ಈ ಸೂಚನೆಗಳು ಕಾಣಿಸಿಕೊಂಡಲ್ಲಿ ಬೇಗೆನೆ ಸಾಯುತ್ತಾರಂತೆ…ಆವು ಯಾವುವೆಂದು ಗೊತ್ತಾ..?

ಶಿವನ ಆಜ್ಞೆ ಇಲ್ಲದೆ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲವಂತೆ. ಸೃಷ್ಠಿ, ಸ್ಥಿತಿ, ಲಯಕಾರಕರಲ್ಲಿ…’ಲಯ’ ಕ್ಕೆ ಪ್ರಮುಖವಾದವನು ಶಿವ. ಶಿವನ ಆಜ್ಞೆ ದೊರೆತರೆ ಮಾತ್ರ ಯಮ ಪ್ರಾಣವನ್ನು ತೆಗೆದುಕೊಂಡು ಹೋಗುತ್ತಾನೆಂದು ಪುರಾಣಗಳು ಘಂಟಾಘೋಷವಾಗಿ ಹೇಳುತ್ತವೆ. ಅದಕ್ಕೇ, ಮನುಷ್ಯ ಮರಣಿಸುವುದಕ್ಕೂ ಮುನ್ನ ಕೆಲಸು ಸೂಚನೆಗಳನ್ನು ಕಳುಹಿಸಲಾಗುತ್ತವಂತೆ. ಸಾಕ್ಷಾತ್ ಶಿವನೇ ಈ ವಿಷಯವನ್ನು ಪಾರ್ವತಿ ದೇವಿಗೆ ಹೇಳಿದ್ದಾನಂತೆ. ಅವುಗಳ ಕಡೆ ಗಮನವಿಟ್ಟಲ್ಲಿ , ಮರಣ ಎಷ್ಟು ದಿನಗಳಲ್ಲಿ. ಬರುತ್ತದೆಂದು ಹೇಳಬಹುದಂತೆ. ಈ ಕುರಿತು ಪುರಾಣಗಳಲ್ಲೂ ಉಲ್ಲೇಖಿಸಲಾಗಿದೆಯಂತೆ. ಈ ನಿಟ್ಟಿನಲ್ಲಿ ಮನುಷ್ಯ ಮರಣಿಸುವುದಕ್ಕೂ ಮುನ್ನ ನಮಗೆ ಬರುವ ಸೂಚನೆಗಳನ್ನು ತಿಳಿದುಕೊಳ್ಳೋಣ.


1. ಯಾರಾದರೂ ಒಬ್ಬ ಮನುಷ್ಯನಿಗೆ, ಆತನ ಪ್ರತಿಬಿಂಬ ಎಣ್ಣೆ, ನೀರು ಇಲ್ಲವೇ ಕನ್ನಡಿಯಲ್ಲಿ ಕಾಣಿಸದಿದ್ದರೆ, ಆತ ಮುಂದಿನ ಆರು ತಿಂಗಳಗಳ ಒಳಗೆ ಮರಣಿಸುತ್ತಾನೆಂದು ತಿಳಿಯಬೇಕು.
2. ಯಾರಿಗೆ ಬಾಯಿ, ಕಿವಿ, ಕಣ್ಣು, ನಾಲಗೆ ಕೆಲಸ ಮಾಡದೆ ಹೋಗುತ್ತವೆಯೋ ಅಂತಹವರು 6 ತಿಂಗಳಲ್ಲಿ ಮರಣಿಸುತ್ತಾರೆ. ಇವು ಮೃತ್ಯುವನ್ನು ಸೂಚಿಸುತ್ತವೆ.
3. ಯಾವುದೇ ವ್ಯಕ್ತಿಯ ಶರೀರವು ಇದ್ದಕ್ಕಿದ್ದಂತೆ ಬಿಳಿ ಅಥವಾ ಹಳದಿ ಬಣ್ಣಕ್ಕೆ ತಿರುಗಿ, ಶರೀರದಲ್ಲಿ ಕೆಂಪು ಮಚ್ಚೆಗಳು ಮೂಡುತ್ತಿದ್ದರೆ, ಅಂತಹವರು 6 ತಿಂಗಳೊಳಗೆ ಮರಣಿಸುತ್ತಾರಂತೆ.

