ನಿಮ್ಮ ಸ್ನೇಹಿತರ ಜತೆಗಿನ ಸ್ನೇಹ ಚಿರಕಾಲ ಹಾಗೆಯೇ ಇರಬೇಕೆಂದು ಬಯಸುತ್ತಿದ್ದೀರಾ..? ಆದರೆ ಈ 6 ತಪ್ಪುಗಳನ್ನು ಮಾಡಬಾರದು..!

ಸೃಷ್ಟಿಯಲ್ಲಿರುವ ಮನುಷ್ಯರೆಲ್ಲರ ನಡುವೆ ಇರುವ ಸಂಬಂಧಗಳಲ್ಲಿ ಸ್ನೇಹಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ಸ್ವಂತ ಕುಟುಂಬದ ಸದಸ್ಯರ ಬಳಿ ಹೇಳಿಕೊಳ್ಳಲಾಗದ, ಹಂಚಿಕೊಳ್ಳಲಾಗದ ಅದೆಷ್ಟೋ ವಿಚಾರಗಳನ್ನು ಬಹಳಷ್ಟು ಮಂದಿ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಯಾಕೆಂದರೆ ಆ ಬಂಧನಕ್ಕೆ ಅಷ್ಟು ಬೆಲೆ ಇರುವ ಕಾರಣ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಅದಾಗಲೆ ಈ ದಿನಾಚರಣೆ ಆಚರಿಸಿಕೊಂಡಾಗಿದೆ. ಆದರೆ ಇದೆಲ್ಲಾ ಸರಿ, ನಿಮ್ಮಿಂದ ನಡೆಯುವ ಕೆಲವು ವಾಸ್ತುದೋಷಗಳು, ತಪ್ಪುಗಳಿಂದ ನಿಮ್ಮ ಗೆಳೆಯರೊಂದಿಗೆ ನಿಮಗೆ ಇರುವ ಫ್ರೆಂಡ್‌ಶಿಪ್ ಕಟ್ ಆಗಲು ಅವಕಾಶ ಇರುತ್ತದೆ ಗೊತ್ತಾ..? ಹೌದು, ವಾಸ್ತು ದೋಷ ಇದ್ದರೂ ಅದು ಆ ಮನೆಯಲ್ಲಿರುವ ವ್ಯಕ್ತಿ ಸ್ನೇಹಿತರ ಮೇಲೂ ಉಂಟಾಗುತ್ತದೆ. ಹಾಗಿದ್ದರೆ ಆ ದೋಷಗಳೇನು ಎಂದು ಈಗ ತಿಳಿದುಕೊಳ್ಳೋಣವೇ..!

1. ಮೇಯಿನ್ ಗೇಟ್:ಮನೆಯ ಮೇಯಿನ್ ಗೇಟ್ ವಾತಾವರಣ ತುಂಬಾ ಸ್ವಚ್ಛವಾಗಿರಬೇಕು. ಇಲ್ಲದಿದ್ದರೆ ಅದು ವಾಸ್ತು ದೋಷ ಉಂಟುಮಾಡುತ್ತದೆ. ಹಾಗಾಗಿ ಆ ಮನೆಯಲ್ಲಿರುವ ವ್ಯಕ್ತಿಗಳು ಸ್ನೇಹಿತರಿಗೆ ದೂರವಾಗುತ್ತಾರೆ. ಅವರ ಫ್ರೆಂಡ್‌ಶಿಪ್ ಕಟ್ ಆಗುತ್ತದೆ. ಆದಕಾರಣ ಮನೆಯ ಮುಖ್ಯ ಗೇಟನ್ನು, ಅಲ್ಲಿನ ವಾತಾವರಣವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅದೇ ರೀತಿ ಗೇಟ್ ಮೇಲೆ ಬಟ್ಟೆಗಳನ್ನು ಒಣಹಾಕಬಾರದು. ಯಾವುದೇ ರೀತಿಯ ವಸ್ತುಗಳನ್ನೂ ಇಡಬಾರದು, ನೇತು ಹಾಕಬಾರದು.

