ಹಾವು ನಿಜಕ್ಕೂ ಹಗೆ ಸಾಧಿಸುತ್ತದಾ? ಹೊಡೆದ ಹಾವನ್ನು ಸಾಯಿಸದೆ ಬಿಟ್ಟುಬಿಟ್ಟರೆ…ಅದು ನಮ್ಮನ್ನು ಕಾಡುತ್ತದಾ?

ಹಾವನ್ನು ಸಾಯಿಸುವಾಗ ಅದರ ಮೇಲೆ ಹೊಡೆತ ಬಿದ್ದ ಮೇಲೆ…ಅದು ತಪ್ಪಿಸಿಕೊಂಡರೆ…ಅದು ನಮ್ಮ ಮೇಲೆ ಹಗೆ ಸಾಧಿಸುತ್ತಾ? ಹಾವನ್ನು ಹೊಡೆದ ಮೇಲೆ ಅದು ತನ್ನ ಮೆಮೊರಿಯಲ್ಲಿ ನಿಮ್ಮ ಫೋಟೋ ಸೇವ್ ಮಾಡಿಕೊಂಡು….ಬಳಿಕ ಪ್ರತೀಕಾರ ತೀರಿಸಿಕೊಳ್ಳುತ್ತಾ? ಎಂದರೆ…ಹೌದು ಎನ್ನುತ್ತಾರೆ ನಮ್ಮ ಹಿರಿಯರು. ಹಾವಿನ ದ್ವೇಷ ಹನ್ನೆರಡು ವರುಷ ಎಂಬ ಹಾಡೇ ಇದೆಯಲ್ಲವೇ. ಆದರೆ ವಿಜ್ಞಾನದ ಪ್ರಕಾರ ಹಾವು ಹಗೆ ಸಾಧಿಸುತ್ತಾ? ಎಷ್ಟೇ ದಿನಗಳಾದರೂ ಹಾವು ಹಗೆ ತೀರಿಸಿಕೊಳ್ಳುತ್ತಾ? ಎಂಬ ವಿಷಯವನ್ನು ಸ್ವಲ್ಪ ಗಮನಿಸಿ ಪರಿಶೀಲಿಸಿದರೆ….ಅಚ್ಚರಿಯ ಸಂಗತಿಗಳು ಗೊತ್ತಾಗುತ್ತವೆ.ನಿಜವೇನೆಂದರೆ….ಹಾವಿಗೆ ನಿಜವಾಗಿ ಮೆಮೊರಿ ಇರಲ್ಲವಂತೆ… ಆ ರೀತಿ ಇರಬೇಕಾದರೆ ಹಾವು ನಮ್ಮನ್ನು ನೆನಪಿಟ್ಟಿಕೊಳ್ಳುವ ಚಾನ್ಸ್…ಹಗೆ ಸಾಧಿಸುವ ಸಂದರ್ಭ ಎಂಬುದು ಇಲ್ಲವೇ ಇಲ್ಲ..! ಇದೆಲ್ಲಾ ನಮ್ಮವರು ಕಲ್ಪಿಸಿದ ಒಂದು ನಂಬಿಕೆ ಅಷ್ಟೇ..! ಆದರೆ ಇದರ ಹಿಂದೆ ಕಾರಣವೊಂದು ಇದೆ ಎನ್ನುತ್ತಾರೆ ಬಹಳಷ್ಟು ಮಂದಿ.

ಆಗ ರೈತರ ಪ್ರಮುಖ ಉದ್ಯೋಗ ಕೃಷಿ. ಬೆಳೆದ ಬೆಳೆಗೆ ಇಲಿಗಳಿಂದ ಸಾಕಷ್ಟು ನಷ್ಟವಾಗುತ್ತಿತ್ತು. ಆದಕಾರಣ ಕಣ್ಣಿಗೆ ಬಿದ್ದ ಹಾವನ್ನು ಹಾಗೆಯೇ ಸಾಯಿಸುತ್ತಿದ್ದರು…ಆದರೆ ಇಲಿಗಳನ್ನು ಭಕ್ಷಿಸುವ ಹಾವುಗಳ ಸಂಖ್ಯೆ ಇಳಿಮುಖವಾಯಿತು. ಇಲಿಗಳ ಸಂಖ್ಯೆ ಮಿತಿಮೀರಿ ಬೆಳೆಯಿತು. ಬೆಳೆಗಳು ಇನ್ನಷ್ಟು ನಷ್ಟಕ್ಕೆ ಒಳಗಾಗುತ್ತವೆ ಎಂಬ ಕಾರಣಕ್ಕೆ…ಹಾವುಗಳನ್ನು ಸಾಯಿಸಬೇಡಿ, ಒಂದು ವೇಳೆ ಮಿಸ್ ಆದರೆ ಅವು ಹಗೆ ಸಾಧಿಸುತ್ತವೆ ಎಂಬ ಭಯ ಸೃಷ್ಟಿಸಿದರಂತೆ..! ಹಿಂದಿನ ಕಾಲದ ಜನ ಹಾವನ್ನು ದೇವರಂತೆ ಪೂಜಿಸುವುದು, ಪ್ರಕೃತಿ ಪ್ರಿಯರು ಆಗಿದ್ದ ಕಾರಣವೇ ಇದಕ್ಕೆ ಕಾರಣವಂತೆ..!


Click Here To Download Kannada AP2TG App From PlayStore!