ಎಲ್ಲರೂ ನನ್ನನ್ನು ಅಳಿಸುತ್ತಿದ್ದಾರೆ ಎಂದು ಮಗಳು ಅಂದಿದ್ದಕ್ಕೆ… ಒಳಗೆ ಹೋಗಿ ನೀರು ಬಿಸಿ ಮಾಡು ಎಂದಳು ತಾಯಿ..! ಯಾಕೆಂದರೆ.?

ಒಂದು ದಿನ ಕಾಲೇಜಿನಿಂದ ಮನೆಗೆ ಬಂದ ಕೂಡಲೆ ತಾಯಿ ಬಳಿಗೆ ಹೋದಳು ಮಗಳು. ನಿತ್ಯ ನನ್ನನ್ನು ಬಹಳಷ್ಟು ಮಂದಿ ಅಳಿಸುತ್ತಿದ್ದಾರೆ, ನಾನು ತುಂಬ ಒಳ್ಳೆಯವಳು ಎಂಬ ಕಾರಣಕ್ಕೆ ಸ್ನೇಹಿತರು ಸಹ ಆಟ ಆಡಿಸುತ್ತಿದ್ದಾರೆ ಎಂದು ನೋವಿನಿಂದ ಹೇಳಿಕೊಂಡಳು. ಅಡುಗೆ ಮನೆಗೆ ಹೋಗಿ ಒಂದು ಬಟ್ಟಲಲ್ಲಿ ನೀರು ಬಿಸಿ ಮಾಡಿ ಕಾಫಿ ಬೀಜ ಹಾಕು, ಇನ್ನೊಂದು ಬಟ್ಟಲಲ್ಲಿ ಆಲುಗಡ್ಡೆ ಬೇಯಿಸು, ಮತ್ತೊಂದು ಬಟ್ಟಲಲ್ಲಿ ಕೋಳಿಮೊಟ್ಟೆ ಬೇಯಿಸು ಎಂದು ಹೇಳಿದಳು. ಅಮ್ಮ ಯಾಕೆ ಹಾಗೆ ಹೇಳುತ್ತಿದ್ದಾಳೆ? ಎಂದುಕೊಂಡು ದುಃಖಿಸುತ್ತಲೇ ನಿನಗೆ ಎಲ್ಲಾ ತಮಾಷೆಯಾಗಿದೆಯಾ? ಬೇಯಿಸು ಅಂತಿದ್ದೀಯಾ..! ಆಗ ಆ ತಾಯಿ ಮಗಳಿಗೆ ಒಂದು ಕಥೆ ಹೇಳಿದಳು..!

ಇದು… ಒಂದು ಆಲೂಗಡ್ಡೆ, ಕೋಳಿಮೊಟ್ಟೆ, ಕಾಫಿಬೀಜದ ಕಥೆ.

ಒಂದಾನೊಂದು ಕಾಲದಲ್ಲಿ ಒಬ್ಬ ತಾತ… ಆತನ ಬಳಿ ಒಂದು ಮಾಯಾ ಮಡಿಕೆ ಇತ್ತು. ಅದರಲ್ಲಿ ನೀರು ಹಾಕಿದ ಕೂಡಲೆ.. ಕುದಿಯುತ್ತಿತ್ತು..! ಒಂದು ದಿನ ಮೂವರು ವ್ಯಕ್ತಿಗಳು ಅವರ ಮನೆಗೆ ಬಂದರು.

 • ಮೊದಲ ವ್ಯಕ್ತಿ ತನ್ನ ಕೈಯಲ್ಲಿ ಒಂದು ಆಲೂಗಡ್ಡೆ ತೆಗೆದುಕೊಂಡು… ಇದು ತಿನ್ನಲು ಕಷ್ಟಕರವಾಗಿದೆ ಎಂದ.
 • ಎರಡನೇ ವ್ಯಕ್ತಿ ತನ್ನ ಕೈಯಲ್ಲಿನ ಮೊಟ್ಟೆಯನ್ನು ತೋರಿಸಿ.. ಇದು ತಿನ್ನಲು ತುಂಬಾ ಈಸಿಯಾಗಿದೆ ಎಂದ.
 • ಅಷ್ಟರಲ್ಲಿ ಮೂರನೇ ವ್ಯಕ್ತಿ ತನ್ನ ಕೈಯಲ್ಲಿನ ಕಾಫಿ ಬೀಜಗಳನ್ನು ತೋರಿಸಿ..ಇದು ತಿನ್ನಲು ಸರಿಹೋಗಲ್ಲ ಎಂದ.

ಆಗ ಆ ತಾತ ನೀವು ಮೂವರು ತಂದ ಪದಾರ್ಥಗಳನ್ನು ಈ ಕುದಿಯುತ್ತಿರುವ ನೀರಿನಲ್ಲಿ ಹಾಕಿ ಎಂದ… ಅವರು ಅದೇ ರೀತಿ ಮಾಡುತ್ತಾರೆ.

