ಇತರರನ್ನು ನಿಮ್ಮ ದಾರಿ ತಂದುಕೊಳ್ಳಬೇಕೆಂದರೆ ಹೀಗೆ ಮಾಡಿ. ಚಾಣಕ್ಯ ಹೇಳಿದ ಮಹತ್ವದ ಅಂಶಗಳು

ಆಚಾರ್ಯ ಚಾಣಕ್ಯ ಹೇಳಿದ ಈ ಹಿಪ್ನೋಟಿಸಂ ಟಿಪ್ಸ್ ಪಾಲಿಸುವ ಮೂಲಕ ನಿಮ್ಮ ಶತ್ರುವನ್ನೇ ನಿಮ್ಮ ದಾರಿಗೆ ತಂದುಕೊಳ್ಳಬಹುದಂತೆ! ಜಗತ್ತಿನಲ್ಲಿ ಇಬ್ಬರ ಮನಸ್ಥಿತಿಗಳು ಒಂದೇ ಆಗಿರುವುದಿಲ್ಲ. ಎಲ್ಲರೂ ವೈಯುಕ್ತಿಕ ಭಿನ್ನತೆಗಳು ಹೊಂದಿರುತ್ತಾರೆ. ಇಂತಹ ಸಮಯದಲ್ಲಿ ಬೇರೊಬ್ಬರನ್ನು ತಮ್ಮ ದಾರಿಗೆ ತಂದುಕೊಳ್ಳುವುದು ಕಷ್ಟ ಸಾಧ್ಯ. ಆದರೆ ಚಾಣಕ್ಯ ಹೇಳಿದ ಕೆಲವು ನಿರ್ದಿಷ್ಟ ವ್ಯಕ್ತಿತ್ವ ಹೊಂದಿರುವವರನ್ನು ಮಾತ್ರ ತಮ್ಮ ದಾರಿಗೆ ತಂದುಕೊಳ್ಳಬಹುದಂತೆ. ಅದಕ್ಕಾಗಿ ಚಾಣಕ್ಯ ಕೆಲವು ವಿಚಾರಗಳು ತಿಳಿಸಿದ್ದಾರೆ. ಅವೇನೆಂದರೆ…

ತೀವ್ರ ಕೋಪದಲ್ಲಿರುವರಿಗೆ…
ಇಂತಹ ಮನಸ್ಥಿತಿ ಹೊಂದಿರುವವರ ಎದುರು ತುಂಬಾ ಮರ್ಯಾದೆಯಿಂದ, ಪ್ರಶಾಂತವಾಗಿ ನಡೆದುಕೊಳ್ಳಬೇಕು. ಕೋಪವನ್ನು ಹೆಚ್ಚಾಗಿ ತೋರ್ಪಡಿಸಬಾರದು.

ಮೂರ್ಖರಾದರೆ..
ಮೂರ್ಖ ಸ್ವಭಾವ ಹೊಂದಿರುವವರನ್ನು ಯಾವಾಗಲೂ ಹೊಗಳುತ್ತಿರಬೇಕು. ಅವರನ್ನೇ ಯಾವಾಗಲೂ ಫಾಲೋ ಆಗಬೇಕಂತೆ. ಇದರಿಂದ ಅವರನ್ನು ತಮ್ಮ ದಾರಿಗೆ ತಂದುಕೋಳ್ಳಬಹುದಂತೆ.

ಪ್ರತಿಭಾವಂತರಾದರೆ…
ಒಂದು ವೇಳೆ ನಮ್ಮ ಎದುರು ನಮಗಿಂತ ಪ್ರತಿಭಾವಂತ ವ್ಯಕ್ತಿಗಳಿದ್ದರೆ ಅವರ ಮುಂದೆ ಯಾವಾಗಲೂ ಸತ್ಯವನ್ನೇ ಮಾತನಾಡಬೇಕಂತೆ. ಹೀಗೆ ಮಾಡುವುದರಿಂದ ಅವರು ನಮ್ಮ ಬಗ್ಗೆ ಆಸಕ್ತಿ ತೋರಿಸುತ್ತಾ ನಮ್ಮ ದಾರಿಗೆ ಬರುತ್ತಾರೆ.

