ಸೋಲಿಸಿದ್ದೀನಿ ಎಂದು ಸಂತಸ ಪಟ್ಟ ವಿಧಿ ಮೇಲೆ ಗೆದ್ದಂತ ಧೀರ.!

ಮೊದಲು ಈತನ ಧೈರ್ಯಕ್ಕೆ ನಾವೆಲ್ಲಾ ತಲೆತಗ್ಗಿಸಿ ನಮಸ್ಕರಿಸಬೇಕು. ಐದು ವರ್ಷದ ವಯಸ್ಸಿನಲ್ಲಿ ಎರಡು ಕಾಲು ಕೈ ಕಳೆದುಕೊಂಡರೂ ಆತ್ಮವಿಶ್ವಾಸವನ್ನು ಮಾತ್ರ ಕಳೆದುಕೊಳ್ಳಲಿಲ್ಲ. ಅದೆಷ್ಟೋ ಕಷ್ಟಪಟ್ಟು ಸರಕಾರಿ ಕೆಲಸ ಸಂಪಾದಿಸಿದ. ಕುಟುಂಬಕ್ಕೆ ಭಾರ ಎಂದುಕೊಂಡ ಆತನೇ ಈಗ ಕುಟುಂಬಕ್ಕೆ ಆಸರೆಯಾದ. ಪ್ರತಾಪ್ ಜೀವನ ಕುರಿತು ಕೇಳಿದರೆ ನಿಜಕ್ಕೂ ಆತನ ಸ್ಥೈರ್ಯವನ್ನು, ಧೈರ್ಯವನ್ನು ಮೆಚ್ಚಿಕೊಳ್ಳದೆ ಇರಲು ಆಗಲ್ಲ.

ತಮಾಷೆಗೆ ಗೆಳೆಯರ ಬಳಿ ಮಾಡ್ದಿದ ಚಾಲೆಂಜ್.. ಆತನನ್ನು ಅಂಗವಿಕಲನನ್ನಾಗಿ ಮಾಡಿತು:
ಐರನ್ ರಾಡನ್ನು ಬಗ್ಗಿಸಬೇಕು ಎಂದು ಸ್ನೇಹಿತರು ಬೆಟ್ ಕಟ್ಟಿದರು. ಪ್ರತಾಪ್ ಓಕೆ ಎಂದೇಳಿ ಅದನ್ನು ಬಗ್ಗಿಸುವ ಪ್ರಯತ್ನ ಮಾಡಿದ, ಶಾರ್ಟ್ ಸರ್ಕ್ಯೂಟ್ ಆಗಿ…ಎರಡು ಕೈಗಳು, ಎರಡು ಕಾಲುಗಳು ಸಂಪೂರ್ಣ ಸುಟ್ಟುಹೋದವು. ಆಸ್ಪತ್ರೆಗೆ ತೆಗೆದುಕೊಂಡು ಹೋದರೆ ಅವನ್ನು ತೆಗೆದುಹಾಕಿದರು. ಆಗಿನಿಂದ ಮನೆಯಲ್ಲೇ ಉಳಿದುಹೋದ.

ತಂಗಿಯರ ಪುಸ್ತಕಗಳನ್ನು ಓದುತ್ತಾ….
ಪ್ರತಾಪ್‌ಗೆ ಮೂವರು ತಂಗಿಯರು..ಪ್ರತಿದಿನ ಮನೆಯ ಬಳಿಯೇ ಇರುವ ಪ್ರತಾಪ್…ತಂಗಿಯರ ಪುಸ್ತಕ ಓದುತ್ತಿದ್ದ. ಪುಸ್ತಕದಲ್ಲಿದ್ದ ಪ್ರತಿಯೊಂದನ್ನೂ ಮನನ ಮಾಡಿಕೊಳ್ಳುತ್ತಿದ್ದ. ಚಿಕ್ಕಂದಿನಿಂದ ಹೀಗೇ ಓದಿದ.

