ಆ ಒಂಬತ್ತು ಕಡೆ ಕಲಿ ಪುರುಷನಿರುತ್ತಾನೆ… ಅವುಗಳ ಮೇಲೆ ಆಸೆಪಟ್ಟರೆ ನಿಮ್ಮ ಜೀವನವನ್ನು ಕಲಿ ನಾಶ ಮಾಡುತ್ತಾನೆ.!

ಸದ್ಯಕ್ಕೆ ನಡೆಯುತ್ತಿರುವುದು ಕಲಿಯುಗ. ಬಹಳಷ್ಟು ಮಂದಿ ದ್ವೇಷ, ಅಸೂಯೆ, ಲಂಚಗುಳಿತನ, ದುರಭ್ಯಾಸಗಳು ಹೊಂದಿರುತ್ತಾರೆ. ಇವರೇ ಒಳ್ಳೆಯವರಂತೆ, ದೊಡ್ಡವರಂತೆ ಹೆಸರು ಮಾಡುತ್ತಾರೆ. ನಂಬಿಕೆಯಿಂದ ಇದ್ದು, ಇದ್ದದ್ದನ್ನು ಇದ್ದಂತೆ ಹೇಳುವವರು, ಮಾಡುವವರು ಈ ಸಮಾಜದಲ್ಲಿ ಬಹಳಷ್ಟು ಕಡಿಮೆ. ಅಂತಹವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದರೆ ಅಂತಹವರಿಗೆ ಸಮಾಜದಲ್ಲಿ ಮನ್ನಣೆ ಇರಲ್ಲ. ಇವರನ್ನು ಕೆಲವರು ತುಳಿಯುತ್ತಾರೆ. ಆದರೆ ಎಂದಿಗಾದರೂ ಪ್ರಾಮಾಣಿಕತೆಗೇ ಅಲ್ಲವೇ ಬೆಲೆ ಇರುವುದು. ಆದಕಾರಣ ಕೆಟ್ಟ ಅಭ್ಯಾಸಗಳನ್ನು ಹೊಂದಿರುವವರು, ಸಮಾಜವಿದ್ರೋಹಿ ಕೆಲಸಗಳನ್ನು ಮಾಡುವವರು ಒಂದಲ್ಲ ಒಂದು ದಿನ ಭೀಕರವಾಗಿ ಸಾಯುತ್ತಾರೆ. ಈಗ ಕಲಿಯುಗದಲ್ಲಿ ಕಲಿ ಪ್ರಭಾವ ಯಾವಾಗ ಆರಂಭವಾಯಿತು, ಕಲಿ ಎಲ್ಲಿರುತ್ತಾನೆ, ಹೇಗೆ ನಮ್ಮನ್ನು ನಾಶ ಮಾಡುತ್ತಾನೆ ಎಂಬುದನ್ನು ಈಗ ತಿಳಿದುಕೊಳ್ಳೋಣ.

ದ್ವಾಪರಯುಗಾಂತ್ಯ ಕಾಲದಲ್ಲಿ ಅಣ್ಣತಂಗಿಗೆ ಹುಟ್ಟಿದವನೇ ಕಲಿ ಪುರುಷ. ದ್ವಾಪರ ಯುಗ ಅಂತ್ಯವಾಗಿ ಕಲಿ ಪ್ರವೇಶಿಸಿ, ಕಲಿಯುಗಂ ಆರಂಭವಾಗುತ್ತಿರುವ ಹಂತದಲ್ಲಿ ಪರೀಕ್ಷಿತ್ ಎಂಬ ಹೆಸರಿನ ಮಹಾರಾಜು ಧರ್ಮದ ಪ್ರಕಾರ ಪರಿಪಾಲಿಸುತ್ತಿರುತ್ತಾನೆ. ಈ ಹಿನ್ನೆಲೆಯಲ್ಲಿ ಒಂದು ದಿನ ಪರೀಕ್ಷಿತ್ ಮಹಾರಾಜನಿಗೆ ಗೋಮಾತೆ ಅಳು ಕೇಳಿಸುತ್ತದೆ. ಅದರ ಬಳಿಗೆ ಹೋಗಿ ನೋಡಿದರೆ ಆ ಹಸುವಿಗೆ ಒಂದು ಕಾಲು ಇರಲ್ಲ. ಯಾಕೆ ಹೀಗಾಯಿತು, ಯಾರು ಕಾಲನ್ನು ಕಡಿದರು ಎಂದು ಪರೀಕ್ಷಿತ್ ಕೇಳುತ್ತಾರೆ. ಅದಕ್ಕೆ ಆ ಹಸು, ತನ್ನ ಕಾಲನ್ನು ಕಲಿ ತೆಗೆದ ಎಂದು ಹೇಳುತ್ತದೆ. ಇದರಿಂದ ಕೋಪಗೊಂಡ ಪರೀಕ್ಷಿತ್ ಕಲಿಯನ್ನು ಹಿಡಿದು ಬಂಧಿಸುತ್ತಾನೆ. ಆತನಿಗೆ ಚಿತ್ರಹಿಂಸೆ ನೀಡುತ್ತಾನೆ.

