ಆ ರಾತ್ರಿ ರೈಲು ಹತ್ತಿದ ಸ್ವಲ್ಪ ಹೊತ್ತಿಗೆ.ಋತುಸ್ರಾವ.ಹೊಟ್ಟೆಯಲ್ಲಿ ನೋವು, ಕಿರಿಕಿರಿ, ಹಿಂಸೆ.ಏನು ಮಾಡಬೇಕು ಎಂದು ಸ್ವಲ್ಪ ಹೊತ್ತು ಅರ್ಥವಾಗಲಿಲ್ಲ… ಏಕಾಏಕಿ ಕೇಂದ್ರ ಸಚಿವರಿಗೆ ಟ್ವೀಟ್ ಮಾಡಿದ… ಬಳಿಕ..? ನೀವೇ ಓದಿ…

ರೈಲು ಪ್ರಯಾಣ.ಆಕಸ್ಮಿಕವಾಗಿ ತಲೆನೋವು.ಅಥವಾ ವಾಂತಿ.ಅಥವಾ ಹೊಟ್ಟೆನೋವು.ಇನ್ನೇನೋ ಅರ್ಜೆನ್ಸಿ, ತೊಂದರೆ.ಆದಾಗ ಕೂಡಲೆ ಒಂದು ಮಾತ್ರೆ ಹೊಟ್ಟೆಗೆ ಹೋಗದ ಹೊರತು ರಿಲೀಫ್ ಆಗಲ್ಲ.ಆದರೆ ಹೇಗೆ.? ಸಿಗುವುದು ಎಲ್ಲಿ.? ಅಥವಾ ಅರ್ಜೆಂಟ್ ಆಗಿ ಒಬ್ಬ ವೈದ್ಯರ ಅಗತ್ಯ ಬಿದ್ದರೆ.? ಎಂದಾದರೂ ಆಲೋಚಿಸಿದ್ದೀರಾ? ಒಂದು ಸಲ ನಿಮಗೆ ಗೊತ್ತಿರುವ ರೈಲ್ವೆ ಸ್ಟೇಷನ್‍, ಆ ಪರಿಸರವನ್ನು ಊಹೆ ಮಾಡಿಕೊಂಡು ಆಲೋಚಿಸಿ.ಅಷ್ಟರಲ್ಲಿ ಒಂದು ಸಣ್ಣ ಕಥೆ ಓದಿಕೊಳ್ಳೋಣ.ಇತ್ತೀಚಿನದೇ.ಕಲಬುರಗಿ ಮೂಲದ ವಿಶಾಲ್ ಖಾನಾಪುರ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ.ಮೊನ್ನೆ ಸೋಮವಾರ ಬೆಂಗಳೂರು-ಬಳ್ಳಾರಿ-ಹೊಸಪೇಟೆ ರೈಲು ಹತ್ತಿದ.ಅದು ಬೆಂಗಳೂರಿನಲ್ಲಿ ರಾತ್ರಿ 10.15ಕ್ಕೆ ಹೊರಟು ಬೆಳಗ್ಗೆ 9.40ಕ್ಕೆ ಬಳ್ಳಾರಿ ತಲುಪುತ್ತದೆ.ಅವನೊಂದಿಗೆ ಆರ್ಕಿಟೆಕ್ಚರ್ ಓದುತ್ತಿರುವ ತನ್ನ ಗೆಳತಿ ಸಹ ಇದ್ದಳು.

 

