ಸಿನಿಮಾ ನಿರ್ಮಾಪಕನ ಜತೆ ಓಡಿಹೋದ ಎಂಎಲ್‍ಎ ಮಗಳು.! ಪೊಲೀಸರು ದೌಡು..ಕೊನೆಗೆ ಏನಾಯಿತು.?

ಹೆಲಿಕಾಪ್ಟರ್ ಮೂಲಕ ಇಬ್ಬರು ವಿಲನ್‌ಗಳು ಕೆರೆಗೆ ಬಿದ್ದು ಜಲಸಮಾಧಿಯಾದ ಕನ್ನಡ ಸಿನಿಮಾ ಮಾಸ್ತಿಗುಡಿ ನೆನಪಿದೆಯಲ್ಲವೇ.. ಆ ಸಿನಿಮಾ ನಿರ್ಮಾಪಕ ಸುಂದರ್ ಪಿ ಗೌಡ. ಅವರ ಮದುವೆ ಸಹ ಸಿನಿಮೀಯ ರೀತಿಯಲ್ಲಿ ನಡೆದಿದೆ. ರಾಜಕೀಯ ಮುಖಂಡರ ಮಗಳನ್ನು ಪ್ರೀತಿಸಿ, ಮರ್ಯಾದೆಗಾಗಿ ಒದ್ದಾಡುತ್ತಾ, ಪೊಲೀಸರನ್ನು ಇವರ ಹಿಂದೆ ಬಿಟ್ಟರೂ ಫಲಿತಾಂಶ ಇಲ್ಲದಂತಾಗಿದೆ. ಅದಾಗಲೆ ಯುವತಿ ಸುಂದರ್ ಕೈಲಿ ತಾಳಿಕಟ್ಟಿಸಿಕೊಂಡಿದ್ದಳು. ಆ ವಿವರಗಳು..

ದಾವಣಗೆರೆ ಜಿಲ್ಲೆಯ ಮಾಯಕೊಂಡ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯಕ್‌ಗೆ ಲಕ್ಷ್ಮಿ ನಾಯಕ್ ಎಂಬ ಮಗಳಿದ್ದಾರೆ. ಎರಡು ದಿನಗಳಿಂದ ತನ್ನ ಮಗಳು ಕಾಣೆಯಾಗಿದ್ದಾರೆ ಎಂದು ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸುಂದರ್ ಪಿ ಗೌಡ, ಲಕ್ಷ್ಮಿ ನಾಯಕ್ ಪ್ರೀತಿಸಿಕೊಳ್ಳುತ್ತಿದ್ದಾರೆ ಎಂಬುದು ಮಾಹಿತಿ. ಸುಂದರ್ ಪಿ ಗೌಡನನ್ನು ಮದುವೆಯಾಗುತ್ತೇನೆಂದು ಲಕ್ಷ್ಮಿನಾಯಕ್ ತಂದೆ ಶಿವಮೂರ್ತಿ ನಾಯಕ್‌ಗೆ ಹೇಳಿದರೆ… ಬೇರೆ ಜಾತಿಯವರನ್ನು ಮದುವೆಯಾಗುವುದು ತನಗಿಷ್ಟವಿಲ್ಲವೆಂದು ಮಗಳ ಮೇಲೆ ಗರಂ ಆದರಂತೆ. ಅಷ್ಟೇ ಅಲ್ಲದೆ ಮಗಳಿಗೆ ಇಷ್ಟವಿಲ್ಲದಿದ್ದರೂ ತಮ್ಮದೇ ಜಾತಿಯ ಇನ್ನೊಬ್ಬ ವ್ಯಕ್ತಿಯ ಜತೆಗೆ ಮಗಳ ಮದುವೆ ನಿಶ್ಚಯಿಸಿದ್ದರಂತೆ. ಇನ್ನು ತಡ ಮಾಡಿದರೆ ಪ್ರಯೋಜನವಿಲ್ಲ ಎಂದು ಮನೆಯಿಂದ ಓಡಿ ಹೋದ ಲಕ್ಷ್ಮಿ ತಾನು ಇಷ್ಟಪಟ್ಟವನನ್ನು ವರಿಸಿದ್ದಾಳೆ.

ಮನೆಯಿಂದ ಹೋಗುವ ಮುನ್ನ ತಾನು ಪ್ರೀತಿಸಿರುವ ಸಿನಿಮಾ ನಿರ್ಮಾಪಕ ಸುಂದರ್ ಪಿ ಗೌಡರನ್ನು ಮದುವೆಯಾಗುತ್ತೇನೆಂದು, ಮನೆಯಲ್ಲಿ ನೋಡಿರುವ ಸಂಬಂಧವನ್ನು ತಾನು ಆಗಲ್ಲ ಎಂದು ಲಕ್ಷ್ಮಿ ನಾಯಕ್ ಆಕೆಯ ಸ್ನೇಹಿತರಿಗೆ ಹೇಳಿದ್ದರು ಎಂದು ಪೊಲೀಸ್ ವಿಚಾರಣೆಯಲ್ಲಿ ಗೊತ್ತಾಗಿದೆ. ತನ್ನ ಮಗಳು ಕಾಣಿಸುತ್ತಿಲ್ಲ ಎಂದು ಹೇಳಿದ್ದರೆ ಹೊರತು ಅವರ ಪ್ರೇಮ ವ್ಯವಹಾರದ ಬಗ್ಗೆ ಮುಖಂಡರು ಏನೂ ಹೇಳಿರಲಿಲ್ಲವಂತೆ. ಕಡೆಗೆ ಪೊಲೀಸರೆ ವಿಷಯ ತಿಳಿದುಕೊಂಡು ಅವರೆಲ್ಲಿದ್ದಾರೋ ತಿಳಿದುಕೊಂಡು ಹೋಗುವ ವೇಳೆ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾಗಿ ಅಲ್ಲಿಂದ ಮಾಯವಾಗಿದ್ದರು ಲಕ್ಷ್ಮಿ, ನಿರ್ಮಾಪಕ..


Click Here To Download Kannada AP2TG App From PlayStore!