 • ಗಟ್ಟಿಯಾಗಿ ಮುರಿಯಲು ಆಗದ ಆಲೂಗಡ್ಡೆ.. ಆ ಕುದಿಯುತ್ತಿರುವ ನೀರಿನಲ್ಲಿ ಬೆಂದ ಬಳಿಕ ಮೃದುವಾಗಿ ಹತ್ತಿಯಂತೆ ಬದಲಾಯಿತು.
 • ಹಸಿಯಾಗಿ ಇದ್ದಾಗ… ಗಟ್ಟಿಯಾಗಿ ಒತ್ತಿದರೆ ಹೊಡೆಯುವ ಕೋಳಿ ಮೊಟ್ಟೆ… ಕುದಿಯುತ್ತಿರುವ ನೀರಿನಲ್ಲಿ ಬೆಂದ ಬಳಿಕ ಗಟ್ಟಿಯಾಗಿ ಬದಲಾಯಿತು.
 • ಈಗ ಕಾಫಿ ಬೀಜಗಳಾದರೆ… ಕುದಿಯುವ ನೀರಿನಲ್ಲಿ ತಮ್ಮ ಆಕೃತಿಯನ್ನು ಸಂಪೂರ್ಣ ಬದಲಾಯಿಸಿಕೊಂಡು ಕಾಫಿಯಾಗಿ ಬದಲಾದವು.

ಈಗ ಇವೆಲ್ಲಾ… ನಮ್ಮ ಜೀವನವನ್ನು ತುಂಬಾ ಕ್ಲಿಯರ್ ಆಗಿ ತೋರಿಸುತ್ತವೆ ಎಂಬುದನ್ನು ಒಂದು ಸಲ ನೋಡಿ:

 • ಮಡಿಕೆ ನಮ್ಮ ಜೀವನವನ್ನು ಪ್ರತಿಬಿಂಬಿಸುತ್ತದೆ.
 • ಮಡಿಕೆಯಲ್ಲಿ ಕುದಿಯುತ್ತಿರುವ ನೀರು ನಮ್ಮ ಕಷ್ಟಗಳನ್ನು ಸೂಚಿಸುತ್ತದೆ. ಪ್ರತಿ ಮನುಷ್ಯನ ಜೀವನಲ್ಲಿ ಯಾವಾಗಲೋ ಒಂದು ಸಲ ಕಷ್ಟಗಳು ಎದುರಾಗುತ್ತವೆ.

ಆಲೂಗಡ್ಡೆ, ಕೋಳಿಮೊಟ್ಟೆ, ಕಾಫಿ ಬೀಜಗಳು.. ಮನುಷ್ಯರಲ್ಲಿನ ವಿಧಗಳು. ಅವುಗಳಂತೆ ಮನುಷ್ಯರು ತಮ್ಮ ತಮ್ಮ ಕಷ್ಟಗಳಿಗೆ ಒಂದೊಂದು ವಿಧವಾಗಿ ಪ್ರತಿಕ್ರಿಯಿಸುತ್ತಿರುತ್ತಾರೆ.

 • ಬೇಯದ ಆಲೂಗಡ್ಡೆಯಂತೆ ಗಟ್ಟಿಯಾಗಿ ಇರುವ ಮನುಷ್ಯರು.. ಕಷ್ಟಗಳು ಬಂದ ಕೂಡಲೆ ನೀರಿನಲ್ಲಿ ಬೆಂದ ಆಲೂಗಡ್ಡೆಯಂತೆ ಮೆತ್ತಗಾಗುತ್ತಾರೆ.
 • ಕೆಲವರಾದರೆ ಕಷ್ಟಗಳು ಬಂದ ಮೇಲೆ… ಬೆಂದ ಮೊಟ್ಟೆಯಂತೆ ಗಟ್ಟಿಯಾಗುತ್ತಾರೆ.. ಧೈರ್ಯವಾಗಿ ಕಷ್ಟಗಳನ್ನು ಎದುರಿಸುತ್ತಾರೆ.
 • ಕೆಲವರಾದರೆ ಪರಿಸ್ಥಿತಿಗಳಿಗೆ ತಕ್ಕಂತೆ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾರೆ.. ಹೇಗೆ ಕಾಫಿ ಬೀಜಗಳು ನೀರಿನಲ್ಲಿ ಬೆರೆತವೋ ಆ ರೀತಿ..!

ಈಗ ಹೇಳಿ ಇದರಲ್ಲಿ ನೀವು ಆಲೂಗಡ್ಡೆಯಾ? ಕೋಳಿಮೊಟ್ಟೆನಾ? ಅಥವಾ ಕಾಫಿ ಬೀಜಗಳಾ…?


Click Here To Download Kannada AP2TG App From PlayStore!