ಕೆಲಸಮಾಡು.ಫಲವನ್ನು ಆಶಿಸಬೇಡ…ಇದಕ್ಕೊಂದು ಉತ್ತಮ ಉದಾಹರಣೆ.

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ.ಒಮ್ಮೆ ಆ ರಾಜ ತನ್ನ ಬಳಿಯಿದ್ದ ಮೂವರು ಸೇನಾಧಿಕಾರಿಗಳನ್ನು ಕರೆದು, ನೀವೆಲ್ಲರೂ ತೋಟದಲ್ಲಿರುವ ಮರಗಳಿಂದ ಒಳ್ಳೆಯ ಹಣ್ಣುಗಳನ್ನು ಆರಿಸಿ ಒಂದೊಂದು ಚೀಲ ಹಣ್ಣುಗಳನ್ನು ಕಿತ್ತು ತನ್ನಿರಿ ಎಂದು ಅಪ್ಪಣೆ ಮಾಡಿದ. ಅದೇ ರೀತಿ ಮೂರೂ ಜನ ಸೇನಾಧಿಕಾರಿಗಳಿಗೆ ತಲಾ ಒಂದೊಂದು ಚೀಲ ಹಿಡಿದುಕೊಂಡು ತೋಟದೊಳಗೆ ಪ್ರವೇಶಿಸಿದರು.

ಮೊದಲನೇ ಸೇನಾಧಿಕಾರಿ :
ಒಳ್ಳೆ ಗುಣಮಟ್ಟದ ಹಣ್ಣುಗಳನ್ನು ಚೀಲದ ತುಂಬಾ ತುಂಬಿಸಿಕೊಂಡು ಹೋಗುತ್ತೇನೆ.ನನ್ನ ಕೆಲಸವನ್ನು ನೋಡಿ ರಾಜ ಮೆಚ್ಚುಬೇಕು ಎಂದು ಆಲೋಚಿಸುತ್ತಾ,ಪ್ರತೀ ಮರದಲ್ಲಿದ್ದ ಒಳ್ಳೆಯ ಹಣ್ಣುಗಳನ್ನು ಕಿತ್ತು ಮೂಟೆಗೆ ತುಂಬಿಸಿದ.

ಎರಡನೆಯವ :
ನಾನು ಕಿತ್ತುಕೊಂಡು ಹೋಗುವ ಹಣ್ಣುಗಳಲ್ಲಿ, ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ರಾಜ ಪ್ರತಿಯೊಂದು ಹಣ್ಣನ್ನೂ ಪರೀಕ್ಷಿಸಿ ನೋಡಲಾರ ಎಂದು ಭಾವಿಸಿ,ಒಳ್ಳೆಯ ಹಣ್ಣುಗಳು, ಕೊಳೆತ ಹಣ್ಣುಗಳು,ಕಾಯಿಗಳು ಎಂದು ನೋಡದೆ ಕೈಗೆ ಸಿಕ್ಕ ಎಲ್ಲವನ್ನೂ ಕಿತ್ತು ಚೀಲಕ್ಕೆ ತುಂಬಿಸಿದ.

ಮೂರನೆಯವ :
ರಾಜ ತನ್ನ ರಾಜ್ಯವನ್ನು,ಆತನ ಮೂವರು ಹೆಂಡತಿಯರನ್ನು ನೋಡಿಕೊಳ್ಳು ಸಮಯವಿಲ್ಲ. ಆದುದರಿಂದ ನಾನು ತೆಗೆದುಕೊಂಡು ಹೋಗುವ ಹಣ್ಣುಗಳನ್ನು ನೋಡಲು ಸಮಯವಿರುವುದಿಲ್ಲ ಎಂದು ಭಾವಿಸಿ ಚೀಲದ ತುಂಬ ಹುಲ್ಲನ್ನು ತುಂಬಿಸಿದ.


ಮಾರನೆದಿನ ರಾಜ ಆ ಮೂವರು ಸೇನಾಧಿಕಾರಿಗಳನ್ನೂ ಕರೆದು, ಒಳ್ಳೆಯ ಹಣ್ಣುಗಳನ್ನು ತಂದಿರುವಿರಾ ? ಚೀಲದ ತುಂಬಾ ತಂದಿರುವಿರಾ ?ಎಂದು ಕೇಳಿದ. ಅದಕ್ಕೆ ಆ ಮೂವರೂ ಹೌದು ಎಂದು ತಲೆಯಲ್ಲಾಡಿಸಿದರು. ಒಡನೆಯೇ ರಾಜ ಭಟರನ್ನು ಕರೆದು,ಮೂರು ತಿಂಗಳುಗಳ ಕಾಲ ಈ ಮೂವರನ್ನೂ ಕಾರಾಗೃಹದಲ್ಲಿಡಿ ಎಂದು ಅಪ್ಪಣೆ ಹೊರಡಿಸಿದ. ರಾಜ ಹೇಳಿದ ಹಾಗೆ ಭಟರು ಆ ಮೂವರನ್ನೂ ,ಅವರು ತಂದ ಹಣ್ಣಿನ ಚೀಲಗಳೊಂದಿಗೆ ಕಾರಾಗೃಹದಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಇರಿಸಿದರು.ಸಂಜೆಯ ಹೊತ್ತಿಗೆ ಅವರೆಲ್ಲರಿಗೂ ಹಸಿವಾಗತೊಡಗಿತು.ಮೊದಲನೆಯವನು ತಾನು ತಂದ ಹಣ್ಣುಗಳಲ್ಲಿ ಪಕ್ವವಾದ ಹಣ್ಣುಗಳನ್ನು ತಿನ್ನತೊಡಗಿದ.ಎರಡನೆಯವನು ಸಹ ಹಣ್ಣುಗಳನ್ನು ತಿನ್ನತೊಡಗಿದ.

  • ಹಸಿವನ್ನು ತಾಳಲಾರದೆ ಮೂರನೆಯವನು ಸಹ ತನ್ನ ಚೀಲದಲ್ಲಿರುವ ಹುಲ್ಲನ್ನು ತಿನ್ನತೊಡಗಿದ.ತಾನು ತಿಂದ ಹುಲ್ಲನ್ನು ಅರಗಿಸಿಕೊಳ್ಳಲಾಗದೆ ಮೂರು ದಿನಗಳನಂತರ ಮೂರನೆಯನು ಮರಣಿಸಿದ.
  • ಹಾಳಾದ ಹಣ್ಣುಗಳನ್ನು ತಿಂದ ಎರಡನೆಯವನು ಅನಾರೋಗ್ಯದಿಂದ ಒಂದು ತಿಂಗಳ ನಂತರ ಮರಣಿಸಿದ.
  • ಮೂರನೆಯವನು ಮಾತ್ರ ಮೂರು ತಿಂಗಳ ನಂತರ ಮತ್ತಷ್ಟು ಕಾಂತಿಯುತವಾಗಿ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದ.

Click Here To Download Kannada AP2TG App From PlayStore!

Share this post

scroll to top