ಇಗೋ ಹೊಂದಿದವರಾದರೆ…
ತುಂಬಾ ಇಗೋ ಮನಸ್ಥಿತಿ ಹೊಂದಿದವರಾದರೆ ಅವರನ್ನು ನಮ್ಮ ದಾರಿಗೆ ತಂದುಕೊಳ್ಳಲು ಅವರೊಂದಿಗೆ ಮರ್ಯಾದೆಯಿಂದ ನಡೆದುಕೊಳ್ಳಬೇಕು. ಅದೇ ರೀತಿ ವರ್ತಿಸಬೇಕು.

ಸ್ವಾರ್ಥಿಗಳು, ಅತಿಯಾಸೆ ಹೊಂದಿದವರು…
ಇಂತಹವರನ್ನು ಸುಲಭವಾಗಿ ತಮ್ಮ ದಾರಿಗೆ ತಂದುಕೊಳ್ಳಬಹುದು. ಇವರಿಗೆ ಸ್ವಲ್ಪ ದುಡ್ಡಿನ ಆಸೆ ತೋರಿಸಿದರೆ ಸಾಕು ನಮ್ಮ ದಾರಿಗೆ ಬರುತ್ತಾರೆ.

ಮಕ್ಕಳು…
ಸಣ್ಣ ಮಕ್ಕಳಿಗೆ ಪ್ರೀತಿ, ಆತ್ಮೀಯತೆ ತೋರಿಸುವುದರಿಂದ ಪೋಷಕರು ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಬಹುದು. 5 ವರ್ಷದೊಳಗಿನ ಮಕ್ಕಳಿಗೆ ಅತಿಯಾದ ಪ್ರೀತಿಯಿಂದ ಬೆಳಸಬೇಕು. 10 ವರ್ಷದೊಳಗಿನ ಮಕ್ಕಳಾದರೆ ಅವರೊಂದಿಗೆ ಕೋಪಿಷ್ಠಿಯಾಗಿ ವರ್ತಿಸಬಾರದು. 16 ವರ್ಷದೊಳಗೆ ಮತ್ತು ಅದರ ಮೇಲಿನವರಾದರೆ ಪೋಷಕರು ಅವರೊಂದಿಗೆ ಸ್ನೇಹಿತರಂತೆ ವರ್ತಿಸಬೇಕು.

ಕಠಿಣ ಪರಿಸ್ಥಿತಿಗಳು ಎದುರಾದಾಗ…
ಮೇಲೆ ಹೇಳಿದಂತೆ ಮನಸ್ಥಿತಿ ಹೊಂದಿಲ್ಲದವರಲ್ಲದೆ, ಪರಿಸ್ಥಿತಿಗಳಿಗೆ ತಕ್ಕಂತೆ ಹೇಗೆ ವರ್ತಿಸಬೇಕು ಎಂದೂ ಚಾಣಕ್ಯ ಹೇಳಿದ್ದಾರೆ. ಮುಖ್ಯವಾಗಿ ಕಠಿಣ ಪರಿಸ್ಥಿತಿಗಳು ಎದುರಾದಾಗ ಸಾಧ್ಯವಾದಷ್ಟೂ ಪ್ರಶಾಂತವಾಗಿರಬೇಕು. ಇದು ಉತ್ತಮ ಫಲಿತಾಂಶ ನೀಡುತ್ತದೆಯಂತೆ.

ವ್ಯಕ್ತಿಯ ಮೂಲ ಸ್ವಭಾವ ತಿಳಿಯಬೇಕೆಂದರೆ…
ಒಬ್ಬ ವ್ಯಕ್ತಿಯ ಮೂಲ ಸ್ವಭಾವ ತಿಳಿಯಬೇಕೆಂದರೆ ಅವರ ನಡೆ ನುಡಿ, ವರ್ತನೆ ಆಧಾರದಿಂದ ನಿರ್ಧರಿಸಬಹುದು.

ಆಚಾರ್ಯ ಚಾಣಕ್ಯ ಮಾನವರಿಗೆ ತಿಳಿಸಿದ ನೀತಿ ಸೂತ್ರಗಳು ಇವೆ.