ರೈಲು ಹತ್ತಿದ ಸ್ವಲ್ಪ ಹೊತ್ತಿಗೆ ಋತುಸ್ರಾವ.ನಿಜವಾಗಿ ಆಕೆ ಎಕ್ಸ್‌ಪೆಕ್ಟ್ ಮಾಡಿರಲಿಲ್ಲ.ಅದಕ್ಕಾಗಿ ಸಿದ್ಧವೂ ಆಗಿರಲಿಲ್ಲ.ಹೊಟ್ಟೆಯಲ್ಲಿ ನೋವು, ತೊಂದರೆ, ಕಿರಿಕಿರಿ. ಗೆಳತಿಯ ಸಂಕಟ, ಅವಸ್ಥೆಯನ್ನು ನೋಡುತ್ತಿದ್ದ ಅವನಿಗೆ ಏನು ಮಾಡಬೇಕೋ ಸ್ವಲ್ಪ ಹೊತ್ತು ದಿಕ್ಕೇ ತೋಚದಂತಾಗಿತ್ತು. ಕಾಲ ಬದಲಾಗುತ್ತಿದೆ ಅಲ್ಲವೇ.ಇನ್ನೂ ಮೈಲಿಗೆ ಹೆಸರಲ್ಲಿ ಊರಿನ ಹೊರಗೆ ಗುಡಿಸಿಲಿನಲ್ಲಿ ಇಡುವವರು ಇನ್ನೂ ಇದ್ದರೂ ಸರಿ, ಇದರ ಬಗ್ಗೆ ಮಾತನಾಡಲು ನಾಚಿಕೊಳ್ಳುವ ವ್ಯಕ್ತಿಗಳು ಕೋಟ್ಯಂತರ ಇದ್ದರೂ ಸರಿ, ಇನ್ನೊಂದು ಕಡೆ ಪೀರಿಯಡ್ಸನ್ನು ಸಾಮಾನ್ಯ ಬಯಾಲಜಿಕಲ್ ಪ್ರಾಸೆಸ್ ಎಂದು ಭಾವಿಸುತ್ತಾ, ಸ್ವತಂತ್ರವಾಗಿ ಮಾತನಾಡುವ, ಆರೋಗ್ಯದ ಬಗ್ಗೆ ಕಾಳಜಿಯನ್ನು ಪಾಲಿಸುವ ಧೋರಣೆ ವೇಗವಾಗಿ ಬೆಳೆಯುತ್ತಿದೆ. ಗುಡ್.ಸರಿ. ಕಥೆಗೆ ಬಂದರೆ.ವಿಶಾಲ್ ಎಷ್ಟೇ ಆಲೋಚಿಸಿದರೂ ಏನೂ ಹೊಳೆಯಲಿಲ್ಲ.ಆ ರಾತ್ರಿ ಎಲ್ಲೂ ಏನೂ ಸಿಗಲ್ಲ.ಸೋ ಏಕಾಏಕಿ ರೈಲ್ವೆ ಸಚಿವರಿಗೆ ನೇರವಾಗಿ ಟ್ವೀಟ್ ಮಾಡಿದ.ಏನೆಂದು.?

ರಾತ್ರಿ 11.07 ಗಂಟೆಗೆ.ಒಬ್ಬ ರೈಲು ಪ್ರಯಾಣಿಕ ತನ್ನ ಗೆಳತಿಗೆ ಪ್ಯಾಡ್ಸ್ ಬೇಕೆಂದು ನೇರವಾಗಿ ಕೇಂದ್ರ ಸಚಿವರಿಗೆ ಟ್ವೀಟ್ ಮಾಡಿದ.ವಾರೆವ್ಹಾ. ಬಳಿಕ ಏನಾಯಿತು.? ಭಾರತೀಯ ರೈಲ್ವೆ ಸೇವಾ ಎಂಬ ವಿಭಾಗ ಇದೆಯಲ್ಲವೇ.. ಅವರು ನೇರವಾಗಿ ಸಂಪರ್ಕಕ್ಕೆ ಬಂದರು.. ನಿಜ.ಅಚ್ಚರಿ ಪಡಬೇಡಿ.ರೈಲ್ವೆ ಇಲಾಖೆ ಇಷ್ಟೆಲ್ಲಾ ಪ್ರತಿಕ್ರಿಯೆ ನೀಡುತ್ತಾ ಎಂದು ಚಕಿತರಾಗಬೇಡಿ. ನಿಮ್ಮ ಕಾಂಟ್ಯಾಕ್ಟ್ ಸಂಖ್ಯೆ ಪ್ಲಸ್ ಆ ಪ್ರಯಾಣಿಕಳ ಪಿಎನ್ಆರ್ ಸಂಖ್ಯೆ ನೀಡಿ ಎಂದು ರಿಪ್ಪೈ ಬಂತು.ವಿಶಾಲ್ ಕೂಡ ಚಕಿತನಾದ.. ಅಷ್ಟು ಬೇಗ ಬಂದ ಪ್ರತಿಕ್ರಿಯೆ ನೋಡಿ.. ಸ್ವಲ್ಪ ಹೊತ್ತಿಗೆ ರೈಲ್ವೆ ಉದ್ಯೋಗಿ ಆ ಸೀಟು ಬಳಿಗೆ ಬಂದ, ಫೇಕ್ ಟ್ವೀಟ್ ಅಲ್ಲ, ನಿಜವಾದ ಸಮಸ್ಯೆ ಎಂದು ಕನ್ಪರ್ಮ್ ಮಾಡಿಕೊಂಡು. ಹೊರಟು ಹೋದ.