2. ಆಹಾರ:ಬಹಳಷ್ಟು ಮಂದಿ ಸ್ನೇಹಿತರು ಏನು ಮಾಡುತ್ತಾರೆಂದರೆ ಯಾರಾದರೂ ಊಟ ಮಾಡುತ್ತಿದ್ದರೆ ಅವರ ಪ್ಲೇಟ್‌ನಿಂದ ಆ ಆಹಾರವನ್ನು ಎತ್ತಿಕೊಂಡು ತಿನ್ನುತ್ತಾರೆ. ಕೆಲವು ಮಾಮೂಲಿಯಾಗಿ ಪ್ಲೇಟ್‌ನಲ್ಲಿರುವ ಆಹಾರವನ್ನು ತೆಗೆದುಕೊಂಡು ತಿನ್ನುತ್ತಾರೆ. ಈ ರೀತಿ ಎರಡು ವಿಧದಲ್ಲೂ ಮಾಡಬಾರದು. ಫ್ರೆಂಡ್ಸ್ ಯಾರೇ ಆಗಲಿ ಒಬ್ಬರ ಪ್ಲೇಟ್‌ನಲ್ಲಿನ ಆಹಾರವನ್ನು ಇನ್ನೊಬ್ಬರು ತೆಗೆದುಕೊಂಡು ತಿನ್ನಬಾರದಂತೆ. ಕೇವಲ ಕುಟುಂಬ ಸದಸ್ಯರು ಮಾತ್ರ ಆ ಕೆಲಸ ಮಾಡಬಹುದಂತೆ. ಆ ರೀತಿ ಅಲ್ಲದೆ ಫ್ರೆಂಡ್ಸ್ ಮಾಡಿದರೆ ಅವರ ಗೆಳೆತನ ಕಟ್ ಆಗುವ ಸಾಧ್ಯತೆಗಳಿವೆಯಂತೆ.

3. ಮನೆಯ ಮೇಲಿನ ಭಾಗ:ಮನೆಯ ಮೇಲ್ಛಾವಣೆ ಮೇಲೆ ಯಾವುದೇ ರೀತಿಯ ವಸ್ತುಗಳನ್ನೂ (ಹಳೆಯವಾದರೂ, ಹೊಸವಾದರೂ, ಹಾಳಾಗಿದ್ದರೂ) ಇಡಬಾರದು. ಇಟ್ಟರೆ ಅವು ವಾಸ್ತುದೋಷ ಉಂಟು ಮಾಡುತ್ತವೆ. ಆ ಮನೆಯಲ್ಲಿರುವವರ ಗೆಳೆಯರೊಂದಿಗೆ ಅವರ ಫ್ರೆಂಡ್‌ಶಿಪ್ ಕಟ್ ಆಗುತ್ತದಂತೆ.

4. ಪರ್‌ಫ್ಯೂಮ್:ಪರ್‌ಫ್ಯೂಮ್‌ಗಳನ್ನು ಸ್ನೇಹಿತರು ಒಬ್ಬರಿಗೊಬ್ಬರು ಗಿಫ್ಟ್ ಆಗಿ ಕೊಟ್ಟುಕೊಳ್ಳಬಾರದಂತೆ. ಆ ರೀತಿ ಕೊಟ್ಟುಕೊಂಡರೆ ಸ್ನೇಹ ಕೆಡುತ್ತದಂತೆ. ಅವರ ರಿಲೇಷನ್ ಕಟ್ ಆಗುತ್ತದಂತೆ.

5. ಕಪ್ಪು ಬಣ್ಣದ ಬಟ್ಟೆಗಳು:ಸ್ನೇಹಿತರು ಯಾರೇ ಆಗಲಿ ಒಬ್ಬರಿಗೊಬ್ಬರು ಕಪ್ಪು ಬಣ್ಣದ ಬಟ್ಟೆಗಳನ್ನು ಉಡುಗೊರೆಯಾಗಿ ಕೊಟ್ಟುಕೊಳ್ಳಬಾರದಂತೆ. ಕೊಟ್ಟರೆ ಅವರ ಗೆಳೆತನಕ್ಕೆ ಅಪಾಯ ತಪ್ಪಿದ್ದಲ್ಲ.

6. ಸಾಲ ತೆಗೆದುಕೊಳ್ಳುವುದು:ಶನಿವಾರದ ದಿನ ಫ್ರೆಂಡ್ಸ್ ಯಾರೇ ಆಗಲಿ ಒಬ್ಬರಿಂದ ಇನ್ನೊಬ್ಬರು ಹಣ ಅಥವಾ ಇತರೆ ವಸ್ತುಗಳನ್ನು ಸಾಲವಾಗಿ, ಬದಲಿಯಾಗಿ ತೆಗೆದುಕೊಳ್ಳಬಾರದಂತೆ. ತೆಗೆದುಕೊಂಡರೆ ಅವರ ಸ್ನೇಹ ಹೆಚ್ಚು ದಿನ ಸಾಗಲ್ಲ.

 


Click Here To Download Kannada AP2TG App From PlayStore!