  • ನಮಗೆ ಗೌರವ, ಮರ್ಯಾದೆ ಇಲ್ಲದ ಸ್ಥಳದಲ್ಲಿ ಒಂದು ಕ್ಷಣವೂ ಇರಬಾರದು. ಹಾಗೆ ನಮಗೆ ಗೌರವ ನೀಡದವರ ಮುಂದೆ ಸಹ ಇರಬಾರದು. ಸಂಪಾದನೆ ಇಲ್ಲದ ಕಡೆಯೂ ಸಮಯ ಕಳೆಯಬಾರದು.
  • ನದಿಗಳು, ವೈದ್ಯರು ಇರುವ ಪ್ರದೇಶಗಳಲ್ಲಿ ಮಾತ್ರ ಜೀವಿಸಬೇಕು. ಅವು ವಾಸಿಸಲು ಸೂಕ್ತ ಸ್ಥಳಗಳು ಎಂಬುದು ಚಾಣಕ್ಯನ ಆಂಬೋಣ.
  • ಧನವಂತರು ವಾಸಿಸುವ ಕಡೆ ಇದ್ದರೆ ಧನ, ಜ್ಞಾನಿಗಳು ಇರುವ ಕಡೆ ಇದ್ದರೆ ಜ್ಞಾನ ಬರುತ್ತದಂತೆ.
  • ಕಣಿವೆಯಲ್ಲಿ ನೀರಿದ್ದಾಗ ಮಾತ್ರ ವಾಸಿಸಿ, ನೀರು ಖಾಲಿಯಾದ ಮೇಲೆ ತಮ್ಮ ಆವಾಸ ಸ್ಥಾನ ಬದಲಾಯಿಸುವ ಹಂಸ ಪಕ್ಷಿಗಳಂತೆ ಮಾನವರು ಜೀವಿಸಬೇಕು.
  • ಗಲಾಟೆಗಳು ಇಲ್ಲದ, ಆಹಾರ ಪದಾರ್ಥಗಳು ಹೆಚ್ಚು ಉಳಿಕೆಯಾಗುವ, ನೀರು ಇರುವ ಪ್ರದೇಶಗಳಲ್ಲಿ ಮಾತ್ರ ಹೆಚ್ಚು ಹಣ ಸಂಪತ್ತು ಇರುತ್ತದೆಯಂತೆ.
  • ಒಬ್ಬ ವ್ಯಕ್ತಿಯನ್ನು ಹತ್ತು ಜನ ಹೊಗಳಿದರೆ ನಾವೂ ಅವರನ್ನು ಹೊಗಳಬೇಕಂತೆ. ಆದರೆ ತಾವೇ ಯಾರನ್ನೂ ಹೊಗಳಬಾರದು.
  • ಇದ್ದಿದ್ದರಲ್ಲೇ ಜೀವಿಸುವುದರಿಂದ ನಿಜವಾದ ಆನಂದ ಸಿಗುತ್ತದೆಯಂತೆ.
  • ಮಾನವರು ತಮ್ಮ ಎದುರಿನ ವ್ಯಕ್ತಿಯ ಕಷ್ಟಗಳನ್ನು ನೊಡಿ ಸಹಾಯ ಮಾಡದಿದ್ದರೆ ಅವರು ಬದುಕಿ ಸತ್ತಂತೆ.
  • ಸದಾ ಗೆಲುವು ಸಾಧಿಸುತ್ತಿರುವವರನ್ನು ಆದರ್ಶವಾಗಿಟ್ಟುಕೊಂಡರೆ ಅಥವಾ ಅಂತಹವರ ಕುರಿತ ಕಥೆಗಳು ಓದಬೇಕು. ಇದರಿಂದ ಸ್ಫೂರ್ತಿಗೊಂಡು ನಾವು ಜಯಗಳಿಸುತ್ತೇವೆ.
  • ಜೀವನದಲ್ಲಿ ಸಿಗುವ ಯಾವ ಅವಕಾಶಗಳನ್ನೂ ಬಿಡಬಾರದಂತೆ. ಯಾರ ಜೀವನ ಎಲ್ಲಿ ಬದಲಾಗುತ್ತದೋ ಯಾರಿಗೂ ತಿಳಿದಿಲ್ಲವೆ.


Click Here To Download Kannada AP2TG App From PlayStore!