ನಡುರಾತ್ರಿ ಸರಿದಿತ್ತು.ವಿಶಾಲ್ ತನ್ನಷ್ಟಕ್ಕೆ ತಾನೇ ನಗುತ್ತಿದ್ದ.. ಏನೋ ಸಹಾಯ ಮಾಡುತ್ತಾರೆ ಎಂದುಕೊಂಡರೆ ಪತ್ತೆ ಇಲ್ಲದಂತೆ ಆದರಲ್ಲ.ರಾತ್ರಿ ಎರಡು ಗಂಟೆ.ರೈಲು ಅರಸಿಕೆರೆ ಜಂಕ್ಷನ್ ತಲುಪಿತು.ಅಲ್ಲಿ ಆಕೆಗೆ ಅಗತ್ಯವಾದ ಟ್ಯಾಬ್ಲೆಟ್ ಪ್ಲಸ್ ಪ್ಯಾಡ್ಸ್ ನೀಡಿದರು ರೈಲ್ವೆ ಸಿಬ್ಬಂದಿ.ನಿಜ ಗುರು.ಒಬ್ಬ ರೈಲು ಪ್ರಯಾಣಿಕಳು ಹತ್ತು ಮಂದಿ ಬಳಿ ಹೇಳಿಕೊಳ್ಳಲು ಮುಜುಗರ ಪಡುವ ಆ ಸಮಸ್ಯೆಯನ್ನು ತನ್ನ ಫ್ರೆಂಡ್‌ಗೆ ಹೇಳಿದ್ದು, ಆ ರಾತ್ರಿ ಅವರು ನೇರವಾಗಿ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದ್ದು, ತಕ್ಷಣ ರೈಲ್ವೆ (ಅದೂ ಇಂಡಿಯನ್ ರೈಲ್ವೆ) ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ನಡುರಾತ್ರಿ ದಾಟಿದ ಬಳಿಕ ಆ ಪೇಯಿನ್ ಕಿಲ್ಲರ್ ಟ್ಯಾಬ್ಲೆಟ್‌ಗಳು, ಪ್ಯಾಡ್ಸ್ ಹೊಂದಿಸಿದ್ದು.ಯಾವುದೋ ಸಿನಿಮಾ ತರಹ ಇದೆ ಅನ್ನಿಸುತ್ತಿದೆ ಅಲ್ಲವೇ..? ಆದರೆ ಇದು ನಿಜ.ಈಗ ಹೇಳಿ.ಯಾವುದೋ ಒಂದು ರಾತ್ರಿ ನಿಮಗೂ ಹೀಗೆ ಆದರೆ.ಏನು ಮಾಡುತ್ತೀರಿ.ಎಲ್ಲರೂ ವಿಶಾಲ್ ರೀತಿ ಟ್ವೀಟ್ ಮಾಡಲು ಸಾಧ್ಯವಿಲ್ಲ ಅಲ್ಲವೇ.? ಅದೇ ರೀತಿ ಟ್ವೀಟ್ ಮಾಡಿದ ಮಾತ್ರಕ್ಕೆ ಅವರು ಬರುತ್ತಾರೆ ಎಂಬ ಗ್ಯಾರಂಟಿ ಏನು..? ರೈಲ್ವೆ ಸಚಿವಾಲಯ ಇದಕ್ಕಾಗಿ ಬೇರೆ ಏನು ಮಾಡಬಹುದು.?

 


Click Here To Download Kannada AP2TG App From PlayStore!

Share this post

scroll to top