರೆಯಲ್ಲಿ ಎರಡನೆಯ ಬಾರಿಗೆ ಕೀಮೋ ಥೆರಪಿ ಚಿಕಿತ್ಸೆಯನ್ನು ನೀಡಿ ಅಬರ್ವೇಷನ್ ನಲ್ಲಿರಿಸಿದ್ದಾರೆ. ಆಕೆಗೆ ಸಚಿನ್ ತೆಂಡೂಲ್ಕರ್ ಎಂದರೆ ಪಂಚ ಪ್ರಾಣ. ನಾಲಕ್ಕು ದಿನಗಳಲ್ಲೇ ಕೊಚ್ಚಿಯಲ್ಲಿ ಇಂಡಿಯನ್ ಫುಟ್ ಬಾಲ್ ಪಂದ್ಯ ಜರುಗಲಿದೆ. ಆಟಗಾರರಿಗೆ ವಿಶ್ವಾಸ ತುಂಬಲು ಸಚಿನ್ ಅಲ್ಲಿಗೆ ಬರುತ್ತಿದ್ದಾರೆ ಎಂಬ ವಿಷಯ ಆಕೆಗೆ ಗೊತ್ತಾಗಿ ಬಹಳ ಆನಂದ ವಾಗುತ್ತದೆ. ಹೇಗಾದರೂ ಮಾಡಿ ತನ್ನನ್ನು ಒಮ್ಮೆ ಆ ಮ್ಯಾಚ್ ಗೆ ಕರೆದುಕೊಂಡು ಹೋಗಿ ಸಚಿನ್ ರನ್ನು ನೋಡಲು ಅನುಕೂಲ ಮಾಡಿಕೊಡಬೇಕಾಗಿ ತನ್ನ ಗಂಡನಲ್ಲಿ ಕೇಳುತ್ತಾಳೆ, ಇಂತಹ ಪರಿಸ್ಥಿತಿಯಲ್ಲಿ ಬೇಡ ಇನ್ನೊಮ್ಮೆ ಕರೆದುಕೊಂಡು ಹೋಗುತ್ತೇನೆ ಎಂದು ಗಂಡ ಹೇಳುತ್ತಾನೆ.


ತನಗೆ ಮತ್ತೊಮ್ಮೆ ಇಂತಹ ಅವಕಾಶ ಬರುವುದಿಲ್ಲವೆಂಬ ಸತ್ಯ ಆತನಿಗೆ ಗೊತ್ತು .ಅದಕ್ಕಾಗಿಯೇ ಆತ ತನ್ನ ಮನಸನ್ನು ಬದಲಾಯಿಸಿಕೊಂಡ. ಹೇಗಾದರೂ ಮಾಡಿ ತನ್ನ ಹೆಂಡತಿಯ ಆಸೆಯನ್ನು ನೆರವೇರಿಸ ಬೇಕೆಂದುಕೊಂಡ. ತನ್ನ ಗೆಳೆಯರಿಗೆ ಫೋನ್ ಮಾಡಿ ಹೇಗಾದರೂ ಮಾಡಿ ಟಿಕೆಟ್ ಗಳನ್ನು ತೆಗೆದುಕೊಳ್ಳಿರೆಂದ. ಒಂದು ವೇಳೆ ಪರಿಸ್ಥಿತಿ ವಿಷಮಿಸಿದರೆ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹತ್ತಿರವೇ ಇರುವ ಆಸ್ಪತ್ರೆಗೆ ಹಾಗೂ ಪೊಲೀಸರಿಗೆ ತಿಳಿಸಿದ. ಅವರು ಇರಬೇಕಾದ ಜಾಗ್ರತೆಯಲ್ಲಿದ್ದಾರೆ. ಆಕೆಯನ್ನು ಮ್ಯಾಚ್ ಗೆ ಕರೆದುಕೊಂಡು ಹೋದ. ಸಾವಿರಾರು ಮಂದಿ ಪ್ರೇಕ್ಷಕರು ಆನಂದದಿಂದ ಕೇಕೆ ಹಾಕುತ್ತಿರುವುದನ್ನು ನೋಡಿ ಆಕೆ ಆನಂದ ತುಲಿತಳಾದಳು. ಸಚಿನ್ ಸಚಿನ್ ಎಂಬ ಕೇಕೆಗಳನ್ನು ಕೇಳಿ ತನ್ನ ನೋವನ್ನು ಮರೆತುಬಿಟ್ಟಳು. ಆ ಸಮಯದಲ್ಲಿ ಆತನಿಗೆ ತನ್ನ ಹೆಂಡತಿ ಅಂದವಾಗಿ ಕಂಡಳು. ರಮೇಷ್ ತನ್ನ ಹೆಂಡತಿಯ ಆಸೆಯನ್ನು ನೆರವೇರಿಸಿದ್ದಕ್ಕಾಗಿ ಪ್ರಪಂಚವನ್ನೇ ಗೆದ್ದಷ್ಟು ಆನಂದ ಪಟ್ಟ. ಆದರೆ, ಆತನ ಆನಂದ ಬಹಳ ಕಾಲ ಉಳಿಯಲಿಲ್ಲ. ಕೆಲ ದಿನಗಳಲ್ಲೇ ರಮೇಷ್ ಹೆಂಡತಿ ಇಹಲೋಕ ತ್ಯಜಿಸಿದಳು.