ಆದರೆ ಪರೀಕ್ಷಿತ್ ಮಹಾರಾಜ ಮಾಡುತ್ತಿರುವ ಹಿಂಸೆಯನ್ನು ತಾಳಲಾರದೆ ಕಲಿ ತನ್ನನ್ನು ಯಾಕೆ ಆ ರೀತಿ ಹೊಡೆಯುತ್ತಿದ್ದೀಯ ಎಂದು ಕೇಳುತ್ತಾನೆ. ಅದಕ್ಕೆ ತಾನು ನೋಡಿದ್ದನ್ನು ಪರೀಕ್ಷಿತ್‌ಗೆ ಹೇಳುತ್ತಾನೆ. ಆಗ ಕಲಿ ಇದು ಕಲಿಯುಗ ಆದಕಾರಣ ತಾನು ಪ್ರವೇಶಿಸಿದ್ದೇನೆಂದು ತಾನು ಏನು ಬೇಕಾದರೂ ಮಾಡುತ್ತೇನೆ ಎನ್ನುತ್ತಾನೆ. ಆದರೆ ಅದಕ್ಕೆ ಪರೀಕ್ಷಿತ್ ಒಪ್ಪಿಕೊಳ್ಳಲ್ಲ. ಆಗ ಕಲಿ ತಾನಿರುವ ಜಾಗಕ್ಕೆ ಜನರನ್ನು ಕಳುಹಿಸಬೇಡ ಎಂದು ಕೋರುತ್ತಾನೆ. ಅದಕ್ಕೆ ಪರೀಕ್ಷಿತ್ ಒಪ್ಪಿಕೊಳ್ಳುತ್ತಾನೆ. ಹಾಗಾಗಿ ಕಲಿ ಜೂಜು ಅಡ್ಡೆ, ಮದ್ಯಪಾನ, ವ್ಯಭಿಚಾರ, ಜೀವಹಿಂಸೆ ನೀಡುವ ಕಡೆ ಇರುತ್ತಾನೆ. ಅದರ ಭಾಗವಾಗಿ ಜೂಜಿನ ಕಡೆಯಿಂದ ಬರುವ ಅಸತ್ಯ, ಮದ್ಯಪಾನದಿಂದ ಬರುವ ಮದ, ಅಹಂಕಾರದಿಂದ ಬರುವ ಕಾಮ, ಹಿಂಸೆಯಿಂದ ಬರುವ ಕೋಪ, ಕ್ರೌರ್ಯದಲ್ಲೂ ಕಲಿ ಇರುತ್ತಾನೆ. ಇದರ ಜತೆಗೆ ನಿಧಾನಕ್ಕೆ ಬಂಗಾರದಲ್ಲೂ ಕಲಿ ಸ್ಥಾನ ಆಕ್ರಮಿಸುತ್ತಾನೆ. ಅದರಿಂದ ಹುಟ್ಟುವ ಮಾತ್ಸರ್ಯದಲ್ಲೂ ಸಹ ಕಲಿ ಸೇರುತ್ತಾನೆ. ಕಲಿ ಒಟ್ಟು 9 ಸ್ಥಾನಗಳನ್ನು ಆಕ್ರಮಿಸುತ್ತಾನೆ. ಈ 9 ಸ್ಥಾನಗಳಲ್ಲಿ ಇರುವವರನ್ನು ಕಲಿ ಕಾಡುತ್ತಾನೆ. ಆದರೆ ಪರೀಕ್ಷಿತ್ ಮಹಾರಾಜು ಸಹ ಕಲಿ ಪ್ರಭಾವದಿಂದ ಮರಣಿಸುತ್ತಾನೆ. ಆತ ಧರಿಸುವ ಚಿನ್ನದ ಆಭರಣಗಳಿಂದ ಮಾತ್ಸರ್ಯ ಪೀಡಿತನಾಗಿ ಮುನಿಯೊಬ್ಬರ ಶಾಪಕ್ಕೆ ಬಿದ್ದು ಹಾವಿನ ಕಡಿತದಿಂದ ಮರಣಿಸುತ್ತಾನೆ. ಅದರಿಂದ ಮೇಲೆ ತಿಳಿಸಿದ ಆ 9 ರಿಂದ ಜನರು ದೂರವಾಗಿ ಇರಬೇಕು ಕಲಿಪ್ರಭಾವ ಇರಲ್ಲ ಎಂದು ಪುರಾಣಗಳು ಹೇಳುತ್ತಿವೆ.


Click Here To Download Kannada AP2TG App From PlayStore!