4.ಗಂಟಲು, ನಾಲಗೆ ಪದೇ,ಪದೇ ಒಣಗುತ್ತಿದ್ದರೆ ಅಂತಹವರು ಸಧ್ಯದಲ್ಲೇ ಸಾಯುವ ಸಾಧ್ಯತೆಯಿದೆ.
5. ನೋವಿನಿಂದ ಎಡಗೈಯನ್ನು ಪದೇ ಪದೇ ಹಿಂದಕ್ಕೆ ಎಳೆಯುತ್ತಿದ್ದರೂ, ನಾಲಗೆ ಒಣಗುತ್ತಿದ್ದರೂ ಅಂತಹವರು ಒಂದು ತಿಂಗಳಲಲ್ಲಿ ಮರಣಿಸುತ್ತಾರೆ.
6. ಸೂರ್ಯ ಅಥವಾ ಚಂದ್ರನನ್ನು ನೋಡಿದಾಗ , ಸುತ್ತಲೂ ಕೆಂಪು ಬಣ್ಣದ ಉಂಗುರ ಕಾಣಿಸಿದರೆ, ಅಂತಹವರು 25 ದಿನಗಳೊಳಗೆ ಮರಣಿಸುತ್ತಾರೆ.
7.ನಕ್ಷತ್ರಗಳನ್ನು, ಚಂದ್ರನನ್ನು ನೋಡಲಾಗದವರು, ಇಲ್ಲವೇ ಅವುಗಳ ಸ್ಥಾನದಲ್ಲಿ ಕಪ್ಪಗಿನ ಕಾಂತಿಯನ್ನು ನೋಡಿದವರಿಗೆ ಮರಣ ಅತ್ಯಂತ ಸಮೀಪದಲ್ಲೇ ಇದೆಯೆಂದು ತಿಳಿಯಬೇಕು.
8.ನೀಲಿ ಬಣ್ಣದ ನೊಣಗಳು ಯಾರನ್ನಾದರೂ ಸುತ್ತುವರಿದರೆ ಅವರ ಮರಣ ಒಂದು ತಿಂಗಳೊಳಗೆ ಸಂಭವಿಸುತ್ತದೆ.
9.ರಣಹದ್ದು, ಕಾಗೆ ಇಲ್ಲವೇ ಪಾರಿವಾಳ ಬಂದು ತಲೆಯ ಮೇಲೆ ಕುಳಿತುಕೊಂಡರೆ,ಬೇಗನೆ ಮರಣಿಸುತ್ತಾರೆ.
10. ಯಾರಿಗೆ ಅವರ ನೆರಳು ತಲೆಯಿಲ್ಲದೆ ಕಾಣಿಸುತ್ತಿದೆಯೋ ಅಂತಹವರ ಮರಣ ಸಹ ಸಧ್ಯದಲ್ಲೇ ಸಂಭವಿಸುತ್ತದೆ.
11. ಕಣ್ಣಿನ ದೃಷ್ಟಿ ಕಳೆದುಕೊಂಡರೆ ಇಲ್ಲವೇ ಜ್ವಾಲೆಯನ್ನು ಸರಿಯಾಗಿ ನೋಡಲಾಗದವರ ಮರಣ ಸಧ್ಯದಲ್ಲೇ ಸಂಭವಿಸುತ್ತದೆ.
12.ಪೋಲ್ ಸ್ಟಾರ್ ಎಂದು ಕರೆಯಲ್ಪಡುವ ನಾರ್ತ್ ಸ್ಟಾರ್ ಇಲ್ಲವೇ ಸೂರ್ಯನನ್ನು ನೋಡಲಾಗದವರು, ರಾತ್ರಿಯ ವೇಳೆ ಕಾಮನ ಬಿಲ್ಲು ಕಾಣಿಸುತ್ತಿದ್ದರೆ, ಅಂತಹವರು ಖಂಡಿತ ಸಧ್ಯದಲ್ಲೇ ಮರಣಿಸುತ್ತಾರೆ.

 


Click Here To Download Kannada AP2TG App From PlayStore!