2018ರಲ್ಲಿ ಈ 5 ವಸ್ತುಗಳನ್ನು “ಗಿಫ್ಟ್” ಆಗಿ ಯಾವುದೇ ಕಾರಣಕ್ಕೂ ಕೊಡಬಾರದಂತೆ..! ಅವು ಏನು ಗೊತ್ತಾ.? ಯಾಕೆಂದರೆ.?

ವಿವಾಹ..ಹುಟ್ಟುಹಬ್ಬ…ನಿವೃತ್ತಿ.. ಮ್ಯಾರೇಜ್ ಎಂಗೇಜ್‌ಮೆಂಟ್, ರಿಸೆಪ್ಷನ್…ಹೀಗೆ ನಾವು ಜೀವನದಲ್ಲಿ ನಡೆಸಿಕೊಳ್ಳುವ ಶುಭ ಕಾರ್ಯಗಳು ಅನೇಕ ಇವೆ. ಇತರರು ನಡೆಸಿಕೊಳ್ಳುವ ಕಾರ್ಯಕ್ರಮಗಳಿಗೂ ನಾವು ಹಾಜರಾಗುತ್ತಿರುತ್ತೇವೆ. ಶುಭಕಾರ್ಯಗಳಿಗೆ ಹೋಗುವಾಗ ಬರಿಗೈಲಿ ಹೋಗಲ್ಲ ಅಲ್ಲವೇ. ಏನೋ ಒಂದು ಗಿಫ್ಟ್ ಜತೆಗೆ ತೆಗೆದುಕೊಂಡು ಹೋಗಿ ಕೊಡುತ್ತೇವೆ. ಆದರೆ ಈ ರೀತಿ ಶುಭಕಾರ್ಯಗಳಿಗೆ ಕೊಡುವ ಗಿಫ್ಟ್ ವಿಷಯಕ್ಕೆ ಬಂದರೆ ಬಹಳಷ್ಟು ಮಂದಿ ಕಾಮನ್ ಆಗಿ ನೀಡುವ ಕೆಲವು ಗಿಫ್ಟ್ಸ್ ಇವೆ. ಅವೇನು…ಇಷ್ಟಕ್ಕೂ ಅಂತಹ ಗಿಫ್ಟ್ಸ್ ಕೊಡಬಹುದಾ, ಕೊಡಬಾರದಾ, ಯಾಕೆ ಕೊಡಬಾರದು…ಮುಂತಾದ ಸಂಗತಿಗಳನ್ನು ಈಗ ತಿಳಿದುಕೊಳ್ಳೋಣ.

1. ಹೂವು
ಯಾವುದೇ ಶುಭಕಾರ್ಯವಾದರೂ ಬಹಳಷ್ಟು ಮಂದಿ ಹೂಗಳನ್ನು ಅಥವಾ ಫ್ಲವರ್ ಬೊಕೆಗಳನ್ನು ಗಿಫ್ಟ್ ಅಗಿ ಕೊಡುತ್ತಿರುತ್ತಾರೆ. ಆದರೆ ನಿಜವಾಗಿ ಇದನ್ನು ಗಿಫ್ಟ್ ಆಗಿ ನೀಡುವವರು ಒಮ್ಮೆ ಆಲೋಚಿಸಬೇಕು. ಯಾಕೆಂದರೆ ನಾವು ಪ್ರೀತಿಯಿಂದ ಕೊಡುವ ಗಿಫ್ಟ್ ಅದು. ಅದು ಒಂದು ದಿನ ಆದರೆ ಪರ್ವಾಗಿಲ್ಲ. ಗಿಫ್ಟ್ ಕೊಟ್ಟ ದಿನ ಆ ಹೂಗಳು ಚೆನ್ನಾಗಿಯೇ ಇರುತ್ತವೆ. ಸ್ವಲ್ಪ ಸಮಯದ ಬಳಿಕ ಅವು ಬಾಡುತ್ತವೆ. ಅಂತಹ ಸಂದರ್ಭದಲ್ಲಿ ಹೂಗಳನ್ನು ಗಿಫ್ಟ್ ಆಗಿ ಕೊಟ್ಟು ಏನು ಪ್ರಯೋಜನ ಹೇಳಿ. ಗಿಫ್ಟ್ ಕೊಟ್ಟರೆ ಅದು ಅವರ ಬಳಿ ಚಿರಕಾಲ ಇರುವಂತೆ ನೋಡಿಕೊಳ್ಳಬೇಕು. ಅದನ್ನು ತೋರಿಸಿದಾಗಲೆಲ್ಲಾ ನಾವು ನೆನಪಾಗುವಂತೆ ಉಡುಗೊರೆ ಇರಬೇಕು. ಹೂಗಳನ್ನು ಗಿಫ್ಟ್ ಆಗಿ ನೀಡಬಾರದು.

