ಈ ಕೋಳಿಯ ಮೊಟ್ಟೆಯೊಂದಕ್ಕೆ ₹ 45/-, ಒಂದು ಕೆ‌.ಜಿ. ಮಾಂಸ ₹ 900/-… ಅದರಲ್ಲಿ ಅಂತಹ ಸ್ಪೆಷಲ್ ಏನಿದೆ ಎಂದು ತಿಳಿದರೆ ಆಶ್ಚರ್ಯ ಪಡುತ್ತೀರಾ…!


ಈ ಕೋಳಿಯ ಮಾಂಸ ಕೆ.ಜಿಗೆ 900 ರೂಪಾಯಿ, ಈ ಕೋಳಿಯ ಮೊಟ್ಟೆ ಒಂದಕ್ಕೆ 45 ರೂಪಾಯಿ, ಆಗತಾನೇ ಹುಟ್ಟಿದ ಕೋಳಿ ಮರಿಯ ಬೆಲೆ 150 ರೂಪಾಯಿ… ಒಂದು ಕೋಳಿಗೆ ಇಷ್ಟು ಬೆಲೆ ಯಾಕೆ… ಎಂದು ನಿಮಗೆ ಡೌಟ್ ಬರಬಹುದು. ಈ ಕೋಳಿ ಭಾರತದಲ್ಲೇ ಅತ್ಯಂತ ಬೇಡಿಕೆ ಇರುವ ಕೋಳಿ. ಮಧ್ಯಪ್ರದೇಶ ರಾಜ್ಯದಲ್ಲಿ ಸಿಗುವ ಈ ಕೋಳಿಯು ಕಡಕ್’ನಾಥ ಜಾತಿಗೆ ಸೇರಿದ್ದು… ಎಷ್ಟೋ ಕಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿ ಈ ಕೋಳಿ ಮಾಂಸಕ್ಕಿರುವುದು ವಿಶೇಷ. ಇದರ ರೆಕ್ಕೆಗಳಿಂದ ಹಿಡಿದು ಮಾಂಸ, ಮೊಟ್ಟೆ ವರೆಗೂ ಎಲ್ಲಾ ಕಪ್ಪು ಬಣ್ಣದಲ್ಲಿರುವ ಈ ಕೋಳಿ ಪೋಷಕಾಂಶಗಳ ಗಣಿ ಎಂದು ಹೇಳಬಹುದು.

ಈ ಕೋಳಿಯ ವಿಶೇಷತೆಗಳು:

  • ಇದರ ಮಾಂಸವನ್ನು ತಿನ್ನುವುದರಿಂದ ಜೀರ್ಣಶಕ್ತಿ, ರೋಗ ನಿರೋಧಕ ಶಕ್ತಿಗಳು ಹೆಚ್ಚುತ್ತವೆ.
  • ಕಡಕ್’ನಾಥ್ ಜಾತಿಯ ಕೋಳಿಗಳ ಮಾಂಸದಲ್ಲಿ ಕೊಬ್ಬಿನಾಂಶ ತುಂಬಾ ಕಡಿಮೆಯಿದ್ದು, ಪ್ರೋಟೀನ್ ಅಂಶ ಹೆಚ್ಚಿರುತ್ತವೆ.
  • ಔಷಧೀಯ ಗುಣಗಳು ಅಧಿಕವಾಗಿರುವುದರಿಂದ, ಮೆಡಿಸಿನ್ಸ್’ನಲ್ಲಿ ಈ ಕೋಳಿ ಮಾಂಸವನ್ನು ಬಳಸಲಾಗುತ್ತದೆ.
  • ಏಳು ತಿಂಗಳಲ್ಲಿ 1.5 ಕೆಜಿಯ ತೂಕ ಮಾತ್ರ ಬರುತ್ತದೆ.
  • ಕ್ರೀಡಾಪಟುಗಳಿಗೆ ಕೊಡುವ ಫುಡ್’ನಲ್ಲಿ ಇದನ್ನು ಸೇರಿಸಬೇಕು ಎಂಬ ಬೇಡಿಕೆ ಸಹ ಇದೆ.
  • ಈ ಕೋಳಿ ಇಡುವ ಮೊಟ್ಟೆ, ಮಾಂಸ ಸಹ ಪೂರ್ತಿ ಕಪ್ಪು ಬಣ್ಣದಲ್ಲಿರುವುದು ವಿಶೇಷ.
  • ಕಡಕ್’ನಾಥ್ ಕೋಳಿಗಳನ್ನು ಮಧ್ಯಪ್ರದೇಶದ ಕಾಲಿ-ಮಾಸಿ(ಕಪ್ಪುಬಣ್ಣದ ಮಾಂಸ ಹೊಂದಿರುವುದು) ಎಂದು ಕರೆಯುತ್ತಾರೆ.

#Kadaknath Chicken Biryani:

#kadaknath  Live chickens

#kadaknath  Eggs

ARKive image GES061451 – Emu

#Kadaknath Chicken


Click Here To Download Kannada AP2TG App From PlayStore!