ಮೊಳಕಾಲ ಮೇಲೆ ನಡಿಗೆ, ಮೊಳಕೈಯಲ್ಲಿ ಟೈಪಿಂಗ್:
ಎರಡು ಕೈಗಳು, ಕಾಲುಗಳನ್ನು ಸಂಪೂರ್ಣವಾಗಿ ಕಳೆದುಕೊಂಡ ಕಾರಣ..ಪ್ರತಿಯೊಂದಕ್ಕೂ ಬೇರೆಯವರ ಮೇಲೆ ಆಧಾರ ಪಡಬೇಕಾಗಿತ್ತು. ಹೀಗೆ ಇದ್ದರೆ ಆಗಲ್ಲ ಎಂದು ಮೊಳಕಾಲಿನ ಮೇಲೆ ನಡೆಯಲು ಪ್ರಾರಂಭಿಸಿದ, ವಿಪರೀತ ನೋವನ್ನು ಭರಿಸಿ ನಿಧಾನಕ್ಕೆ ನಡೆಯುವುದನ್ನು ಅಭ್ಯಾಸ ಮಾಡಿಕೊಂಡ ಪ್ರತಾಪ್.ಬೆರಳುಗಳು ಸರಿಯಾಗಿ ಇದ್ದರೂ ಕಂಪ್ಯೂಟರ್ ಕೀ ಬೋರ್ಡ್ ಮೇಲೆ ಕೆಲಸ ಮಾಡುವುದು ಕಷ್ಟ. ಆ ರೀತಿಯ ಪ್ರತಾಪ್ ಮೊಳಕೈಯಲ್ಲಿ ಕೀಬೋರ್ಡನ್ನು ಚಕಚಕ ಎಂದು ಟೈಪಿಸುತ್ತಾನೆ. ..ಇದರ ಹಿಂದೆ ಆತನ ಕಠೋರ ಶ್ರಮ ಅಡಗಿದೆ.

ಓದು:
ಕಾಲುಗಳು ಸಹಕರಿಸದೆ ಇದ್ದ ಕಾರಣ…ವಿದ್ಯಾಭ್ಯಾಸವೆಲ್ಲಾ ಮನೆಯ ಬಳಿಯೇ ನಡೆಯಿತು. ಪಿಯುಸಿ ಪಾಸ್ ಆದ ಮೇಲೆ, ಬಿಕಾಂ ಮಾಡಿದ, I-CET ನಲ್ಲಿ ರ‍್ಯಾಂಕ್ ಸಂಪಾದಿಸಿ ಉಸ್ಮಾನಿಯಾ ಯೂನಿವರ್ಸಿಟಿಯಲ್ಲಿ MBAಗೆ ಸೇರಿದ, ಅಲ್ಲಿಯವರೆಗೂ ಹೊರಗೆ ಹೋಗದ ಪ್ರತಾಪ್..ತನಗಾಗಿ ವಿಶೇಷವಾಗಿ ತಯಾರಿಸಿದ ಚಪ್ಪಲಿ ಸಹಾಯದೊಂದಿಗೆ ಹೊರಗಡೆ ಹೋಗಲು ಆರಂಭಿಸಿದ. ಹೊಸ ಹೊಸ ವಿಷಯಗಳನ್ನು ಉಸ್ಮಾನಿಯಾದಲ್ಲೇ ಕಲಿತುಕೊಂಡ.

ಸಂದರ್ಶನಗಳು:
MBA ಬಳಿಕ ಪ್ರತಾಪ್ ಬಹಳಷ್ಟು ಸಂದರ್ಶನಗಳಿಗೆ ಹಾಜರಾದ, ಆದರೆ ಬಹಳಷ್ಟು ಸಂದರ್ಶನ ಮಂಡಳಿಗಳು ಉದ್ಯೋಗದಲ್ಲಿ ಸೇರಿಸಿಕೊಳ್ಳಲು ಇಷ್ಟಪಡಲಿಲ್ಲ. ಈತ ಸರಿಯಾಗಿ ಉದ್ಯೋಗ ಮಾಡುತ್ತಾನಾ? ಎಂದು ತಮ್ಮಲ್ಲೇ ಅಂದುಕೊಂಡು ಈಗನಿಗೆ ಉದ್ಯೋಗ ಕೊಡಲಿಲ್ಲ. ಕಡೆಗೆ ಈತನ ಪ್ರತಿಭೆ, ಧೈರ್ಯವನ್ನು ಮೆಚ್ಚಿ ONGC ಕಂಪೆನಿ ಸ್ಟಾಟಿಸ್ಟಿಕಲ್ ಆಫೀಸರ್ ಉದ್ಯೋಗವನ್ನು ಕೊಟ್ಟಿದೆ.

ತಂದೆತಾಯಿ:
ಕುಟುಂಬಕ್ಕೆ ಭಾರ ಎಂದುಕೊಂಡವನೇ…ಈಗ ಕುಟುಂಬಕ್ಕೆ ಆಧಾರವಾಗಿ ನಿಂತುಕೊಂಡ ಕಾರಣ ಅವರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ


Click Here To Download Kannada AP2TG App From PlayStore!

Share this post

scroll to top