2. ಮಗ್ಸ್, ಕಿಚನ್‍ವೇರ್
ಬಹಳಷ್ಟು ಮಂದಿ ಕಿಚನ್‌ಗೆ ಸಂಬಂಧಿಸಿದ ಚಾಕು, ಮಗ್‌ಗಳು, ಪಾತ್ರೆ…ಇನ್ನಿತರೆ ವಸ್ತುಗಳನ್ನು ಗಿಫ್ಟ್ ಆಗಿ ನೀಡುತ್ತಾರೆ. ಅವನ್ನು ಸ್ವೀಕರಿಸಿದವರು ಅವನ್ನು ಒಂದು ಮೂಲೆಗೆ ಹಾಕುತ್ತಾರೆ. ಯಾಕೆಂದರೆ ಇಂತಹ ವಸ್ತುಗಳು ಮನೆಗಳಲ್ಲಿ ಸಾಕಷ್ಟು ಇರುತ್ತವೆ. ಇನ್ನು ಗಿಫ್ಟ್‌ಗಳಾಗಿ ಬರುವ ವಸ್ತುಗಳನ್ನು ಯಾರು ತಾನೆ ಬಳಸುತ್ತಾರೆ ಹೇಳಿ. ಆದಕಾರಣ ಇಂತಹ ವಸ್ತುಗಳನ್ನು ಸಹ ಗಿಫ್ಟ್ ಆಗಿ ಕೊಡದಿರುವುದೇ ಉತ್ತಮ.

3. ಸ್ಟೇಷನರಿ ಐಟಮ್ಸ್
ಡೈರಿಗಳು, ಪೆನ್ನುಗಳು, ಪೆನ್ಸಿಲ್‍ಗಳು…ಇನ್ನಿತರೆ ಸ್ಟೇಷನರಿ ಐಟಮ್ಸ್ ಗಿಫ್ಟ್ ಆಗಿ ಯಾವುದೇ ಕಾರಣಕ್ಕೂ ನೀಡಬಾರದು. ಅವನ್ನು ಕೇವಲ ಓದಿಕೊಳ್ಳುವ ಮಕ್ಕಳಿಗೆ ಮಾತ್ರ ನೀಡಬೇಕು. ಅವು ಅವರಿಗೆ ಉಪಯುಕ್ತವಾಗಿ ಇರುತ್ತವೆ. ಸ್ಟೇಷನರಿ ಐಟಮ್ಸ್‌ಗಳನ್ನು ಗಿಫ್ಟ್‌ ಆಗಿ ಕೊಟ್ಟರೆ ಅವನ್ನು ಯಾರೂ ಬಳಸಿಕೊಳ್ಳಲ್ಲ. ಮೂಲೆಗೆ ಹಾಕುತ್ತಾರೆ. ಆದಕಾರಣ ಅವನ್ನು ಉಡುಗೊರೆಯಾಗಿ ಕೊಡುವವರು ಒಮ್ಮೆ ಆಲೋಚಿಸಬೇಕು.

4. ಗೊಂಬೆಗಳು
ರಾಧಾಕೃಷ್ಣರ ಗೊಂಬೆ, ತಾಜ್ ಮಹಲ್, ಚಾರ್ಮಿನಾರ್, ಐಫಿಲ್ ಟವರ್‌ನಂತಹ ಕಟ್ಟಡಗಳನ್ನು ಹೋಲುವ ನಮೂನೆಗಳು, ಇತರೆ ಗೊಂಬೆಗಳನ್ನು ಸಹ ಗಿಫ್ಟ್ ಆಗಿ ನೀಡಬಾರದು. ಅವನ್ನೂ ಅಷ್ಟೇ ಮೂಲೆಗೆ ಬಿಸಾಕುತ್ತಾರೆ.

5. ಗಿಫ್ಟ್ ಓಚರ್‌ಗಳು
ಬಹಳಷ್ಟು ಮಂದಿ ಗಿಫ್ಟ್ ವೋಚರ್‌ಗಳನ್ನು ಬಹುಮಾನವಾಗಿ ನೀಡುವುದು ಸಾಮಾನ್ಯ. ಆದರೆ ಇದು ಸ್ವಲ್ಪ ಮಟ್ಟಿಗೆ ಚೆನ್ನಾಗಿಯೇ ಇರುತ್ತದೆ. ಆದರೆ ನೀವು ಕೊಟ್ಟ ಗಿಫ್ಟ್ ವೋಚರನ್ನು ನೀವು ಬಳಸಿಕೊಂಡ ಕೂಡಲೆ ಆ ಗಿಫ್ಟ್ ವೋಚರ್ ತೆಗೆದುಕೊಂಡವರು ನಿಮ್ಮ ಬಗ್ಗೆ ಮರೆಯುತ್ತಾರೆ. ಆದಕಾರಣ ಇವನ್ನೂ ಸಹ ಗಿಫ್ಟ್ ಆಗಿ ಕೊಡದಿರುವುದೇ ಉತ್ತಮ.


Click Here To Download Kannada AP2TG App From PlayStore!