ಆಕೆಯ ಮರಣದ ನಂತರ ಆಕೆಯ ನೆನಪುಗಳು ಆತನನ್ನು ಕಾಡುತ್ತಿವೆ. ಕಳೆದ ವರ್ಷ ತನ್ನ ಮಡದಿಯ ಕೋರಿಕೆಯನ್ನು ನೆರವೇರಿಸಿದ ಆ ಸಮಯದಲ್ಲಿ ತನಗುಂಟಾದ ಆನಂದವನ್ನು ,ಅನುಭೂತಿಯನ್ನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ. ತನ್ನ ಸಂಸಾರದೊಂದಿಗೆ ಸ್ಟೇಡಿಯಂ ನಲ್ಲಿ ತೆಗೆಸಿಕೊಂಡ ಫೋಟೊ ಕೂಡಾ ಹಾಕಿದ. ನನ್ನ ಹೆಂಡತಿ ಬಹಳ ದಿಟ್ಟೆ. ಕೆಲವೇ ದಿನಗಳಲ್ಲಿ ಸಾಯುತ್ತೇನೆಂದು ಗೊತ್ತಿದ್ದರೂ ಎದೆಗುಂದಲಿಲ್ಲ ಜೀವನ ಬಹಳ ಸುಂದರ ವಾದದ್ದು. ಪ್ರತೀ ಕ್ಷಣವನ್ನೂ ಅಸ್ವಾದಿಸಿ. ಗಾಡ್ ಬ್ಲೆಸ್ ಯೂ ಎಂದು ಬರೆದ. ಅಪರೂಪವಾಗಿ ಅವರಿಗೆ ಹುಟ್ಟಿದ ಮಗನನ್ನು ನೋಡಿಕೊಡು ದಿಗಳನ್ನು ಕಳೆಯುತ್ತಿರುವುದಾಗಿ ಹೇಳಿಕೊಂಡ. ಜುಲೈ 19 ರಂದು ರಮೇಷ್ ಹಾಕಿದ ಪೋಸ್ಟ್ ವೈರಲ್ ಆಯಿತು. ಹೆಂಡತಿಯ ಬಗ್ಗೆ ರಮೇಷ್ ತೋರಿದ ಕಾಳಜಿಯನ್ನು ನೆಟ್ಟಿಗರು ಕೊಂಡಾಡಿದರು. ಬಾರವಾದ ಹೃದಯದಿಂದ ರಮೇಷ್ ನನ್ನು ಅಭಿನಂದಿಸಿದರು.
ಹೆಂಡತಿ ಬದುಕಿರುವಾಗಲೇ ನರಕವನ್ನು ತೋರಿಸುವ ಇಂದಿನ ಕಾಲದಲ್ಲಿ ರಮೇಷ್ ರಂತಹವರು ಬಹಳ ಅಪರೂಪ. ಅಂತಹ ಗಂಡನ ಪ್ರೀತಿಯಿಂದ ದೂರವಾದ ಆಕೆಯ ಹೆಸರು ‘ಅಜು’.

 


Click Here To Download Kannada AP2TG App From PlayStore!