ಆ ಗ್ರಾಮದಲ್ಲಿ ಪ್ರತಿಯೊಂದು ಮನೆಯಲ್ಲೂ ಒಂದು ವಿಮಾನವಿದೆ. ನಿಮಗೆ ಗೊತ್ತೇ?

ನಮ್ಮೆಲ್ಲರ ಬಳಿ ಮನೆಗೊಂದು ವಿಮಾನವಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೇ? ಸ್ವಲ್ಪ ತಾಳಿ…..ಏನು….ವಿಮಾನವೇ? ಅದೂ..ಮನೆಗೊಂದು…! ಆಸೆಪಡುವುದಕ್ಕೂ ಒಂದು ಮಿತಿಯಿರಬೇಕು.ಅದುಹೇಗೆ ಸಾದ್ಯ ಎಂದು ನೀವು ಪ್ರಶ್ನಿಸುತ್ತೀರಲ್ಲವೇ?. ನಮಗದು ಸಾದ್ಯವಾಗದಿರಬಹುದು. ಆದರೆ, ಅಮೆರಿಕದಲ್ಲಿರುವ ಆ ಗ್ರಾಮಸ್ತರಿಗೆ ಸಾದ್ಯ. ಹೊಸದಾಗಿ ಮಾರುಕಟ್ಟೆಗೆ ಬಂದ ಫೋನು, ಇತರೆ ವಸ್ತುಗಳನ್ನು ಇಷ್ಟಬಂದಹಾಗೆ ಕೊಂಡುಕೊಳ್ಳುತ್ತೇವೆಯೋ, ಅದೇ ರೀತಿ ಆ ಗ್ರಾಮಸ್ತರು ಸಹ ಯಾವುದೇ ಹೊಸ ನಮೂನೆಯ ವಿಮಾನ ಮಾರುಕಟ್ಟೆಗೆ ಬಂದರೆ,ಎಷ್ಟೇ ದರವಾದರೂ ಪರವಾಗಿಲ್ಲ ಅದನ್ನು ಕೊಂಡುಕೊಳ್ಳುತ್ತಾರಂತೆ. ಹೀಗಾಗಿ ಆಗ್ರಾಮದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಒಂದು ವಿಮಾನವಿದೆಯಂತೆ. ಸರಿಯಾಗಿ ಹೇಳಬೇಕೆಂದರೆ ಕೆಲವರು 2-3 ವಿಮಾನಗಳನ್ನು ಹೊಂದಿದ್ದಾರಂತೆ.ನಾವು ಬೈಕ್,ಕಾರುಗಳನ್ನು ಹೇಗೆ ನಿರ್ವಹಿಸುತ್ತೇವೆಯೋ ಅದೇ ರೀತಿ ಅವರು ಬಹಳ ಸುಲಭವಾಗಿ ವಿಮಾನಗಳನ್ನು ನಿರ್ವಹಿಸುತ್ತಿದ್ದಾರಂತೆ. ಈಗ ಆ ಗ್ರಾಮ ಒಂದು ವಿಮಾನ ನಿಲ್ದಾಣದಂತೆ ಕಾಣುತ್ತದೆ.ಇಷ್ಟಕ್ಕೂ ಆ ಗ್ರಾಮ ಯಾವುದೆಂದು ನಿಮಗೆ ಗೊತ್ತೇ ?

Spruce-Creek-Airport-4

Spruce-Creek-Airport-3

ಅಮೆರಿಕದ ಫ್ಲೋರಿಡಾ ರಾಜ್ಯದ ಡೆಟೋನಾ ಬೀಚ್ ಗೆ 11ಕಿ.ಮೀ ದೂರದಲ್ಲಿ ಸ್ಪ್ರೂಸ್ ಕ್ರಿಕ್ ವಿಮಾನ ನಿಲ್ದಾಣವಿದೆ. ಇದರ ಹೆಸರಲ್ಲೇ ಅಲ್ಲಿ ಸ್ಪ್ರೂಸ್ ಕ್ರಿಕ್ ಗೇಟೆಡ್ ಕಮ್ಯೂನಿಟಿ ಏರ್ಪಟ್ಟಿದೆ.ಆ ಕಾಲನಿಯಲ್ಲಿ ಸುಮಾರು 6 ಸಾವಿರ ಕುಟುಂಬಗಳು ವಾಸಿಸುತ್ತಿವೆ.ಆದರೆ, ಅಲ್ಲಿರುವ ಪ್ರತಿಯೊಂದು ಮನೆಯಲ್ಲೂ ಒಂದು ವಿಮಾನವಿದೆ. ಕೆಲವರ ಬಳಿ 2-3 ವಿಮಾನಗಳು ಇವೆಯಂತೆ. ಅವರು ತಮ್ಮ ವಿಮಾನಗಳನ್ನು ರಸ್ತೆಯಲ್ಲೇ ನಿಲ್ಲಿಸುತ್ತಾರಂತೆ.ಕೆಲವರು ಪ್ರತ್ಯೇಕವಾಗಿ ಪಾರ್ಕಿಂಗ್ ಜಾಗ ಖರೀದಿಸಿದ್ದಾರಂತೆ. ನಾವು ಮನೆಗಳ ಮುಂದೆ ಕಾರು,ಬೈಕುಗಳನ್ನು ನಿಲ್ಲಿಸಿದಂತೆ ಅವರು ತಮ್ಮ ಮನೆಗಳ ಮುಂದೆ ವಿಮಾನಗಳನ್ನು ಪಾರ್ಕ್ ಮಾಡುತ್ತಾರೆ.ಇದರಿಂದಾಗಿ ಆ ಪ್ರದೇಶ ನೋಡಲು ವಿಮಾನ ನಿಲ್ದಾಣದಂತೆ ಕಾಣುತ್ತದೆ

Spruce-Creek-Airport-1


Click Here To Download Kannada AP2TG App From PlayStore!

Share this post

scroll to top