ಮೃತರಾದ ಹಿರಿಯರು,ಪೂರ್ವಿಕರು ಕನಸಿನಲ್ಲಿ ಬರುವುದರ ಅರ್ಥ ಏನೆಂದು ನಿಮಗೆ ಗೊತ್ತೇ?

ಮೃತರಾದ ನಮ್ಮ ಹಿರಿಯರು,ಪೂರ್ವಿಕರು ಯಾರಿಗಾದರೂ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ,ಹೀಗೆ ಕಾಣಿಸಿಕೊಳ್ಳುವುದನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಅರ್ಥೈಸುತ್ತಾರೆ. ಸತ್ತವರ ಕರ್ಮಗಳನ್ನು ಸರಿಯಾಗಿ ಮಾಡದ ಕಾರಣ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆಂದು ಕೆಲವರು ಹೇಳಿದರೆ,ಸತ್ತವರು ನಿಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಅಥವಾ ದ್ವೇಷಿಸುತ್ತಾರೆ ಇಲ್ಲವೆ ಇನ್ಯಾವುದೋ ಕಾರಣಕ್ಕೆ ಹಾಗೆ ಕಾಣಿಸಿಕೊಳ್ಳುತ್ತಿರಬಹುದೆಂದು ಹೇಳುತ್ತಿರುತ್ತಾರೆ.ಸತ್ತವರು ಕನಸಿನಲ್ಲಿ ಬರುವುದಕ್ಕೆ ಬೇರೆಯೇ ಕಾರಣಗಳಿವೆಯೆಂದು ನಿಮಗೆ ಗೊತ್ತೇ? ಅಂತಹ ಕಾರಣಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

ಹಿಂದೂ ಸಂಪ್ರದಾಯದ ಪ್ರಕಾರ,ಹಲವು ವರ್ಗದವರು ತಮ್ಮ ಪದ್ಧತಿಗನುಸಾರವಾಗಿ ಮೃತರಿಗೆ 15 ದಿನಗಳ ಒಳಗೆ ಕರ್ಮ ಕ್ರಿಯೆಗಳನ್ನು ಮಾಡುತ್ತಾರೆ. ತಿಂಗಳಿಗೊಮ್ಮೆ ಮಾಸಿಕ, ವರ್ಷಕ್ಕೊಮ್ಮೆ ವಾರ್ಷಿಕ ಕರ್ಮ ಕ್ರಿಯೆ ಮಾಡಿ ಮೃತರನ್ನು ನೆನಪಿಸಿಕೊಂಡರೆ ಅವರ ಆಶಿರ್ವಾದಗಳು ಹಾಗು ಪೂರ್ವಿಕರ ಆಶೀರ್ವಾದಗಳು ಆ ಕುಟುಂಬಕ್ಕೆ ಲಭಿಸುತ್ತವಂತೆ. ಅಗ್ನಿ ಪುರಾಣ,ಗರುಡ ಪುರಾಣ,ವಾಯುಪುರಾಣ ಗಳಲ್ಲಿ ಇದರಬಗ್ಗೆ ಹೇಳಲಾಗಿದೆಯಂತೆ. ಈ ರೀತಿಯಾಗಿ ಕರ್ಮಗಳನ್ನು ಮಾಡುವ ಕುಟುಂಬಗಳಿಗೆ ಒಳ್ಳೆಯದಾಗುತ್ತದಂತೆ.

  • ಯಾವುದಾದರೂ ಒಬ್ಬ ವ್ಯಕ್ತಿ ಅಪಘಾತದಲ್ಲಿ ಇಲ್ಲವೆ ಪ್ರಾಕೃತಿಕ ವಿಕೋಪಗಳಿಂದ ಸಹಜವಾಗಿ ಮರಣಹೊಂದಿದರೆ ಅಂತಹ ಕುಟುಂಬಗಳಿಗೆ ಮರಣ ಹೊಂದಿದವರ ಪೂರ್ವಿಕರ ಆಶೀರ್ವಾದ ಹೆಚ್ಚು ಲಭಿಸುತ್ತದಂತೆ.
  • ಯಾರ ಕನಸಿನಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತವೆಯೋ ಅವರ ಪೂರ್ವಿಕರ ಆಶಿರ್ವಾದಗಳು ಹೆಚ್ಚಾಗಿರುತ್ತವೆಂದು ತಿಳಿಯಬೇಕು. ಮತ್ತು ಅವರ ಪೂರ್ವಿಕರು ಯಾವುದಾದರೂ ಒಂದು ಲೋಕದಲ್ಲಿ ಸುಖವಾಗಿರುತ್ತಾರೆಂದು ಬದುಕಿರುವವರು ತಿಳಿದುಕೊಳ್ಳಬೇಕು.
  • ಉತ್ತರಾದಿ ಕ್ರಿಯೆಗಳನ್ನು ಮಾಡುವ ಸಮಯದಲ್ಲಿ ಯಾರಿಗಾದರೂ ಅನಪೇಕ್ಷಿತ ಧನಪ್ರಾಪ್ತಿಯಾದರೆ,ಬಹಳ ದಿನಗಳಿಂದ ನೆನಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಂಡರೆ,ಹೊಸದಾಗಿ ವ್ಯಾಪಾರ ಪ್ರಾರಂಭಿಸಿದರೆ, ಇದೆಲ್ಲವೂ ಮೃತರ ಪೂರ್ವಿಕರ ಆಶೀರ್ವಾದದಿಂದಲೇ ಎಂದು ತಿಳಿಯಬೇಕು.
  • ಮೃತರಾದವರುಸಂತೋಷವಾಗಿದ್ದಂತೆ,ಆಶೀರ್ವಾದ ಮಾಡುತ್ತಿದ್ದಂತೆ ಕನಸು ಬಿದ್ದರೆ,ಅಂತಹ ಕನಸು ಕಂಡವರಿಗೆ ಎಲ್ಲಾ ಒಳ್ಳೆಯದೇ ಆಗುವುದಂತೆ.
  • ಯಾರಾದರೂ ಒಬ್ಬ ವ್ಯಕ್ತಿ ಯಾವುದಾದರೂ ಕೆಲಸಮಾಡಲು ಹೊರಟಾಗ,ಹಿರಿಯರ ಸಹಾಯ ದೊರೆತರೆ,ಅದು ಮರಣ ಹೊಂದಿದವರ ಪೂರ್ವಿಕರ ಆಶೀರ್ವಾದದಿಂದಲೇ ಎಂದು ತಿಳಿಯಬೇಕು.
    ತಂದೆ,ತಾಯಿ,ಒಡ ಹುಟ್ಟಿದವರೊಡನೆ ಒಳ್ಳೆಯದಾಗಿ ನಡೆದುಕೊಳ್ಳುತ್ತಿದ್ದರೆ, ಅವರಿಗೆ ಮರಣ ಹೊಂದಿದ ಹಿರಿಯರ ಆಶಿರ್ವಾದಗಳು ಹೇರಳವಾಗಿ ಲಭಿಸುತ್ತವಂತೆ.

Click Here To Download Kannada AP2TG App From PlayStore!

Share this post

scroll to top